ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ಶೈಕ್ಷಣಿಕ, ಸಾಂಸ್ಕೃತಿಕ ಹಬ್ಬ
ಉಜಿರೆ: ಸಂಸ್ಕೃತಿ-ಪರಂಪರೆಯ ಮೌಲಿಕತೆಗೆ ಅನುಗುಣವಾದ ಶೈಕ್ಷಣಿಕ ಸ್ಪರ್ಧಾತ್ಮಕತೆಯ ಸೊಗಡನ್ನು ಪರಿಚಯಿಸುವ ಎಸ್.ಡಿ.ಎಂ ಝೇಂಕಾರದ ಆರನೇ ಸೀಸನ್‌ನ ಕಲಾತ್ಮಕ ಉತ್ಸವಕ್ಕೆ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರವು ಸನ್ನದ್ಧಗೊಂಡಿದೆ. ರಾಷ್ಟ್ರಮಟ್ಟದ ಈ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೇಳವು ಮಾರ್ಚ್ 26 ಮತ್ತು 27ರಂದು ಜರುಗಲಿದೆ.
ಈ ಸಲದ ಝೇಂಕಾರದ ಆರನೇ ಸೀಸನ್ ಮಾರ್ಚ್ 26ರಂದು ಬೆಳಿಗ್ಗೆ 10ಕ್ಕೆ ಎಸ್.ಡಿ.ಎಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಅಂತರರಾಷ್ಟಿçÃಯ ಹಿರಿಮೆಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರಿಂದ ಚಾಲನೆ ಕಾಣಲಿದೆ. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ ಎಜ್ಯುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿರಲಿದ್ದಾರೆ. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6.30ಕ್ಕೆ ಏರ್ಪಡಲಿರುವ ಝೇಂಕಾರ ಸ್ಟಾರ್ ನೈಟ್ ಕಾರ್ಯಕ್ರಮವನ್ನು ತುಳು ಮತ್ತು ಕನ್ನಡ ಚಲನಚಿತ್ರ ವಲಯಗಳಲ್ಲಿ ಗುರುತಿಸಿಕೊಂಡ ಜನಪ್ರಿಯ ನಟ ಪೃಥ್ವಿ ಅಂಬರ್ ನಡೆಸಿಕೊಡಲಿದ್ದಾರೆ. ಝೀ ಕನ್ನಡ ಸರಿಗಮಪ ಸೀಸನ್ 15ರ ಸ್ಪರ್ಧಿಯಾಗಿ ಸಂಚಲನ ಮೂಡಿಸಿದ್ದ ರಾಮ್ ರಜತ್ ಮಯ್ಯ ನೇತೃತ್ವದಲ್ಲಿ ವೈಟಿಎಂ ಯುವತರಂಗ ಮ್ಯೂಸಿಕ್ ತಂಡದ ಮೂಲಕ ಝೇಂಕಾರ ಕಲ್ಚರಲ್ ನೈಟ್ ಹೊಸ ಬಗೆಯ ಸಂಗೀತ ನಿನಾದ ಹೊಮ್ಮಿಸಲಿದೆ.
ಝೇಂಕಾರ ಉತ್ಸವದ ಎರಡೂ ದಿನಗಳ ಕಾಲ ಶೈಕ್ಷಣಿಕ ಇವೆಂಟ್, ಟೀಮ್ ಇವೆಂಟ್, ಹೊರಾಂಗಣ ಇವೆಂಟ್ ಮತ್ತು ಸ್ಪಾಟ್ ಇವೆಂಟ್ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಶೈಕ್ಷಣಿಕ ವಿಭಾಗದಲ್ಲಿ ಮಾಕ್ ಪ್ರೆಸ್, ಸೈಕಾಲಜಿ ಮಾಯಿಸ್ಟ್ರೋ, ದಿ ರೈಟರ್ಸ್ ರಿಲೇ, ಮೈಂಡ್ ಕ್ರಾಫ್ಟ್, ಟ್ರೆಜûರ್ ಹಂಟ್, ಫ್ಯೂಸಿಯಾಂಕ್ಸ್, ಎಮಿನೆಷಿಯಾ, ಯುವೆಕ್ಸಾ, ಪ್ಲಾನೆಕ್ಸಾ ಸ್ಪರ್ಧೆಗಳು ಏರ್ಪಡಲಿವೆ. ತಂಡ ವಿಭಾಗದಡಿ ಸಮನ್ವಯ ಶೀರ್ಷಿಕೆಯಲ್ಲಿ ಐಸ್ ಬ್ರೇಕರ್, ಸಮೂಹ ನೃತ್ಯ, ಫ್ಯಾಷನ್ ಶೋ, ಮಿಸ್ಟರ್ ಆ್ಯಂಡ್ ಮಿಸ್ ಝೇಂಕಾರ ಸ್ಪರ್ಧೆಗಳು ಆಯೋಜಿತವಾಗಲಿವೆ. ಹೊರಾಂಗಣ ವಿಭಾಗದಲ್ಲಿ ಗಲ್ಲಿ ಕ್ರಿಕೆಟ್ ಏರ್ಪಡಲಿದೆ. ಸ್ಪಾಟ್ ಇವೆಂಟ್ ವಿಭಾಗದಡಿ ರೀಲ್ ಮೇಕಿಂಗ್, ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಗಳು ಜರುಗಲಿವೆ.
ಕಳೆದ ಐದು ವರ್ಷಗಳಿಂದ ಆಯೋಜಿತವಾಗುತ್ತಿರುವ ಈ ಉತ್ಸವದ ವಿನೂತನ ಕಲಾತ್ಮಕ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧೆಡೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ನಿರೂಪಿಸಿದ್ದಾರೆ. ಝೇಂಕಾರದ ಭಾಗವಾಗಿ ಏರ್ಪಡುವ ಸ್ಟಾರ್‌ನೈಟ್ ಮತ್ತು ಕಲ್ಚರಲ್ ನೈಟ್ ಪ್ರಮುಖ ಆಕರ್ಷಣೆಗಳಾಗಿ ಪ್ರತಿವರ್ಷವೂ ಗಮನಸೆಳೆಯುತ್ತವೆ.
ಈ ಹಿಂದೆ ಖ್ಯಾತ ನಟರಾದ ರಮೇಶ್ ಅರವಿಂದ್, ರಿಶಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ, ದಿಗಂತ್, ಗುರುನಂದನ್, ಗಾಯಕ ವಾಸುಕಿ ವೈಭವ್ ಝೇಂಕಾರ ಸ್ಟಾರ್ ನೈಟ್‌ನ ಕೇಂದ್ರಬಿಂದುವಾಗಿದ್ದರು. ಮಾರ್ಚ್ 27ರಂದು ಸಂಜೆ 4ಕ್ಕೆ ಏರ್ಪಡಲಿರುವ ಸಮಾರೋಪ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಜನಾರ್ಧನ್ ಸಮಾರೋಪ ಭಾಷಣ ಪ್ರಸ್ತುತಪಡಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಸ್ಪರ್ಧಾವಿಜೇತ ಪ್ರತಿಭೆಗಳಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ಪ್ರದಾನಗೊಳ್ಳಲಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


