ಉಜಿರೆಯಲ್ಲಿ ಶಾಸ್ತೀಯ ಸಂಗೀತದ ರಸದೌತಣ

Upayuktha
0


ಉಜಿರೆ: ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ, ಸಂಸ್ಕೃತಿ ಹಾಗೂ ಸಂಗೀತದ ಸುಂದರ ಸಂಯೋಜನೆಯಾಗಿ ಪ್ರೇಕ್ಷಕರ ಮನಸ್ಸನ್ನು ಸೆಳೆಯುವಂತೆ ನಡೆಯಿತು. ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಆಯೋಜಿಸಲಾದ ಸಂಗೀತ ಕಾರ್ಯಕ್ರಮ ಭಕ್ತರಿಗೂ ಸಂಗೀತಾಸಕ್ತರಿಗೂ ಒಂದು ವಿಶಿಷ್ಟ ಅನುಭವವನ್ನು ನೀಡಿದವು. 


ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ವಿದುಷಿ ಕೆ.ಆರ್. ಶಾಂತಾ ಹಾಗೂ ಅವರ ಬಳಗದವರಿಂದ ಭಕ್ತಿಮಯ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಅವರ ಗಾಯನದಲ್ಲಿ ಶಾಸ್ತ್ರೀಯ ಸಂಗೀತದ ಸೌಂದರ್ಯ ಹಾಗೂ ಭಕ್ತಿಭಾವದ ಆಳವನ್ನು ಒಂದೇ ವೇಳೆ ಅನುಭವಿಸಲು ಸಾಧ್ಯವಾಯಿತು. 


ಕಾರ್ಯಕ್ರಮದ ಆರಂಭವನ್ನು ಗಾಯಕ ದೈವಿಕ ರಾಜ ಅವರು ಹಂಸದ್ವನಿ ರಾಗದಲ್ಲಿ ರಚಿತವಾದ ಪಾರ್ವತಿ ಪತಿಮಾ ಪ್ರಣಮ್ಯ ಸತತಂ ಕೃತಿಯ ಮೂಲಕ ಮಾಡಿದರು. ಅವರ ಸ್ವರಮಾಧುರ್ಯ ಹಾಗೂ ಭಾವಪೂರ್ಣ ಗಾಯನ ಕಾರ್ಯಕ್ರಮಕ್ಕೆ ಒಂದು ಶುಭಾರಂಭವನ್ನು ನೀಡಿತು. ಶುದ್ಧ ಧನ್ಯಾಪಿ ರಾಗದಲ್ಲಿ ಹಿಮಗಿರಿ, ಬೃಂದಾವನ ಸಾರಂಗ ರಾಗದಲ್ಲಿ ಇಳುನೋಡೆ ಹಾಗೂ ಸಿಂಧೂ ಭೈರವಿ ರಾಗದಲ್ಲಿ ಕನಕದಾಸರ ಭಕ್ತಿಗೀತೆಯಾದ ರೂಪವ ಎನಗೂ ತೋರಿಸೋ ಶ್ರೀಕೃಷ್ಣ ಎಂಬ ಕೃತಿಗಳನ್ನು ಹಾಡುವ ಮೂಲಕ ಶ್ರೀಕೃಷ್ಣನ ಭಕ್ತಿಭಾವವನ್ನು ತುಂಬಿ ಹರಿಸಿದರು. ಈ ಕೃತಿಗಳಲ್ಲಿ ಕಾಣಿಸಿಕೊಂಡ ಭಾವಭರಿತ ಗಾಯನ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದು, ಕಾರ್ಯಕ್ರಮದ ವಾತಾವರಣವನ್ನು ಭಕ್ತಿಮಯವಾಗಿ ರೂಪಿಸಿತು. ಕಾರ್ಯಕ್ರಮದಲ್ಲಿ ಮಂಗಳ ಗೌರಿ ಅವರು ವಿನಾಯಕನನ್ನು ಸ್ಮರಿಸುವ ಭಕ್ತಿಗೀತೆಯೊಂದಿಗೆ ತಮ್ಮ ಸಂಗೀತ ಪ್ರಸ್ತುತಿಯನ್ನು ಆರಂಭಿಸಿದರು. ಅವರ ಗಾಯನದಲ್ಲಿ ಕಾಣಿಸಿಕೊಂಡ ಸರಳತೆ ಹಾಗೂ ಭಾವಪೂರ್ಣತೆ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು. 


