ಕಥೆ: ನಿನಗಾಗಿ ಕಾಯುತ್ತಿದ್ದಾಳೆ

Upayuktha
0


ಒಂದು ಊರಲ್ಲಿ ಒಂದು ಪುಟ್ಟ ಕುಟುಂಬವಿತ್ತು. ಆ ಕುಟುಂಬದಲ್ಲಿ ಒಬ್ಬ ಹೆಣ್ಣುಮಗಳು ಹಾಗೂ ನಾಲ್ಕು ಗಂಡು ಮಕ್ಕಳು ಇದ್ದರು. ಮೂವರು ಗಂಡು ಮಕ್ಕಳಿಗೆ ಈಗಾಗಲೇ ಮದುವೆಯಾಗಿತ್ತು. ಕೊನೆಯ ಮಗನಿಗಾಗಿ ಹುಡುಗಿ ಹುಡುಕುತ್ತಿದ್ದರು. ಕೊನೆಗೂ ಒಬ್ಬಳನ್ನು ಇಷ್ಟಪಟ್ಟು, ಅವರಿಬ್ಬರ ಮದುವೆ ನೆರವೇರಿತು.


ಮದುವೆಯ ನಂತರ, ಮದುಮಗಳ ತಮ್ಮನಿಗೂ ಈ ಮನೆಯ ಹಿರಿಯ ಮಗನ ಮಗಳಿಗೂ ಪ್ರೀತಿ ಹುಟ್ಟಿತು. ಈ ವಿಷಯ ತಿಳಿದ ಮದುಮಗಳ ಅಕ್ಕ, “ನೀವು ಒಬ್ಬರನ್ನೊಬ್ಬರು ಪ್ರೀತಿಸುವುದು ತಪ್ಪಲ್ಲ. ಆದರೆ ಮನೆಯವರಿಗೆ ತಿಳಿಯದಂತೆ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಿ. ಸರಿಯಾದ ಸಮಯ ಬಂದಾಗ ಧೈರ್ಯವಾಗಿ ನಿಮ್ಮ ಅಪ್ಪ-ಅಮ್ಮನಿಗೆ ಹೇಳಿ,” ಎಂದು ಸಲಹೆ ನೀಡಿದರು.


ಆದರೆ ಕಾಲ ಕಳೆದಂತೆ, ಹುಡುಗ ತನ್ನ ಪ್ರೀತಿಯಲ್ಲಿ ಬದಲಾವಣೆ ತೋರಲು ಶುರುಮಾಡಿದ. ಅವನು ಅವಳಿಗೆ ನೀಡುತ್ತಿದ್ದ ಸಮಯ ಮತ್ತು ಸ್ನೇಹ ಕಡಿಮೆಯಾಗತೊಡಗಿತು. ಒಂದು ದಿನ, ಅವಳು ಕೇಳಿದಳು: “ಏನಾಯ್ತು? ಯಾಕೆ ನನ್ನಿಂದ ದೂರವಾಗುತ್ತಿದ್ದೀಯಾ?” ಎಂದು. ಅದಕ್ಕೆ ಅವನು, “ನನಗೆ ನೀನು ಇಷ್ಟವಿಲ್ಲ. ನಮ್ಮ ಪ್ರೀತಿಯನ್ನು ಮನೆಯವರು ಒಪ್ಪಿಕೊಳ್ಳುವುದಿಲ್ಲ,” ಎಂದು ಹೇಳಿ ಅವಳಿಂದ ದೂರವಾಯಿತು.


ಅವನು ಬಿಟ್ಟು ಹೋದ ದುಃಖವನ್ನು ಮನಸ್ಸಿನಲ್ಲೇ ಇಟ್ಟುಕೊಂಡು, ಮನೆಯವರ ಮುಂದೆ ಕೇವಲ ತೋರಿಕೆಯ ನಗುವಿನೊಂದಿಗೆ ಅವಳು ಜೀವನ ಸಾಗಿಸುತ್ತಾ ಇದ್ದಳು.


ಕೆಲವು ತಿಂಗಳುಗಳ ನಂತರ, ಆ ಹುಡುಗ ತನ್ನ ಮಾವನ ಮಗಳನ್ನು ಪ್ರೀತಿಸಲು ಆರಂಭಿಸಿದ. ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಈ ವಿಷಯ ತಿಳಿದಾಗ, ಅವಳು “ಅವನು ಸಂತೋಷವಾಗಿರಲಿ” ಎಂದುಕೊಂಡು, ಅವರ ಜೀವನದಿಂದ ಸಂಪೂರ್ಣವಾಗಿ ಹಿಂದೆ ಸರಿದಳು.


ಆದರೆ ಅವರ ಪ್ರೀತಿ ಹೆಚ್ಚು ಕಾಲ ಸುಖವಾಗಿರಲಿಲ್ಲ. ಪರಸ್ಪರ ಅರ್ಥಮಾಡಿಕೊಳ್ಳದ ಕಾರಣ, ದಿನವೂ ಜಗಳ, ಬೇಸರ ಮತ್ತು ಕೂಗಾಟಗಳು ಹೆಚ್ಚುತ್ತಾ ಹೋದವು.


ಇದೇ ವೇಳೆಯಲ್ಲಿ, ಆ ಹುಡುಗಿಗೆ ಆರೋಗ್ಯದ ಸಮಸ್ಯೆ ಎದುರಾಯಿತು. ಡಾಕ್ಟರ್‌ಗಳು ಅವಳಿಗೆ ಗಂಭೀರ ಸಮಸ್ಯೆಯಿದೆ ಎಂದು ತಿಳಿಸಿದರು. ಆ ಸಮಸ್ಯೆಯಿಂದಾಗಿ ಅವಳ ಕಾಲುಗಳು ಬಲಹೀನವಾಗಿದ್ದು, ಅವಳು ಹಾಸಿಗೆಯಲ್ಲೇ ಇರಬೇಕಾಯಿತು. ಮನೆಯವರು ಅವಳನ್ನು ದೂರವಿಟ್ಟು, ಅವಳ ಮೊಬೈಲ್‌ನ್ನೂ ತೆಗೆದುಕೊಂಡರು. “ನೀನು ಈ ಪರಿಸ್ಥಿತಿಯಲ್ಲಿ ಇದ್ದಾಗಲೂ ನಿನ್ನ ಹುಡುಗ ನಿನ್ನನ್ನು ನೋಡಲು ಬರಲಿಲ್ಲ. ಇನ್ನು ಅವನು ನಿನಗೆ ಏಕೆ?” ಎಂದು ಅವಳ ಅಮ್ಮ ಹೇಳಿದರು.


ಆದರೂ, ಅವಳು ತನ್ನ ನೋವನ್ನು ಮರೆತು, ಅವನ ಬರುವಿಕೆಯನ್ನು ಕಾಯುತ್ತಲೇ ಇದ್ದಳು.


ಇಂದಿಗೂ… ಆ ಜೀವ ಅವನಿಗಾಗಿ ಕಾಯುತ್ತಿದೆ.


- ಸ್ವಾತಿ ಡಿ

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top