ಹಲೋ, ಹೇಗಿದ್ದೀರಾ? ನಮ್ಮ ಜೀವನಕ್ಕೆ ಹೇಗೆ ಫ್ರೆಶ್ ಗಾಳಿ, ಫ್ರೆಶ್ ಅಪ್ ಆಗುವುದು ಹೇಗೆ ಅವಶ್ಯಕವೋ ಹಾಗೆ ಜೀವನದಲ್ಲಿ ರಿಫ್ರೆಶ್ ಆಗುವುದು ನಮ್ಮ ಜೀವನದಲ್ಲಿ ತಂಗಾಳಿ ಬೀಸಿದಂತೆ.
ನದಿ ಹೇಗೆ ಹರಿಯುತ್ತಾ ಮುಂದೆ ಸಾಗಿ ಕಸ ಕಡ್ಡಿಗಳನ್ನು ಒಂದು ಕಡೆಗೆ ಒಗೆದು ಸ್ವಚ್ಛತೆ ಕಾಪಾಡಿ ಕೊಳ್ಳುತ್ತದೆಯೋ ಹಾಗೆ ಜೀವನದಲ್ಲಿ ರಿಫ್ರೆಶ್ ಆಗುವುದು ಕೂಡ ತುಂಬಾ ಅವಶ್ಯಕ. ರಿಫ್ರೆಶ್ ಆಗುವುದು ಅಂದರೆ ಕಾಲ ಕಾಲಕ್ಕೆ ನಮ್ಮನ್ನು ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿ ಕೊಳ್ಳುತ್ತ ಮತ್ತು ಹೊಂದಾಣಿಕೆಯನ್ನು ಮೈಗೂಡಿಸಿ ಕೊಂಡು ಜೀವನದಲ್ಲಿ ಹೊಸತನವನ್ನು ಕಂಡು ಕೊಳ್ಳುವುದು.
ಮೊಬೈಲ್ ಹೇಗೆ ಫಾರ್ಮ್ಯಾಟ್ ಮಾಡಿಸಿ ಅದು ಅಪ್ಡೇಟ್ ಆಗುವಂತೆ ಮಾಡುತ್ತೇವೆಯೋ ಹಾಗೆ ನಮ್ಮ ಜೀವನದಲ್ಲಿ ಮೊದಲೇ ಹೂವಿನ ಮುಖವಾಡದ ಇರಿಯುವ ಮುಳ್ಳುಗಳನ್ನು ಕಿತ್ತೆಸೆದರೆ ಅದು ರಿಫ್ರೆಶ್ ಆದಂತೆಯೇ.
ಬದುಕಿನಲ್ಲಿ ಕೆಲವೊಂದು ಸಂಗತಿಗಳನ್ನು ಡಿಲೀಟ್ ಮಾಡಿ ರಿಫ್ರೆಶ್ ಬಟನ್ ಒತ್ತಿದರೆ ನಮ್ಮ ಜೀವನಕ್ಕೆ ಒಂದು ಕಳೆ ಬರುತ್ತದೆ. ರಿಫ್ರೆಶ್ ಆಗುವುದು ಅಂದರೆ ನಮ್ಮನ್ನು ಆವರಿಸಿದ, ಆದರೆ ನಮ್ಮ ಜೀವನಕ್ಕೆ ಬೇಡವಾದ ಸಂಗತಿಗಳನ್ನು ಕಿತ್ತೆಸೆದು ನಮ್ಮ ಗುರಿಯ ಕಡೆಗೆ ಹೆಜ್ಜೆ ಹಾಕಿದರೆ ನಮ್ಮ ಜೀವನಕ್ಕೊಂದು ಅರ್ಥ ಬಂದಂತೆ.
ಹಾವು ಹೇಗೆ ಪೊರೆ ಕಳಚಿ ಮುಂದೆ ಸಾಗುತ್ತದೆಯೋ ಹಾಗೆ ಕಡ್ಡಿ ಹಾಕುವವರು, ಕಡ್ಡಿ ಗೀರಿ ಒಗೆದು ತಮಾಷೆ ನೋಡುವವರನ್ನು ನಮ್ಮ ಜೀವನದಿಂದ ಗೇಟ್ ಪಾಸ್ ಕೊಟ್ಟರೆ ನಮ್ಮ ಜೀವನ ತುಂಬ ಸುಧಾರಿಸುತ್ತದೆ. ಅಲ್ಲವೇ? ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


