ಕುಳಾಯಿ: ಎಂ ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ಸುಮತಿ ಫೌಂಡೇಶನ್ ಕುಳಾಯಿ ಇವರು ಸೋಮವಾರ (ಮಾ.23) ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳ ಇಲ್ಲಿಗೆ ಭೇಟಿ ನೀಡಿ ಮಕ್ಕಳ ಕಲಿಕೋಪಕರಣಗಳನ್ನು ಮತ್ತು ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಹಾಗೂ 5 ಸಾವಿರ ರೂಪಾಯಿ ನಗದನ್ನು ಈ ಟ್ರಸ್ಟಿನ ಮೂಲಕ ನೀಡಿದರು.
ಈ ಸಂದರ್ಭದಲ್ಲಿ ಶಂಕರನಾರಾಯಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ ರಮೇಶ್ ಇವರು ನಾರಾಯಣ ಗುರು ಶಿಕ್ಷಣ ಟ್ರಸ್ಟಿನ ಸಂಸ್ಥಾಪಕರಾದ ದಿವಂಗತ ಶ್ರೀ ಸಾದು ಪೂಜಾರಿಯವರಿಗೂ ಶಂಕರನಾರಾಯಣಯ್ಯರವರಿಗೂ ಇದ್ದ ಆತ್ಮೀಯತೆಯ ಸಂಬಂಧವನ್ನು ನೆನಪಿಸಿದರು.
ಇದನ್ನು ಟ್ರಸ್ಟಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಟ್ರಸ್ಟಿ ಆಗಿರುವ ಶ್ರೀ ಪಿ ದಯಾಕರ್ ಇವರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ದಿವಾಕರ್ ಕೋಶಾಧಿಕಾರಿ, ಟ್ರಸ್ಟಿಗಳಾದ ಕೆ ಶ್ರೀಪತಿ ಭಟ್, ಶುಭಕರನ್ ಪ್ರವೀಣ, ಶ್ರೀನಿವಾಸ ಕುಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀಮತಿ ಗುಣಮತಿ ರಮೇಶ್ ಮುಖ್ಯೋಪಾಧ್ಯಾಯನಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರು ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾ ದ ಶ್ರೀ ಮಹಾವೀರ ಜೈನ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

