ಕಥೆ: ವಿಶ್ವಾಸ

Upayuktha
1


ಮುಂಜಾನೆ ವಾಕ್ ಗೆ ದಿನನಿತ್ಯ ಹೋಗುತ್ತಿದ್ದ ಅವನಿಗೆ. ಪಾರ್ಕ್ ನಲ್ಲಿ ಅವಳ ಪರಿಚಯ. ಮುಗುಳ್ನಗೆ ವಿತರಣೆಯಿಂದ ತೊಡಗಿ ನಿತ್ಯ “good morning” “byebye” “ಎಷ್ಟು ಸುತ್ತು ಇವತ್ತು ನಿಮ್ಮದು” ಎಂದೆಲ್ಲ ಮಾತುಗಳ ವಿನಿಮಯ ತೊಡಗಿ ಒಂದು ವಾರ ಆಗುವಷ್ಟರಲ್ಲಿ, ಒಂದು ದಿನ ಇಬ್ಬರೂ ಒಂದೇ ಸಮಯಕ್ಕೆ ಬಂದರು. ಯಾವತ್ತೂ ಅವನು ಬೇಗ ಬರುತ್ತಿದ್ದ ಇವತ್ತು ಅವಳೂ ಬೇಗ ಬಂದಂತೆ ಇತ್ತು.


ಜೊತೆಯಲ್ಲಿ ಒಡ ತೊಡಗಿದ ಅವರಿಗೆ ಯಾವತ್ತಿಂದ ಒಂದೆರಡು ಸುತ್ತು ಜಾಸ್ತಿ ಓಡಿದ್ದು ಅರಿಯಲೇ ಇಲ್ಲ. ಮಧ್ಯ ಪ್ರಾಯ ಕಳೆದ ಪಾರ್ಕ್ ನ ಸೆಕ್ಯೂರಿಟಿ ಗಾರ್ಡ್ ಇವರನ್ನು ನೋಡಿ ಮುಗುಳ್ನಕ್ಕ. ಓಡಿ ದಣಿದು ಕಲ್ಲು ಬೆಂಚಲ್ಲಿ ಕುಳಿತ ಅವನು ಕೈ ಮುಂದೆ ಮಾಡಿ “ಸೂರ್ಯ” ಎಂದ. ಅವಳು ನಕ್ಕು “ಸರಳಾ” ಎಂದಳು.


ಮುಂದಿನ ದಿನಗಳಲ್ಲಿ ಅವರದೆಷ್ಟು ಸುತ್ತು ಬಂದರೋ ಅಲ್ಲಿನ ಮರ ಗಿಡಗಳಿಗೆ ಗೊತ್ತು, ಸೂರ್ಯ ಮತ್ತು ಸರಳಾ, ಸರಳ ಈಗ ನಿತ್ಯ ತಿಂಡಿ ತರುವಳು, ಜಾಗಿಂಗ್ ಆಗಿ ಇಬ್ಬರೂ ಅವಳ ಕಾರ್ ಅಲ್ಲಿ ಕುಳಿತು ತಿಂಡಿ ತಿಂದು ಹೊರಡುವರು.

 

ಸೂರ್ಯನಿಗೆ ಸರಳಳನ್ನು ಬಹಳಷ್ಟು ಹಿಡಿಸಿತು, ಒಂದು ದಿನ ಸೂರ್ಯ ಬೆಳಗ್ಗೆ ಬಂದವನಿಗೆ ಎಷ್ಟು ಹೊತ್ತದರೂ ಸರಳ ಬಾರದೆ ಇರುವುದು ಚಿಂತೆಗೀಡು ಮಾಡಿತು. ಮೊಬೈಲ್ ಕರೆ ಮಾಡಿದರೆ “ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ” ಎಂಬ ಮೆಸೇಜ್. ನೇರವಾಗಿ ಅವಳ ಮನೆಗೆ ಹೋದ. ಮನೆ ಬಾಗಿಲು ಬೀಗ ಹಾಕಿತ್ತು.


ಏನು ಮಾಡಬೇಕೆಂದು ಅರಿಯದೆ ತನ್ನ ಮನೆಗೆ ಹೊರಟ. ದಿನ ಕಳೆಯಿತು ಸರಳನ ಯಾವುದೇ ಸುಳಿವಿಲ್ಲ. ಇತ್ತ ಸುಳಿಯಲ್ಲಿ ಸಿಲುಕಿದ ಮೀನಿನಂತೆ ವಿಲ ವಿಲ ನಲುಗಿದ ಸೂರ್ಯ. ಒಂದು ರಾತ್ರೆ ಒಂದು ಗಂಟೆಗೆ “ಟಿಂ” ಎಂಬ ಮೆಸೇಜ್ ಟೋನ್. ಪ್ರತಿ ದಿನ ಪ್ರತಿ ರಾತ್ರಿ ಪ್ರತಿ ನಿಮಿಷ ಪ್ರತಿ ಗಳಿಗೆ ಅವಳ ಮೆಸೇಜ್ ಅಥವಾ ಕರೆಗಾಗಿ ಜಾತಕ ಪಕ್ಷಿಯಂತೆ ಕಾಯುತಿದ್ದ ಸೂರ್ಯನಿಗೆ ಅಂದು ಆ ಮೆಸೇಜ್ ಅವಳದ್ದೇ ಎಂದು ಹೃದಯ ಒತ್ತಿ ಒತ್ತಿ ಹೇಳಿತು. 

