ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್

Upayuktha
0

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಮಾರ್ಚ್ 26ರಂದು ಯಶಸ್ವಿಯಾಗಿ ನೆರವೇರಿತು.


ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಕಲಾವತಿ ಜಯಂತ್, ವ್ಯವಸ್ಥಾಪಕ ನಿರ್ದೇಶಕರು, ಅಕ್ಷಯ ಸಮೂಹ ಸಂಸ್ಥೆ, ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂತ ನಡುಬೈಲ್, ಅಧ್ಯಕ್ಷರು, ಅಕ್ಷಯ ಸಮೂಹ ಸಂಸ್ಥೆ, ವಹಿಸಿ ಮಾತನಾಡಿ, “ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸಲು ಉತ್ತಮ ಅವಕಾಶವಾಗಿದೆ. ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯವನ್ನು ರೂಪಿಸಬಹುದು” ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ರಾಧಿಕಾ ಶೆಟ್ಟಿ ಡಿ.ಎಸ್., ಸಹಾಯಕ ಪ್ರಾಧ್ಯಾಪಕಿ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ನಿರಂತರ ಅಭ್ಯಾಸ, ನೈಜ ಅನುಭವ ಹಾಗೂ ಉತ್ತಮ ಸಂವಹನ ಕೌಶಲ್ಯಗಳ ಅಗತ್ಯವನ್ನು ವಿವರಿಸಿದರು.


ಇನ್ನೋರ್ವ ಅತಿಥಿ ಅರ್ಪಿತ್ ಟಿ.ಎ., ಆಡಳಿತಾಧಿಕಾರಿ, ಅಕ್ಷಯ ಸಮೂಹ ಸಂಸ್ಥೆ, ಮಾತನಾಡಿ ಶ್ರಮ, ದೃಢ ನಿಶ್ಚಯ ಮತ್ತು ಅನುಭವವೇ ಯಶಸ್ಸಿನ ಮೂಲ ಎಂದು ತಿಳಿಸಿದರು.


ಹಾಗೆಯೇ ಇನ್ನೋರ್ವ ಅತಿಥಿ ಗಂಗಾರತ್ನ, ಪ್ರಾಂಶುಪಾಲರು, ಅಕ್ಷಯ ಪಿಯು ಕಾಲೇಜ್, ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸ್ಪರ್ಧೆಗಳ ಮೂಲಕ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಹಾಗೂ ಚಟುವಟಿಕೆಗಳು ನಡೆದವು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಗಣೇಶ್ ಎಸ್., ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇಳಿಯೂರುಕಟ್ಟೆ, ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ, ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ಗುರಿ ಸಾಧನೆಯ ಮಹತ್ವವನ್ನು ತಿಳಿಸಿದರು.


ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದ್ವಿತೀಯ ಬಿಸಿಎ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ದ್ವಿತೀಯ ಫ್ಯಾಷನ್ ಡಿಜೈನ್ ವಿಭಾಗ ರನ್ನರ್ ಅಪ್ ಸ್ಥಾನ ಪಡೆದರು.


ಈ ಸಂದರ್ಭದಲ್ಲಿ ದೀಕ್ಷಾ ರೈ, ಮುಖ್ಯಸ್ಥರು, ಬಿಸಿಎ ವಿಭಾಗ, ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.


ಕು. ಸಾನಿಧ್ಯ, ತೃತೀಯ ಬಿಸಿಎ, ಪ್ರಾರ್ಥನೆಗೈದರು. ಕು. ಸೌಜನ್ಯ ಹೆಚ್, ಸಂಯೋಜಕರು, ಬೈಟ್‌ಬ್ಲಿಟ್ಜ್ ಐಟಿ ಕ್ಲಬ್, ಸ್ವಾಗತಿಸಿದರು. ಸರೋಶ್ ನಾಯಕ್ ಹಾಗೂ ಸುಪ್ರಭ ಕೆ, ಉಪನ್ಯಾಸಕರು, ಕಂಪ್ಯೂಟರ್ ಸೈನ್ಸ್ ವಿಭಾಗ, ಅತಿಥಿಗಳನ್ನು ಪರಿಚಯಿಸಿದರು. ಕಾರ್ತಿಕ್ ಪಿ ರೈ, ವಿದ್ಯಾರ್ಥಿ ಸಂಯೋಜಕರು, ವಂದನಾರ್ಪಣೆ ಸಲ್ಲಿಸಿದರು.


ಕು. ಮಾನ್ಯ, ತೃತೀಯ ಬಿಸಿಎ, ಕಾರ್ಯಕ್ರಮವನ್ನು ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top