ಸಂತ ಫಿಲೋಮಿನಾ ಕಾಲೇಜಿನ ಕಂಪ್ಯೂಟರ್‌ ಸಯನ್ಸ್‌ ವಿಭಾಗದಿಂದ ವಿಶನ್‌2K26 ಆಯೋಜನೆ

Upayuktha
0

 


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್‌ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಶನ್‌2K26 ಐಟಿ ಫೆಸ್ಟ್‌ಅನ್ನು ಆಯೋಜಿಸಲಾಯಿತು.


ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆಗೃದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಕಾಲೇಜಿನಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಎಲ್ಲಾ ಕಾರ್ಯಕ್ರಮಗಳೂ ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತವೆ ಆದರೆ ಔದ್ಯೋಗಿಕ ಜಗತ್ತಿಗೆ ಕಾಲಿರಿಸಿದಾಗ ನಿಮ್ಮ ಮುಂದೆ ಡೆಡ್‌ಲೈನ್‌ ಅಥವಾ ಗಡುವು ಮಾತ್ರವೇ ಇರುತ್ತದೆ. ಗಡುವು ಮೀರದಂತೆ ಕತ್ರವ್ಯ ನಿರ್ವಹಿಸಲು ಶಿಸ್ತು ಹಾಗೂ ಸಮಯಪರಿಪಾಲನೆ ಅತ್ಯಂತ ಮುಖ್ಯವಾಗಿರುತ್ತವೆ. ಒಂದು ಕೆಲಸವನ್ನು ನಿರ್ದಿಷ್ಟ ಸಮಯದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಡುವಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ “ ಎಂದು ಹೇಳಿದರು. 


ಕಾಲೇಜಿನ ಗಣಗವಿಜ್ಞಾನ ವಿಭಾಗದ ಡೀನ್‌ ಡಾ| ವಿನಯಚಂದ್ರರವರು “ಕಾಲೇಜಿನಲ್ಲಿ 2012ರಿಂದ ವಿಶನ್‌ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ಅನ್ನು ಆಯೋಜಿಸಲಾಗುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಪಠ್ಯ ಅಧ್ಯಯನದ ಜೊತೆಗೆ ತಮ್ಮ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದೆ. ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆಯುವ ವಿಷನ್‌ ಕಾರ್ಯಕ್ರಮವು ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ಹಾಗೂ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸುವ ಸಕ್ರಿಯ ವೇದಿಕೆಯಾಗಿದೆ. ವಿಶನ್‌ ಸ್ಪರ್ಧೆಗಳ ಘೋಷಣೆ ಆಗುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗುತ್ತದೆ. ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸ್ಪರ್ಧಾತ್ಮಕ ಮನೋಭಾವ, ಆತ್ಮವಿಶ್ವಾಸ ಮತ್ತು ತಂಡಸ್ಪೂರ್ತಿ ಬೆಳೆದು ಬರುತ್ತವೆ” ಎಂದು ಹೇಳಿದರು.


ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಪಿನ್ಯಾಕಲ್‌ ಐಟಿ ಕ್ಲಬ್‌ ನ ಅಧ್ಯಕ್ಷ ಯೂಸುಫ್‌ ಅಲಿ ಸಲೀಲ್‌ ಸ್ವಾಗತಿಸಿದರು.


ಉಪಾಧ್ಯಕ್ಷೆ ದೀಕ್ಷಾ ವಂದಿಸಿದರು. ದ್ವಿತೀಯ ಬಿಸಿಎ (ಎಐ & ಎಂಲ್‌) ವಿದ್ಯಾರ್ಥಿನಿ ಶೀತಲ್‌ ಕಾರ್ಯಕ್ರಮ ನಿರೂಪಿಸಿದರು.


ಪಿನ್ಯಾಕಲ್‌ ಐಟಿ ಕ್ಲಬ್‌ನ ಕಾರ್ಯದರ್ಶಿ ತೀಕ್ಷಣ್‌, ತೃತೀಯ ಬಿಸಿಎ ವಿದ್ಯಾರ್ಥಿನಿ ಸೃಜನಾ ಹಾಗೂ ಪ್ರಥಮ ಬಿಸಿಎ ವಿದ್ಯಾರ್ಥಿನಿ ಪ್ರತ್ಯಕ್ಷಾ ಸಹಕಾರ ನೀಡಿದರು. ಕೆ-ಸೆಟ್‌ ಮತ್ತು ಎನ್‌ ಇ ಟಿ ಪರೀಕ್ಷೆಗಳಲ್ಲಿ ಅರ್ಹತೆಯನ್ನು ಪಡೆದ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಫಾತಿಮತ್‌ ಸಾನಿದ ಹಾಗೂ ಸಮೀದರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಡಾ| ಗೀತಾ ಪೂರ್ಣಿಮಾ ಕೆ ಸನ್ಮಾನ ಭಾಷಣ ಮಾಡಿದರು.


ವಿಶನ್‌2K26ನಲ್ಲಿ ಒಟ್ಟು 15 ಸ್ಪರ್ಧೆಗಳಿದ್ದು ಹಲವು ಸ್ಪರ್ಧೆಗಳ ಅರ್ಹತಾ ಸುತ್ತುಗಳನ್ನು ಈಗಾಗಲೇ ನಡೆಸಲಾಗಿದ್ದು ಅಂತಿಮ ಸುತ್ತುಗಳನ್ನು ಈ ದಿನ ನಡೆಸಲಾಯಿತು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top