.

ನಿದ್ದೆ ಯಾವಾಗಲೋ ಒಮ್ಮೆ ಹತ್ತುತ್ತಿದ್ದ ಸೂರ್ಯನಿಗೆ ಚಂದ್ರನಿಲ್ಲದ ಆ ಅಮಾವಾಸ್ಯೆಯ ರಾತ್ರಿ ರಪಕ್ಕನೆ ಎದ್ದು ಕುಳಿತ. ನಡುಗುವ ಕೈ ಗಳಿಂದ ಮೊಬೈಲ್ ಓಪನ್ ಮಾಡಿದ. ಅದು ಅವಳದ್ದೇ ಮೆಸೇಜ್ ಆಗಿತ್ತು.

.

ಸರಳ “ನನಗೆ ಗೊತ್ತು ನೀನು ಕಳೆದ ನನಗೋಸ್ಕರ ಕಾಯುತ್ತಿರುವೆಯೆಂದು. ನನ್ನದು ಅನಿವಾರ್ಯ ಪರಿಸ್ಥಿತಿ, ನನ್ನ ಮನೆಯಲ್ಲಿ ನನಗೆ ಬಾಲ್ಯ ವಿವಾಹ ಮಾಡಲಾಗಿತ್ತು, ನನಗೆ ಅವನು ಯಾರೆಂದೇ ಗೊತ್ತಿರಲಿಲ್ಲ. ಮದುವೆಯ ವಿಷಯ ಬಂದಾಗಲೆಲ್ಲ ನಿನಗೆ ಈಗಾಗಲೇ ಮದುವೆ ಆಗಿದೆ, ಎಂದು ತಂದೆ ತಾಯಿ ಗದರಿಸುತ್ತಿದ್ದರು, ಆ ದಿನ ಬೆಳಗ್ಗೆ ಅವರುಗಳು ನನ್ನನು ಊರಿಗೆ ಕರೆದೊಯ್ದರು. ಊರಿಗೆ ಹೋಗಿ ಆ ಹುಡುಗನನ್ನು ಹುಡುಕುತ್ತಿದ್ದರು, ಕೆಲವು ದಿನಗಳಲ್ಲಿ ಆ ಬಾಲ್ಯ ವಿವಾಹವಾದ ಹುಡುಗ ನಾವಿರುವ ನಗರದಲ್ಲೇ ಇರುವನು ಎಂದು ತಿಳಿಯಿತು. ನಾನು ನಾಳೆ ಅವನನ್ನು ಭೇಟಿಯಾಗಿ ನಮ್ಮಿಬ್ಬರ ವಿಷಯ ಪ್ರಸ್ತಾಪಿಸೋಣ ಎಂದು ಬರುತ್ತಿರುವೆ.”


ಸೂರ್ಯನಿಗೆ ನಿದ್ದೆಯೇ ಹತ್ತಲಿಲ್ಲ, ಆ ಹುಡುಗ ಏನೆನ್ನುವನೋ ನನ್ನ ಸರಳ ನನಗೆ ದೊರಕುವಳೋ ಇಲ್ಲವೋ ಎಲ್ಲಾ ಅಯೋಮಯ. ಬೆಳಗ್ಗಿನ ಜಾವ ಅವನಿಗೆ ನಿದ್ದೆ ಹತ್ತಿತು, ಬೆಳಗ್ಗೆ ಐದಕ್ಕೆ ಮನೆಯ ಕರೆಗಂಟೆ ಸದ್ದಾಗಲು ಎದ್ದವನು, ಯಾವತ್ತೂ ಆರು ಗಂಟೆಗೆ ಬರುವ ಹಾಲಿನ ಹುಡುಗ ಬೇಗ ಬಂದನೇ ಎನ್ನುವ ಯೋಚನೆಯಿಂದ ಬಾಗಿಲು ತೆಗೆಯಲು ಅವಾಕ್ಕಾಗಿ ನಿಂತ. 


ಅಲ್ಲಿ ಮುದ್ದು ಮುದ್ದಾಗಿ ಅವನ ಸರಳ ನಿಂತಿದ್ದಳು. ಓಡಿ ಬಂದು ಗಬಕ್ಕನೆ ಅವನ್ನನ್ನು ಗಟ್ಟಿಯಾಗಿ ಅಪ್ಪಿದ. ಅವಳು ಮೆತ್ತಗೆ ಅವನ ಕಿವಿಯಲ್ಲಿ “ಆ ಬಾಲ್ಯ ವಿವಾಹದ ಹುಡುಗ ನೀನೆ ಎಂದಳು”.


- ಸಚಿನ್ ಕುಳಮರ್ವ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

1 Comments
  1. ಓದಿಸುತ್ತಾ ಹೋಗಿ ಉದ್ವೇಗ ಹೆಚ್ಚಿಸಿ ಕೊನೆಗೆ ಆನಂದ ಕೊಟ್ಟಿತು. ತುಂಬಾ ಉತ್ತಮವಾದ ಕಿರುಗಥೆ. ಮುಂದುವರೆಸಿ.

    ReplyDelete
Post a Comment
To Top