ಪ್ರಣವಶ್ರೀ ಪ್ರಶಸ್ತಿ ಪ್ರದಾನ: ದಾಸ ಸಾಹಿತ್ಯ, ಸಂಗೀತ, ಯೋಗ ಕ್ಷೇತ್ರದ ಗಣ್ಯರಿಗೆ ಸನ್ಮಾನ

Upayuktha
0

ಯುವ ಪೀಳಿಗೆ ಸಂಗೀತ ಮತ್ತು ಸಂಸ್ಕೃತಿಯತ್ತ ಹೆಚ್ಚು ಒಲವು ಬೆಳೆಸಿಕೊಳ್ಳಬೇಕು: ಡಾ.ಗುರುರಾಜ ಪೋಶೆಟ್ಟಿಹಳ್ಳಿ





ಬೆಂಗಳೂರು: ನಗರದ ಮಲ್ಲೇಶ್ವರದ ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ನಡೆಯುತ್ತಿರುವ 26ನೇ ಶ್ರೀರಾಮನವಮಿ ಸಂಗೀತೋತ್ಸವ- 2026ರ ಅಂಗವಾಗಿ ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಅತ್ಯಂತ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ನಡೆಯಿತು.


ದಾಸ ಸಾಹಿತ್ಯ, ಸಂಗೀತ, ಯೋಗ ಮತ್ತು ನೃತ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ವಿ. ಮಾಲತಿ ಶಿಂಗ್ಲಾಚಾರ್ ಮತ್ತು ವಿ. ರಾಮಲಿಂಗಂ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕಡ್ಡಿ ಎಸ್. ಜಯತೀರ್ಥಾಚಾರ್ಯರು ಭಾಗವಹಿಸಿ, ಸಾಧಕರ ಕೊಡುಗೆಗಳನ್ನು ಸ್ಮರಿಸಿ ಅಭಿನಂದಿಸಿದರು.


ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಶನ್ (ರಿ.), ಶಿವ–ಶ್ರೀಕಾಂತ ಸಂಗೀತ ಪ್ರತಿಷ್ಠಾನ (ರಿ.), ಸಪ್ತಗಿರಿ ಭಜನಾ ಮಂಡಳಿ (ರಿ.), ದಾಸ ಸಾಹಿತ್ಯ ಪ್ರಾಜೆಕ್ಟ್ (ಟಿ.ಟಿ.ಡಿ.), ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸೇರಿದಂತೆ ವಿವಿಧ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ಡೆಪ್ಯುಟಿ ರಿಜಿಸ್ಟ್ರಾರ್ ಪ್ರೊ ಡಾ .ಶ್ರೀಕಾಂತಂ ನಾಗೇಂದ್ರ ಶಾಸ್ತ್ರೀ, ಪುರಸ್ಕಾರ ಆಯ್ಕೆ ಸಮಿತಿ ಅಧ್ಯಕ್ಷೆ ಜಯಂತಿ ಚಂದ್ರಮೌಳಿ, ಆಯೋಜಕರಾದ ಡಾ. ವಾರುಣಿ ಜಯತೀರ್ಥಚಾರ್ಯ ಕಡ್ಡಿ ಉಪಸ್ಥಿತರಿದ್ದರು.


ದಾಸ ಸಾಹಿತ್ಯ ಕ್ಷೇತ್ರದ ಅಮೂಲ್ಯ ಸೇವೆಗಾಗಿ ಶ್ರೀಮತಿ ಪದ್ಮಾವತಿ ಬಾಯಿ ಮತ್ತು ಕಡ್ಡಿ ಶ್ರೀನಿವಾಸಾಚಾರ್ಯ ಹಾಗು ಶ್ರೀಮತಿ ಪದ್ಮಾವತಿ ಬಾಯಿ ಮತ್ತು ಕೊಳಲು ವಿದ್ವಾನ್ ಶ್ರೀನಿವಾಸ್ ರಾವ್ ಸ್ಮಾರಕ 'ಪ್ರಣವಶ್ರೀ' ಪುರಸ್ಕಾರ ಸ್ವೀಕರಿಸಿದ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ “ದಾಸ ಸಾಹಿತ್ಯ ಮತ್ತು ಭಜನಾ ಪರಂಪರೆಗಳು ನಮ್ಮ ಸಂಸ್ಕೃತಿಯ ಆತ್ಮ. ಇವುಗಳನ್ನು ಮುಂದಿನ ಪೀಳಿಗೆಗೆ ಪಸರಿಸುವುದು ನಮ್ಮ ಜವಾಬ್ದಾರಿ” ಎಂದು ಅಭಿಪ್ರಾಯಪಟ್ಟರು.


ಶ್ರೀರಾಮನವಮಿ ಉತ್ಸವಗಳು ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಏಕತೆಯನ್ನು ಬೆಳೆಸುವ ಮಹತ್ವದ ವೇದಿಕೆಗಳೆಂದು ಅವರು ವಿವರಿಸಿದರು. ಯುವ ಪೀಳಿಗೆ ಸಂಗೀತ ಮತ್ತು ಸಂಸ್ಕೃತಿಯತ್ತ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.


ನಂತರ ರವೀಂದ್ರ ನರಹರಿ ತಂಡದಿಂದ ಸೂತ್ರದ ಬೊಂಬೆ ಆಟ ಪ್ರದರ್ಶನವು ಮಕ್ಕಳಿಂದ ಹಿರಿಯರ ತನಕ ಎಲ್ಲರನ್ನೂ ಆಕರ್ಷಿಸಿ, ಸಮಾರಂಭಕ್ಕೆ ವಿಶೇಷ ಮೆರುಗು ತಂದಿತು.


ಸಂಗೀತೋತ್ಸವದ ವೈಭವ:

ಶ್ರೀರಾಮನವಮಿ ಸಂಗೀತೋತ್ಸವದ ಅಂಗವಾಗಿ ಪ್ರತಿದಿನವೂ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳು ಭಕ್ತರನ್ನು ಸೆಳೆಯುತ್ತಿವೆ. ಖ್ಯಾತ ಕಲಾವಿದರು ಹಾಗೂ ಯುವ ಪ್ರತಿಭೆಗಳ ಗಾಯನ–ವಾದನ ಕಾರ್ಯಕ್ರಮಗಳು ಭಕ್ತಿ ಮತ್ತು ಸಂಗೀತದ ಸೊಗಡನ್ನು ಹರಡುತ್ತಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top