ಪರಿಚಯ ಇದ್ದೂ ಅಪರಿಚಿತವಾದಳು

Upayuktha
0




ನ್ನ ಕಾಲೇಜಿನ ಮೊದಲ ದಿನ. ಆ ದಿನ ನನಗೆ ಯಾರೂ ಪರಿಚಯವಾಗಿರಲಿಲ್ಲ. ಎಲ್ಲವೂ ಹೊಸದು, ಎಲ್ಲರೂ ಅಪರಿಚಿತರು. ಆ ಸಮಯದಲ್ಲಿ ಒಬ್ಬ ಅಪರಿಚಿತಳಾದ ಹುಡುಗಿ ನನ್ನ ಬಳಿ ಬಂದು ಮಾತು ಆರಂಭಿಸಿದಳು. ಮಾತಿನಿಂದ ಮಾತು ಬೆಳೆದು ನಾವು ಒಬ್ಬರನ್ನೊಬ್ಬರು ಪರಿಚಯಿಸಿಕೊಂಡೆವು. ಆ ಒಂದು ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಸಂತೋಷ ಮೂಡಿತು. “ನನಗೆ ಏನಾಯಿತೋ?” ಎಂದು ನಾನೇ ನನಗೆ ಪ್ರಶ್ನೆ ಕೇಳಿಕೊಂಡೆ. ಆದರೆ ಅದರ ಉತ್ತರ ನನಗೆ ತಿಳಿಯಲಿಲ್ಲ.


ಯಾರನ್ನೂ ಹೆಚ್ಚು ಹಚ್ಚಿಕೊಳ್ಳದ ನಾನು, ಅವಳನ್ನು ಮಾತ್ರ ತುಂಬಾ ಹತ್ತಿರವಾಗಿಸಿಕೊಂಡೆ. ದಿನಗಳು ಕಳೆಯುತ್ತಿದ್ದಂತೆ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಟ್ಟಿತು. ಆಕಾಶದಲ್ಲಿ ವೇಗವಾಗಿ ಹಾರುವ ಹಕ್ಕಿಯಂತೆ ನಮ್ಮಿಬ್ಬರ ಸ್ನೇಹವೂ ತುಂಬಾ ಬೇಗ ಗಾಢವಾಯಿತು. ಸ್ನೇಹದೊಳಗಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು.


ನಮ್ಮಿಬ್ಬರ ಈ ಸುಂದರ ಸ್ನೇಹವನ್ನು ನೋಡಿ ಕೆಲವರು ಅಸೂಯೆ ಪಟ್ಟರು. ಆದರೂ ನಮ್ಮ ಸ್ನೇಹದಲ್ಲಿದ್ದ ಪ್ರೀತಿ, ವಾತ್ಸಲ್ಯ, ಸಹನೆ ಮತ್ತು ಕರುಣೆ ಯಾವತ್ತೂ ಕಡಿಮೆಯಾಗಲಿಲ್ಲ. ಪುಸ್ತಕದಲ್ಲಿ ಬರೆಯಲು ಆರಂಭಿಸಿದಾಗ ಹೇಗೆ ಹಾಳೆಗಳು ಅಕ್ಷರಗಳಿಂದ ತುಂಬುತ್ತವೆಯೋ, ಹಾಗೆಯೇ ನಮ್ಮ ಸ್ನೇಹವೂ ಪ್ರೀತಿಯಿಂದ ತುಂಬುತ್ತಾ ಹೋಯಿತು.


