ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾಗಿ ಮೂಡಿಬಂದಿವು. ಇದರ ಪ್ರಯುಕ್ತ ನಡೆದ 'ನಾರಸಿಂಹ' ನೃತ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವಿದುಷಿ ಮಾನಸಿ ಸುಧೀರ್ ಹಾಗೂ ಅವರ ವೃಂದ ನೃತ್ಯನಿಕೇತನ ಕೊಡವೂರು ಉಡುಪಿ ಈ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಶ್ರೀ ವಿಷ್ಣುವಿನ ನಾರಸಿಂಹ ಅವತಾರದ ಪೌರಾಣಿಕ ಕಥಾವಸ್ತುವನ್ನು ಆಧರಿಸಿದ ಈ ರೂಪಕದಲ್ಲಿ ಹಿರಣ್ಯಕಶಿಪುವಿನ ಅಹಂಕಾರ, ಪ್ರಹ್ಲಾದನ ಅಚಲ ಭಕ್ತಿ ಹಾಗೂ ಅಂತಿಮವಾಗಿ ನಾರಸಿಂಹ ಅವತಾರವನ್ನು ನೃತ್ಯ, ಭಾವಾಭಿನಯ ಮತ್ತು ಸಂಗೀತದ ಮೂಲಕವಾಗಿ ಮೂಡಿಬಂದಿತು.
ಕಲಾವಿದರು ತೋರಿದ ಭಾವಭಂಗಿಗಳು, ನೃತ್ಯ ಚಲನೆಗಳು ಹಾಗೂ ಆಕರ್ಷಕ ವೇಷಭೂಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ವಿಶೇಷವಾಗಿ ನಾರಸಿಂಹ ಅವತಾರದ ಪ್ರದರ್ಶನದ ಕ್ಷಣ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು.
ಹಿನ್ನೆಲೆ ಸಂಗೀತ, ರಂಗಸಜ್ಜೆ ಹಾಗೂ ಬೆಳಕಿನ ವ್ಯವಸ್ಥೆಯೂ ಕಾರ್ಯಕ್ರಮವನ್ನು ಮತ್ತಷ್ಟು ಆಕರ್ಷಕವಾಗಿಸಿತು.
ಪೌರಾಣಿಕ ಕಥಾವಸ್ತುವನ್ನು ನೃತ್ಯ ರೂಪದಲ್ಲಿ ಮನಮುಟ್ಟುವಂತೆ ವಿದುಷಿ ಮಾನಸಿ ಸುಧೀರ್ ಹಾಗೂ ಅವರ ವೃಂದಕ್ಕೆ ಪ್ರೇಕ್ಷಕರು ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಕಾವ್ಯಾ ಹೆಗ್ಡೆ
ಪೋಟೋ: ಪವನಕುಮಾರ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


