ಉಜಿರೆ: ರಾಗದ್ವೇಷಗಳು ತುಂಬಿದಲ್ಲಿ ಪ್ರೀತಿ ದಾರಿತಪ್ಪುತ್ತದೆ. ಅದನ್ನು ಮೀರಿದಾಗ ಮಾತ್ರ ನಾವು ಆದರ್ಶ ಬದುಕಿನಿಂದ ಬಾಳಬಹುದು ಎಂದು ಒಡಿಯೂರಿನ ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀಜನಾರ್ದನ ಸ್ವಾಮಿಜಿಯು ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರದಂದು ಸುದರ್ಶನ ಸಭಾಭವನದಲ್ಲಿ ನಡೆಯಿತು.
ವಿಶ್ವಾಸ ಮತ್ತು ಆತ್ಮವಿಶ್ವಾಸ ಎರಡೂ ಕರಾವಳಿ ಜನರ ಸಾಧನವಾಗಿದೆ. ವರ್ತಮಾನದಲ್ಲಿ ನಮ್ಮ ನಿರ್ಧಾರಗಳಲ್ಲಿ ನಾವು ಗಟ್ಟಿಯಾಗಿ ನಿಂತರೆ ಭವಿಷ್ಯದಲ್ಲಿ ನಾವು ಯೋಚಿಸಿದ ಹಾಗೆ ಆಗುತ್ತದೆ. ರಾಜನಂತೆ ಬದುಕು ಸನ್ಯಾಸಿಯಂತೆ ಯೋಚಿಸಬೇಕಾದರೆ ಯಾಕೆಂದರೆ ಸನ್ಯಾಸಿಯಂತೆ ತ್ಯಾಗ ಮಾಡಲು ಅವನಿಗೆ ಗೊತ್ತಿದ್ದರೆ ಅವನು ಎಲ್ಲಿದ್ದರೂ ರಾಜನಂತೆ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವದ ಸಮಿತಿಯ ಕಾರ್ಯಾಧ್ಯಕ್ಷರಾದ ಶಶಿಧರ ಶೆಟ್ಟಿ, ನವಶಕ್ತಿ, ಬರೋಡ ಮಾತಾನಾಡಿದರು. ಸಮಯ ಸಿಕ್ಕಾಗಲೆಲ್ಲಾ ದೇವರ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆವಾಗಲೇ ಮನುಷ್ಯ ದೇವರ ಭಕ್ತಿಯಲ್ಲಿ ಲೀನವಾಗುವುದು.
ದೇವರು ತಮ್ಮಕೆಲಸಗಳನ್ನು ಯಾರು ನಿರ್ವಹಿಸಬೇಕು ಎಂದು ನಿರ್ಧರಿಸಿದರೆ ಅದು ಸಂಪೂರ್ಣವಾಗಿ ನೆರವೇರುತ್ತದೆ. ಇನ್ನು ದೇವರೇ ತಮ್ಮಿಂದ ಸೇವೆ ಮಾಡಿಸಿಕೊಳ್ಳಲು ಇಚ್ಚಿಸಿದರೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂ ಸೇವಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್‍ರು ಮಾತನಾಡಿ, ಜಗತ್ತಿಗೆ ಶಾಲೆಬೇಕು ಎಂದು ಎಲ್ಲರೂ ಭಯಸುತ್ತಾರೆ ಆದರೆ ಎಲ್ಲರೂ ಸುಖ ವಾಗಿರಬೇಕು ಎಂದು ಯಾರೂ ಸಹಭಯಸುವುದಿಲ್ಲ. ಭಾರತ ಎಲ್ಲರನ್ನು ಒಂದೇ ಮನಸ್ಸಿನಲ್ಲಿಎಲ್ಲರೂ ಒಂದೇ ಎಂಬ ತತ್ವದಿಂದ ಸ್ವೀಕರಿಸಿದೆ.
ಜಾತಿಯನ್ನು ದಾಟಿಗುಣದಿಂದ ಮೇಲೆ ಬರುವ ಹಾಗೆ ಸಂಕಲ್ಪ ಮಾಡಬೇಕು ಮತ್ತು ಸಾಮಥ್ರ್ಯದಿಂದ ಬಾಳಬೇಕು. ಜಾತಿಯನ್ನು ಪರಿಗಣಿಸದೆ ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆಯಲ್ಲಿ ಬದುಕಿದರೆ ಮಾತ್ರ ಜೀವನ ಆಶಾವಾದಿಯ ಮತ್ತು ಸಮಾನತೆಯ ಹಾದಿಯತ್ತ ರೂಪಿಸುತ್ತದೆ ಎಂದು ಹೇಳಿದರು.
