ಡಾ. ಸಿಎ.ಎ. ರಾಘವೇಂದ್ರ ರಾವ್‌ ಶೈಕ್ಷಣಿಕ ರಂಗದ ಭೀಷ್ಮ

Upayuktha
0

ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಅರವಿಂದ ಹೊಳ್ಳ

ಮಂಗಳೂರು: ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ ಮಾರ್ಚ್‌ 29, 2026ರಂದು ಮುಕ್ಕ ಕ್ಯಾಂಪಸ್ ನಲ್ಲಿ ನಡೆಯಿತು.


ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಸಂಸ್ಥೆಯ ಸೊಲ್ಯೂಷನ್ ಆರ್ಕಿಟೆಕ್ಟ್ ಅರವಿಂದ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶ್ರೀನಿವಾಸ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ರವರ ಶ್ಲಾಘನೀಯ ಸಾಧನೆಗಳನ್ನು ಹಾಗೂ ಕಳೆದ 39 ವರ್ಷಗಳಲ್ಲಿ ಶ್ರೀನಿವಾಸ ಶೈಕ್ಷಣಿಕ ಸಮೂಹ ಸಂಸ್ಥೆಗಳು ಸಾಧಿಸಿದ ಯಶೋಗಾಥೆಯನ್ನು ಸ್ಮರಿಸಿದರು. ಶೈಕ್ಷಣಿಕ ರಂಗದ ಭೀಷ್ಮ ಎಂದು ಖ್ಯಾತಿ ಪಡೆದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ರವರು ತಮ್ಮ 89 ನೇ ವಯಸ್ಸಿನಲ್ಲಿಯೂ ಕೂಡಾ ಶ್ರೀನಿವಾಸ ವಿಶ್ವವಿದ್ಯಾಲಯವನ್ನು ಇತರೆ ನಗರಗಳಿಗೆ ವಿಸ್ತರಿಸುವ ದೃಷ್ಟಿಕೋನದೊಂದಿಗೆ ಶ್ರಮಿಸುತ್ತಿದ್ದುದನ್ನು ಅವರು ನೆನಪಿಸಿಕೊಂಡರು. ಜೀವನಪರ್ಯಂತ ಸೇವಾಭಾವನೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ತಿಳಿಸಿದರು.


ಜೀವನಪರ್ಯಂತ ವಿದ್ಯಾರ್ಥಿಯಾಗಿಯೇ ಉಳಿಯಿರಿ, ವಿನಯದಿಂದ ಕಲಿಯಿರಿ ಹಾಗೂ ಜ್ಞಾನಾರ್ಜನೆಗೆ ಸದಾ ಸನ್ನದ್ಧರಾಗಿರಿ ಎಂದು ಸಲಹೆ ನೀಡಿದರು. ಉದ್ಯಮ ಕ್ಷೇತ್ರವು ಹೊಂದಾಣಿಕೆ, ಹೊಣೆಗಾರಿಕೆ ಹಾಗೂ ನಿರಂತರ ಅಧ್ಯಯನವನ್ನು ಮೆಚ್ಚುತ್ತದೆ. ಹುದ್ದೆಗಳು ಬದಲಾಗುತ್ತವೆ, ಕಾಲಕ್ರಮೇಣ ಅಭಿವೃದ್ಧಿಯಾಗುತ್ತವೆ; ಆದರೆ ನಿಮ್ಮ ಮನೋಭಾವವೇ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಆದ್ದರಿಂದ, ನಿಮ್ಮ ಕೌಶಲ್ಯಗಳನ್ನು ಪರಿಣಾಮಕಾರಿಯಾದ ಬದಲಾವಣೆಗಳಿಗೆ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಅಡ್ಕ ಶಾಮರಾವ್ ಹಾಗೂ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರಂತಹ ದಾರ್ಶನಿಕರು ನೀಡಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆತ್ಮವಿಶ್ವಾಸ, ಕುತೂಹಲ ಮತ್ತು ಹೊಣೆಗಾರಿಕೆಯೊಂದಿಗೆ ಜೀವನದಲ್ಲಿ ಮುಂದುವರಿಯಿರಿ ಎಂದು ಹೇಳಿ ಪದವೀಧರರಿಗೆ ಶುಭವನ್ನು ಹಾರೈಸಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಸಮುದಾಯದ ಹಿತದೃಷ್ಟಿಯಿಂದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಸಂಸ್ಥೆಯು ಶ್ರೀನಿವಾಸ ಸಮೂಹ ಶೈಕ್ಷಣಿಕ ಸಂಸ್ಥೆಗಳು ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯದ ಜೊತೆಗಿನ ಸಹಕಾರಕ್ಕಾಗಿ ತಮ್ಮ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇಂದಿನ ಜಾಗತಿಕ ಉದ್ಯಮ ವಲಯದಲ್ಲಿ ಕೇವಲ ಜ್ಞಾನ ಹೊಂದಿರುವುದಷ್ಟೇ ಸಾಕಾಗುವುದಿಲ್ಲ; ಆ ಜ್ಞಾನವನ್ನು ಸಮರ್ಪಕವಾಗಿ ಅನ್ವಯಿಸುವ ಕೌಶಲ್ಯ, ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸದಾ ನವೀಕರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.


ಶ್ರೀನಿವಾಸ ವಿವಿ ವಿಶ್ವಸ್ತ ಮಂಡಳಿ ಸದಸ್ಯರಾದ ಪ್ರೊ. ಇಆರ್‌. ಎ. ಮಿತ್ರಾ ಎಸ್. ರಾವ್ ರವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಶ್ರೀನಿವಾಸ ವಿವಿ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಎ. ಇಶಾನ್ ರಾವ್, ಶ್ರೀನಿವಾಸ ವಿವಿ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಶ್ರೀನಿವಾಸ ವಿವಿ ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ವಿಭಾಗ ಕುಲಸಚಿವ ಡಾ. ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್ ಮತ್ತು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


1058 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.


ಡಾ. ಶ್ರೀನಿವಾಸ ಮಯ್ಯ ಡಿ. ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಕಾಲೇಜ್‌ ಆಪ್‌ ಫಾರ್ಮಸಿ ಯ ಪ್ರಾಂಶುಪಾಲರಾದ ಡಾ. ಎ. ಆರ್. ಶಬರಾಯ ವಂದಿಸಿದರು. ಡಾ. ಪದ್ಮಾವತಿ ಪ್ರಭು, ಅನ್ವಿತಾ ಮತ್ತು ನಮೃತಾ ರವರು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top