ಪುತ್ತೂರಿನಲ್ಲಿ ವಸಂತ ವೇದ ಪಾಠಶಾಲೆ: ಒಂದು ತಿಂಗಳ ವಿಶೇಷ ತರಬೇತಿ ಶಿಬಿರ

Upayuktha
0


ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇದ ಸಂವರ್ಧನ ಪ್ರತಿಷ್ಠಾನ, ಪುತ್ತೂರು ವತಿಯಿಂದ ಋಗ್ವೇದ ಹಾಗೂ ಯಜುರ್ವೇದ ವಿದ್ಯಾರ್ಥಿಗಳಿಗಾಗಿ “ವಸಂತ ವೇದ ಪಾಠಶಾಲೆ” ಎಂಬ ಒಂದು ತಿಂಗಳ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.


ಈ ತರಬೇತಿ ಶಿಬಿರವು 2026ರ ಏಪ್ರಿಲ್ 22ರಂದು (ಬುಧವಾರ) ಆರಂಭಗೊಂಡು ಮೇ 24ರಂದು (ಭಾನುವಾರ) ತನಕ ನಡೆಯಲಿದೆ. ಶಿಬಿರದಲ್ಲಿ ನಿತ್ಯಾನುಷ್ಠಾನ, ರುದ್ರಾದಿ ಸೂಕ್ತ ಮಂತ್ರಗಳು ಹಾಗೂ ಪೂಜಾ ವಿಧಾನಗಳು ಎಂಬ ಮೂರು ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುವುದು.


ಪ್ರಾಚಾರ್ಯರಾದ ವೇ.ಮೂ. ಶ್ರೀ ಬಡಜ ಜಯರಾಮ ಜೋಯಿಸರು ಹಾಗೂ ಸಂಸ್ಕೃತ ವಿದ್ವಾಂಸರಾದ ವೇ.ಮೂ. ಶ್ರೀ ಮಂಜುಳಗಿರಿ ವೆಂಕಟರಮಣ ಭಟ್ (ನಿವೃತ್ತ ಮುಖ್ಯ ಗುರುಗಳು) ಅವರ ಮಾರ್ಗದರ್ಶನದಲ್ಲಿ ಹಾಗೂ ಇತರ ವೇದ ವಿದ್ವಾಂಸರ ಸಹಕಾರದಿಂದ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ.


ಈ ಶಿಬಿರದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಶಿಸ್ತುಬದ್ಧವಾಗಿ ನಡೆಸುವ ಯೋಜನೆ ರೂಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಶೀಘ್ರದಲ್ಲೇ ವಾಟ್ಸಪ್ ಗುಂಪಿನ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಪ್ರತಿಷ್ಠಾನವು ವಿನಂತಿಸಿದೆ. ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರು ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸಲಿದ್ದಾರೆ ಎಂದು ತಿಳಿಸಲಾಗಿದೆ.


ಯಜುರ್ವೇದಿಗಳಿಗಷ್ಟೇ ಸೀಮಿತವಾಗದೆ, ಎರಡನೇ ತರಗತಿಯ ವಿಭಾಗದಲ್ಲಿ ಋಗ್ವೇದ ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶವಿದೆ. ಮೂರನೇ ತರಗತಿಯಲ್ಲಿ ವಯಸ್ಕರಿಗೂ ಸೇರ್ಪಡೆಯ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನದ ನಂತರ ನಡೆಯುವ ಈ ತರಗತಿಯಲ್ಲಿ ಶಿವಪೂಜೆ, ಗಣಪತಿ ಹೋಮ, ನಿತ್ಯಪೂಜೆ ಹಾಗೂ ವಿವಿಧ ಮುದ್ರೆಗಳು ಮತ್ತು ಕ್ರಮಗಳ ಅಭ್ಯಾಸ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ.


ವೇದ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ಯಂ.ಟಿ. ಜಯರಾಮ ಭಟ್ ಅವರು ಹೆಚ್ಚಿನ ಮಾಹಿತಿಗಾಗಿ 9448445827, 9449386677 ಹಾಗೂ 9380940675 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top