ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿ ಪ್ರತಿಷ್ಠ ಶೆಟ್ಟಿಗೆ ಜ್ಞಾನಯೋಗಿ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ

Upayuktha
0


ಮಂಗಳೂರು: ನಗರದ ಎಸ್‌ಡಿಎಂ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರತಿಷ್ಠ ಶೆಟ್ಟಿ ಅವರಿಗೆ “ಜ್ಞಾನಯೋಗಿ ಶಿವಶರಣೆ ಗಂಗಾಂಬಿಕೆ ಪ್ರಶಸ್ತಿ” ಲಭಿಸಿದೆ.


ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ವಿಶ್ವ ಕನ್ನಡ ಅಂತರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನ–2026ರ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಮಾರ್ಚ್ 8ರಂದು ಬೆಂಗಳೂರಿನ ಹೇಸರಘಟ್ಟದಲ್ಲಿರುವ ಇಂಡೋ ಗ್ಲೋಬ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ್ ಅಕ್ಕರ, ಸಮ್ಮೇಳನದ ಅಧ್ಯಕ್ಷೆ ಮಾಲತಿ ಮೇಲುಕೋಟೆ, ಕವಿ ಜಯಪ್ಪ ಹೊನ್ನಾಳಿ, ಸಿನಿಮಾ ಮತ್ತು ಕಿರುತೆರೆಯ ನಟರಾದ ಅಂಜನಾ ಗಿರೀಶ್, ರಾಜ್ ಕಿರಣ್, ವಿನಾಯಕ, ಶೈಲಜಾ ಬಾಬು ಜಯದೇವ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಮಂಗಳೂರಿನ ಖ್ಯಾತ ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿಯಾಗಿರುವ ಪ್ರತಿಷ್ಠ ಶೆಟ್ಟಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಅವರು ಸುಚಿತ್ರ ಶೆಟ್ಟಿ ಮತ್ತು ಪುರಂದರ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top