ಜಗತ್ತಿಗೇ ಮಾದರಿ ನನ್ನೂರು

Upayuktha
0


ದು ನನ್ನೂರು ನಾನು ಜನಿಸಿದ ತವರೂರು. ಪುಟ್ಟ ಪುಟ್ಟ ಹೆಜ್ಜೆ ಹಾಕಿ ಎದ್ದು ಬಿದ್ದು ಬದುಕು ಆರಂಭಿಸಿದ ಊರು. ಅಪ್ಪ- ಅಮ್ಮ, ತಾತ- ಅಜ್ಜಿ ಮಾತ್ರವಲ್ಲ ಬೀದಿ ಬೀದಿಗೂ ಪ್ರೀತಿ ತೋರುವ ಮಹಾಮಾತೆಯರಿರುವ ತವರೂರು. ಹಕ್ಕಿಗಳ ಕಲರವ ದೇಗುಲದ ಘಂಟಾನಾದ ಹಚ್ಚ ಹಸಿರಿನಿಂದ ಕಂಗೊಳಿಸುವ ಕೃಷಿ ಭೂಮಿ ಕೊಟ್ಟಿಗೆಯಿಂದ ಹಸುಗಳ ಆಚೆಗೆ ಕರೆದೊಯ್ಯುವ ಅಪ್ಪ ಮೊಮ್ಮಕ್ಕಳಿಗೆ ಸರಿರಾತ್ರಿವರೆಗೆ ವಿಧ- ವಿಧ ಕತೆ ಹೇಳಿ ಮನರಂಜಿಸುವ ನಮ್ಮ ಕಾಲ ಬಹು ಚೆಂದಾಗಿತ್ತು.


ಆಣೆಗೊಂದು ಸೇರಿ ಬೆಣ್ಣೆ, ಹಾಲು, ಮೊಸರು, ದವಸ ಧಾನ್ಯ ಸುಖದ ಸ್ವರ್ಗ ನಮಗಿತ್ತು! ಏನು ಬಂತಪ್ಪ ಕಲಿಗಾಲ ಎಂದು ನಿಟ್ಟುಸಿರು ಬಿಡುತ್ತಾ ಗೊರಕೆ ಆರಂಭಿಸಿದ ಅಜ್ಜ ಬೆಳಗ್ಗೆ ನಾಲ್ಕಕ್ಕೇ ಏಳುವುದು ಬಿಡಿಸಲಾರದ ಅಚ್ಚರಿ. ಎಲ್ಲಿ ನೋಡಿದರು ಹಸಿರು ಸ್ವರ್ಗ, ಸಮುದ್ರದಂತೆ ಕಾಣುವ ನಮ್ಮೂರ ನದಿ, ಕಣ್ಣು ಹಾಯಿಸಿದಷ್ಟೂ ವಿಶಾಲ ನದಿ. ಸುತ್ತಲು ಜಮೀನಿಗೆ ನೀರುಣಿಸುವ ರೈತರು ಊರ ಮುಂದಿನ ಹಸಿರು ಗದ್ದೆಗಳು ನಮ್ಮೂರಿನ ಪ್ರಗತಿ ಸಂಕೇತಗಳು. ಹಬ್ಬಗಳು ಮತ್ತು ಜಾತ್ರೆಗಳು ನನ್ನೂರಿನ ವೈಶಿಷ್ಟ್ಯ.


ಎಲ್ಲ ಧರ್ಮಗಳ ಜನರು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದು ದಸರಾ, ಸಂಕ್ರಾಂತಿ, ದೀಪಾವಳಿ ಹಬ್ಬಗಳನ್ನು ಸಂಭ್ರಮಿಸುವುದು ಏಕತೆ ಮತ್ತು ಸೌಹಾರ್ದತೆಯನ್ನು ತೋರಿಸುತ್ತದೆ ಕೃಷಿಯೇ ನನ್ನೂರಿನ ಮುಖ್ಯ ಆಧಾರ. ರೈತರು ಆಧುನಿಕ ತಂತ್ರಜ್ಞಾನ ಬಳಸಿ ಬೆಳೆ ಬೆಳೆಯುತ್ತಾರೆ ಜೈವಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಲು ಉತ್ಪಾದನೆ ಮತ್ತು ಸಣ್ಣ ಕೈಗಾರಿಕೆಗಳು ಊರಿನ ಆರ್ಥಿಕತೆಗೆ ಬಲ ನೀಡುತ್ತವೆ. ನನ್ನೂರಿನ ಒಡಲಿಗೆ  ಪ್ರಕೃತಿಯೇ ದೇವರು  ಪ್ರಕೃತಿ ಒಲಿದರೆ ಬಾಳು ಮುನಿದರೆ ಬರೀ ಗೋಳು ಹಾಗೆಯೇ ಎಲ್ಲರೂ ನಮ್ಮವರೇ ನಾವೆಲ್ಲ ಈ ಊರಿನ ಮಕ್ಕಳೇ ನಾವೆಲ್ಲರೂ ಒಂದೇ ಜಾತಿ ಒಂದೇ ಮತ ನಾವು ಮನುಜರು! ನಾವು ಮನುಜರು ಜನ್ಮ ತಾಳಿದಾಗಲೇ ನಮಗೆ ಈ ಕವಿವಾಣಿಯ ಕಲಿಸಿತ್ತು ನನ್ನೂರು. ನಾವು ಜನಿಸಿದ ಊರು ನಾವು ಆಟವಾಡಿದ ನಮ್ಮ ಉಸಿರಾದ ಹೆಮ್ಮೆಯ ತವರೂರು ನಮಗೆ ಎಂದಿಗೂ ಸ್ವರ್ಗ.



- ಮಂಜುಳಾ ಪ್ರಕಾಶ್

ಎಂಸಿಜೆ ವಿದ್ಯಾರ್ಥಿನಿ,

ಆಳ್ವಾಸ್ ಕಾಲೇಜು ಮೂಡುಬಿದಿರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top