ಭಗವದ್ಗೀತೆಯನ್ನುಎಲ್ಲರ ಮನೆಯಲ್ಲಿಇಡುವ ಸಂಕಲ್ಪ ಮಾಡಬೇಕು. ಮನೆಮಂದಿಯಲ್ಲಒಟ್ಟಿಗೆ ಕೂತು ಶ್ಲೋಕ, ರಾಮಾಯಣ ಮತ್ತು ಮಹಾಭಾರತದ ಸುದೀರ್ಘ ಸಂವಾದವನ್ನು ಮಾಡಬೇಕು ಮತ್ತು ಅದರ ಜೊತೆಗೆ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಮಾತ್ರ ಧಾರ್ಮಿಕತೆಯ ಬಗೆಗೆ ಎಲ್ಲರಿಗೂ ಅರಿವು ಮೂಡುವುದು.
ಜಗತ್ತಿನ ಇತಿಹಾಸದಲ್ಲಿ ಭರತನಾಗಿ ಯಾರೂ ಹುಟ್ಟಲು ಸಾಧ್ಯವಿಲ್ಲ. ಭರತನ ಗುಣಗಳು ಎಲ್ಲರಿಗೂ ತಿಳಿಯಬೇಕು. ರಾಮಾಯಣದ ಒಂದೊಂದು ಘಟನೆ ಒಂದೊಂದು ವಿಶೇಷತೆಗಳನ್ನು ತಿಳಿಸುತ್ತದೆ. ಈ ದೇಶದಲ್ಲಿ ಕಲಿಸಬೇಕಾದದ್ದು ತುಂಬಾ ಇದೆ. ಈ ಕಲಿಕೆಯು ಮನೆಯಿಂದಲೇ ಶುರುವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕಸಭೆಯ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತಾನಾಡಿ, ಯಾವಾಗ ಯುದ್ಧ ಆಗುತ್ತದೆ ಎಂಬುದರ ಪರಿಕಲ್ಪನೆಯ ಬಗೆಗೆ ನಮಗೆ ಅರಿವಿರಬೇಕು. ಆವಾಗಲೇ ಹಿಂದೂ, ಪರಂಪರೆ, ದೇವಾಲಯಗಳು, ಮತ್ತು ಸಂಸ್ಕೃತಿಯನ್ನುವುದು ಜಾಗೃತವಾಗಿ ಇರುತ್ತದೆ. ಈ ನೆಲದಲ್ಲಿ ಹುಟ್ಟಿದ ಜನಜೀವನ ಜಗತ್ತಿಗೆ ಸಹಬಾಳ್ವೆಯನ್ನು ನೀಡುತ್ತದೆ ಎಂದು ಸರ್ವಜರು ಹೇಳಿದ್ದಾರೆ ಎಂದರೆ ಇಂದು ನಮ್ಮ ಭಾರತ ಸಾಕ್ಷಿಯಾಗಿ ನಿಂತಿದೆ.
ಮಧ್ಯಪ್ರಾಚ್ಯದೇಶದಲ್ಲಿ ಈ ಪ್ರದೇಶದಲ್ಲಿರುವ ತುಂಬಾ ಜನರು ಬದುಕು ಕಟ್ಟಿಕೊಳ್ಳಲು ಅಲ್ಲಿ ನೆಲೆಸಿದ್ದಾರೆ ಆದರೆ ಇವಾಗ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲರ ಮನದಲ್ಲೂ ಶಾಂತಿಯ ಕಹಳೆಮೊಳಗಲಿ, ಮತ್ತು ಯುದ್ಧ ಮಾಡುತ್ತಿರುವವರಿಗು ಸಮೃದ್ಧಿಯನ್ನು ಕೊಡಲಿ ಎಂದು ಹೇಳಿದರು.
1200 ಕ್ಕಿಂತಲೂ ಹೆಚ್ಚಿನ ದೇವಾಲಯಗಳು ದಕ್ಷಿಣ ಕನ್ನಡ ವಿಧಾನ ಸಭಾಕ್ಷೇತ್ರದ ಅಡಿಯಲ್ಲಿದೆ. ತಮ್ಮ ನಡೆನುಡಿಗಳಿಂದಲೇ ಈ ಭಾಗದ ಸಂಸ್ಕೃತಿಕ ಪರಂಪರೆಯಿಂದ ತಮ್ಮನ್ನುತಾವು ಗುರುತಿಸಿಕೊಂಡಿದ್ದಾರೆ. ಭಕ್ತಿಶ್ರದ್ಧೆ ನಿಷ್ಠೆಗೆ ಇಲ್ಲಿ ಕೊರತೆ ಇಲ್ಲ ಈ ಭಾಗದವರು ವಿಶಿಷ್ಟವಾದ ಸಂಸ್ಕೃತಿ ಆಚಾರವನ್ನು ಉಳಿಸಿ ಬೆಳೆಸಿ ಬರುತ್ತಿದ್ದೇವೆ.