ಯಾವುದೇ ಸಂಬಂಧದಲ್ಲಾದರೂ ಕೋಪ, ಅಸಮಾಧಾನ, ಜಗಳಗಳು ಸಹಜ. ಹಾಗೆಯೇ ನಮ್ಮ ಸ್ನೇಹದಲ್ಲಿಯೂ ಕೆಲವೊಮ್ಮೆ ಅಸಮಾಧಾನಗಳು ಬಂದವು. ಆದರೆ ಅವುಗಳನ್ನೆಲ್ಲ ಸಹಿಸಿಕೊಂಡು, ನನ್ನನ್ನು ನಾನೇ ಸಮಾಧಾನಪಡಿಸಿಕೊಂಡು ನಾನು ಸ್ನೇಹವನ್ನು ಮುಂದುವರೆಸುತ್ತಿದ್ದೆ. ನಾನು ಮುಂದುವರಿದರೂ, ಅವಳು ಮಾತ್ರ ನಿಧಾನವಾಗಿ ದೂರವಾಗಲು ಆರಂಭಿಸಿದಳು.


ಏನಾಯಿತೋ, ಏಕೆ ಹೀಗಾಯಿತೋ ಎಂಬ ಪ್ರಶ್ನೆಗಳು ನನ್ನ ಮನಸ್ಸಿನಲ್ಲೇ ಉಳಿದವು. ನಮ್ಮ ಸ್ನೇಹವೂ ಬಹುಕಾಲ ಮುಂದುವರಿಯಲಿಲ್ಲ. ಅವಳಿಗೆ ಏನಾಯಿತೆಂದು ಕೇಳಲು ಪ್ರಯತ್ನಿಸಿದಾಗ, ಕೇಳುವಷ್ಟು ಸಮಯ ಅವಳಿಗೆ ಇರಲಿಲ್ಲ. ಸಮಯ ಇದ್ದರೂ, ಅದನ್ನು ನನ್ನಿಗಾಗಿ ನೀಡಲು ಅವಳು ಸಿದ್ಧಳಿರಲಿಲ್ಲ.


ಅವಳನ್ನು ಕಂಡಾಗಲೆಲ್ಲಾ ಮೊದಲಿನಂತೆ ನಮ್ಮಿಬ್ಬರ ಸ್ನೇಹ ಮತ್ತೆ ಜೀವಂತವಾಗಬೇಕೆಂಬ ಆಸೆ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಆದರೆ ಆ ಆಸೆ ಆಸೆಯಾಗಿಯೇ ಉಳಿಯಿತು. ಆದರೂ ನಾನು ಕಾದೆ — ಒಂದು ದಿನ ಅವಳು ನನ್ನ ಸ್ನೇಹಕ್ಕಾಗಿ ಮತ್ತೆ ಬರುತ್ತಾಳೆ ಎಂಬ ನಂಬಿಕೆಯಲ್ಲಿ. ಆದರೆ ಆ ನಂಬಿಕೆಯೂ ನೆರವೇರಲಿಲ್ಲ.


ನಮ್ಮ ಜೀವನದಲ್ಲಿ ನಾವು ಎಷ್ಟೇ ಪ್ರೀತಿಯಿಂದ ಯಾವುದನ್ನಾದರೂ ಕಾಪಾಡಿಕೊಂಡರೂ, ಕೆಲವೊಮ್ಮೆ ಅದನ್ನು ಬೇಗನೆ ಕಳೆದುಕೊಳ್ಳುತ್ತೇವೆ. ಅದು ವಸ್ತುವಾಗಲಿ ಅಥವಾ ಸಂಬಂಧವಾಗಲಿ. ಆದರೂ ನನ್ನ ಮನಸ್ಸು ಇನ್ನೂ ಅವಳ ಸ್ನೇಹಕ್ಕಾಗಿ ಕಾಯುತ್ತಲೇ ಇದೆ. ಒಂದಲ್ಲ ಒಂದು ದಿನ ಅವಳು ಮತ್ತೆ ಬರುತ್ತಾಳೆ ಎಂಬ ಸಣ್ಣ ನಂಬಿಕೆಯನ್ನು ಹೃದಯದಲ್ಲಿ ಇಟ್ಟುಕೊಂಡೇ ನಾನು ಬದುಕುತ್ತಿದ್ದೇನೆ.



-ಸ್ವಾತಿ ಡಿ,

ವಿಸಿ ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top