ಇದೇ ಸಂದರ್ಭದಲ್ಲಿ ಸ್ಪೂರ್ತಿ ಡಿ.ಎಸ್. ಹಾಗೂ ಸ್ಪರ್ಶ ಡಿ.ಎಸ್. ಅವರು ಏಕತಾಳ ಭಜನೆಯ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಅವರ ಸಮನ್ವಯದ ಗಾಯನ ಹಾಗೂ ಲಯಬದ್ಧ ಪ್ರಸ್ತುತಿ ಎಲ್ಲರ ಗಮನ ಸೆಳೆಯಿತು. ಅದೇ ರೀತಿ ಇಂಚರ ಕಾರಂತ್ ಅವರು ಆದಿತಾಳದಲ್ಲಿ ಭಜನೆ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅವರ ಗಾಯನದಲ್ಲಿ ಕಂಡುಬಂದ ಲಯ ಹಾಗೂ ಭಕ್ತಿಭಾವ ಕಾರ್ಯಕ್ರಮದ ಸೊಗಸನ್ನು ಹೆಚ್ಚಿಸಿತು. ಮುಂದುವರೆದಂತೆ ಶಾಂಭವಿ, ಸ್ಮಿತಾ ಹಾಗೂ ಸ್ವಾತಿ ಅವರು ಆದಿತಾಳದಲ್ಲಿ ಮೋಹನ ರಾಗ, ಸಿಂಧು ಭೈರವಿ ರಾಗ ಹಾಗೂ ರೂಪಕ ತಾಳದಲ್ಲಿ ಶ್ರೀ ರಾಗವನ್ನು ಪ್ರಸ್ತುತಪಡಿಸಿದರು. ಇವರ ಗಾಯನದಲ್ಲಿ ಶಾಸ್ತ್ರೀಯ ಸಂಗೀತದ ಸೂಕ್ಷ್ಮತೆಗಳು ಸ್ಪಷ್ಟವಾಗಿ ವ್ಯಕ್ತವಾಗಿದ್ದು, ಶ್ರೋತೃಗಳಿಗೆ ಸಂಗೀತದ ರಸದೌತಣವನ್ನು ನೀಡಿತು.


ಕಾರ್ಯಕ್ರಮದ ಯಶಸ್ಸಿಗೆ ಹಿನ್ನೆಲೆ ವಾದಕರ ಸಹಕಾರವೂ ಮಹತ್ತರವಾಗಿತ್ತು. ವಯಲಿನ್‍ನಲ್ಲಿ ಕೆ.ಆರ್. ಶಾಂತಾ ಹಾಗೂ ಗುರುರಾಜ್ ಅವರು ಸ್ವರಸೌಂದರ್ಯವನ್ನು ಹೆಚ್ಚಿಸಿದರೆ, ಮೃದಂಗದಲ್ಲಿ ಕೇಶವ ಭಟ್ ಅವರು ಲಯಬದ್ಧವಾಗಿ ತಾಳ ಹಿಡಿದು ಗಾಯನಕ್ಕೆ ಸೂಕ್ತ ಜೊತೆ ನೀಡಿದರು. ಅವರ ವಾದನ ಕಾರ್ಯಕ್ರಮದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿತು. ಒಟ್ಟಾರೆ ಈ ಸಂಗೀತ ಕಾರ್ಯಕ್ರಮವು ಭಕ್ತಿಭಾವ, ಶಾಸ್ತ್ರೀಯ ಸಂಗೀತದ ಮಧುರತೆ ಹಾಗೂ ಕಲಾವಿದರ ಪ್ರತಿಭೆಯ ಸುಂದರ ಸಂಯೋಜನೆಯಾಗಿ ಮೂಡಿಬಂದಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಲಾದ ಈ ಸಾಂಸ್ಕೃತಿಕ ಕಾರ್ಯಕ್ರಮವು ಉಜಿರೆಯ ಜನರಿಗೆ ಮತ್ತು ಭಕ್ತರಿಗೆ ಮನಮೆಚ್ಚುವ ಸಂಗೀತಾನುಭವವನ್ನು ನೀಡಿದುದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯಪಟ್ಟರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top