ಜಾತಿ ಅಸ್ಪಶ್ಯತೆಯ ಸಮಸ್ಯೆಯಿಂದ ಈಗಾಗಲೇ ಮುಂದೆ ಬಂದಿದ್ದೇವೆ. ಆದರ್ಶವಾದ ಸಮಾಜದತ್ತ ದಕ್ಷಿಣ ಕನ್ನಡ ಜಿಲ್ಲೆ ಸಾಗುತ್ತಾ ಮುಂದೆ ಬಂದಿದೆ. ಸೌಹಾರ್ದದಿಂದ ಬ್ರಹ್ಮ ಕಲಶೋತ್ಸವ ಮತ್ತು ದೇವಾಲಯದ ಇತರ ಒಳ್ಳೆಯ ಕೆಲಸ ಕಾರ್ಯವನ್ನು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಬರುತ್ತಾ ಇದೆ.
ನಾಗರಿಕ ಶಿಷ್ಟಾಚಾರದ ಬದುಕನ್ನು ಬದುಕಬೇಕು ಇದರಿಂದ ಭಾರತವು ಬೇರೆ ದೇಶಗಳಿಂದ ವಿಭಿನ್ನವಾಗಿ ಕಾಣುತ್ತದೆ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವುದರಿಂದ ದೇಶದ ಶ್ರೇಷ್ಠ ದೃಷ್ಟಿಯನ್ನು ಜಗತ್ತಿಗೆ ತೋರಿಸಬಹುದು. ಇಂತಹ ದೇವಸ್ಥಾನಗಳಿಂದ ಕರಾವಳಿಯು ಉತ್ತಮ ಪ್ರವಾಸಿ ಕೇಂದ್ರವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಮ್ಮನರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ, ಒಬ್ಬ ಮನುಷ್ಯನಿಗೆ ಉಪಕಾರವಾರ ಬುದ್ಧಿಇರಬೇಕು. ಆಗ ಮಾತ್ರ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸು ಮತ್ತು ಗುಣ ಎಲ್ಲವೂ ಬರುತ್ತದೆ. ನಮ್ಮ ಮನಸ್ಸು ಶುದ್ಧವಾಗಿದ್ದರೆ ನಮ್ಮ ಮಾತು ಸಹ ಸ್ವಷ್ಟವಾಗಿರುತ್ತದೆ. ದೇವರಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ದೇವಸ್ಥಾನದ ವಿನ್ಯಾಸ, ರಥ, ರಾಜಗೋಪುರವನ್ನು ನಿರ್ಮಿಸಿರುವುದರಿಂದ ಉಜಿರೆಯ ಜನರು ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಕೈಗಾರಿಕೋದ್ಯಮಿ ರಾಮದಾಸ ಮಣ್ಣಾಯ ಮಾತನಾಡಿ, ಸಾಧನೆ ಮಾಡಬೇಕಾದರೆ ಕೆಲವೊಂದು ವಿಷಯಗಳ ಬಗೆಗೆ ತಂದೆ ತಾಯಿಗಳು ಹೇಳಿಕೊಟ್ಟು, ಪರಿಸರದಿಂದ ಕಲಿತು, ಕಠಿಣವಾದ ನಿರ್ಣಯವಾಗುತ್ತ ತಗೊಂಡು ಹೋದಾಗ ಸಾಧನೆ ಮಾಡುವುದಕ್ಕೆ ಸಾ ಧ್ಯ ಎಂದು ತಮ್ಮ ಸ್ವಂತ ಅನುಭವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ. ಪ್ರತಾಪಸಿಂಹ ನಾಯಕ್, ಕೆ.ಕೃಷ್ಣ ಸಂಪಿಗೆತ್ತಾಯ, ಜಯಂತಶೆಟ್ಟಿ, ರಾಜಪ್ರಸಾದರಾವ್, ಆನಂದ ಆಚಾರ್ಯ, ಬಾಬುಮೊಗೇರ, ಪುಷ್ಪ ಆರ್ ಶೆಟ್ಟಿ, ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಜಿರೆಯ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಎಕುಮಾರ ಹೆಗ್ಡೆ ನಿರೂಪಿಸಿದರು. ಬೆಂಗಳೂರು ಸಮಿತಿಯ ಸಂಚಾಲಕರಾದ ಮಂಜುನಾಥ ಕನ್ಯಾಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪಿಡಿಒ ಮತ್ತು ಉಪಾಧ್ಯಕ್ಷರಾದ ಪ್ರಕಾಶ ಶೆಟ್ಟಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


