ಮಾನವನ ಜೀವನದಲ್ಲಿ ಭರವಸೆ ಒಂದು ಮಹತ್ವದ ಶಕ್ತಿ. ಭರವಸೆಯೇ ನಮ್ಮನ್ನು ಮುನ್ನಡೆಗೆ ಕರೆದುಕೊಂಡು ಹೋಗುತ್ತದೆ. ಇಂದಿನ ಕಷ್ಟಗಳು ಮತ್ತು ಸವಾಲುಗಳು ನಾಳೆ ಉತ್ತಮ ದಾರಿಯನ್ನು ತೆರೆದಿಡುತ್ತವೆ. ಆದ್ದರಿಂದ ‘ಭರವಸೆಯ ನಾಳೆಗಳು’ ಎಂದರೆ ನಮ್ಮ ಕನಸುಗಳನ್ನು ನನಸಾಗಿಸುವ ಮೊದಲ ಹೆಜ್ಜೆಯಾಗಿದೆ.
ನಮ್ಮ ಪ್ರತಿಯೊಂದು ಸಣ್ಣ ಪ್ರಯತ್ನವೂ ನಾಳೆಯ ಸಾಧನೆಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು, ಹಿರಿಯರು, ಮಕ್ಕಳು- ಎಲ್ಲರೂ ಭರವಸೆಯಿಂದ ಬದುಕಬೇಕು. ಶಿಕ್ಷಣ, ಧೈರ್ಯ ಮತ್ತು ಶ್ರಮ ನಮ್ಮ ಜೀವನದಲ್ಲಿ ಭರವಸೆಯನ್ನು ಬೆಳೆಸುವ ಪ್ರಮುಖ ಶಕ್ತಿಗಳಾಗಿವೆ. ಸಮಾಜದಲ್ಲಿ ಸಹಕಾರ ಮತ್ತು ಒಗ್ಗಟ್ಟು ಇದ್ದರೆ ಈ ಭರವಸೆ ಇನ್ನಷ್ಟು ಬಲವಾಗುತ್ತದೆ.
ಇಂದಿನ ಕೆಲಸವನ್ನು ಇಂದೇ ಶ್ರದ್ದೆಯಿಂದ ಮಾಡಬೇಕು; ಅದನ್ನು ನಾಳೆಗೆ ಮುಂದೂಡುವುದು ವ್ಯರ್ಥ. ಕಳೆದುಹೋದ ಸಮಯ ಮತ್ತೆ ಮರಳಿ ಬರುವುದಿಲ್ಲ. ಇಂದಿನ ಪರಿಶ್ರಮವೇ ನಾಳೆಯ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ.
ನಾಳೆ ಹೊಸ ಅವಕಾಶಗಳು, ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂಬ ನಂಬಿಕೆ ನಮ್ಮಲ್ಲಿರಬೇಕು. ಆದರೆ ಅತಿಯಾದ ನಿರೀಕ್ಷೆ ಬೇಡ. ನಮಗೆ ನಾವೇ ಭರವಸೆ ನೀಡಿಕೊಂಡು, ಇಂದಿನ ದಿನವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ನಾಳೆಯನ್ನು ನಿರ್ಮಿಸಿಕೊಳ್ಳಬಹುದು.
- ಶಿವಾನಿ ಕೊಡಂಗಾಯಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



