ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ
ಅಖಿಲ ಭಾರತ ಪ್ರಮುಖ ಬಂದರುಗಳ ತಂಡಗಳು ಭಾಗಿ
ಮಂಗಳೂರು: ಮೇಜರ್ ಪೋರ್ಟ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಹಾಗೂ ನವ ಮಂಗಳೂರು ಪೋರ್ಟ್ ಸ್ಪೋರ್ಟ್ಸ್ ಕೌನ್ಸಿಲ್ ಸಹಯೋಗದಲ್ಲಿ, ಅಖಿಲ ಭಾರತ ಪ್ರಮುಖ ಬಂದರುಗಳ ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್ ಟೂರ್ನಮೆಂಟ್ 2025–26 ಅನ್ನು ನವ ಮಂಗಳೂರು ಬಂದರು ಪ್ರಾಧಿಕಾರದ ಕ್ರೀಡಾ ಸಂಕೀರ್ಣ ಮತ್ತು ಪಣಂಬೂರು ಕಡಲತೀರದಲ್ಲಿ 24 ಮಾರ್ಚ್ ರಿಂದ 27 ಮಾರ್ಚ್ 2026ರವರೆಗೆ ಆಯೋಜಿಸಲಾಗುತ್ತಿದೆ. ಈ ಟೂರ್ನಮೆಂಟನ್ನು 24 ಮಾರ್ಚ್ ಸಂಜೆ 5:00 ಗಂಟೆಗೆ ನವ ಮಂಗಳೂರು ಬಂದರು ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಉದ್ಘಾಟಿಸಲಿದ್ದಾರೆ.
ಈ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ದೇಶದ ಪ್ರಮುಖ ಬಂದರುಗಳಾದ ಮುಂಬೈ, ದೀನದಯಾಳ್, ಕೊಲ್ಕತ್ತಾ, ಪರದೀಪ್, ಚೆನ್ನೈ, ವಿಶಾಖಪಟ್ಟಣಂ, ಕೊಚ್ಚಿನ್, ಮರ್ಮುಗಾವ್, ವಿ.ಓ.ಸಿ ಬಂದರು ಹಾಗೂ ಆತಿಥೇಯವಾದ ನವ ಮಂಗಳೂರು ಬಂದರು ಪ್ರಾಧಿಕಾರ ಭಾಗವಹಿಸಲಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


