ಮಂಗಳಾದೇವಿ ಜಾತ್ರೋತ್ಸವ: ಸಾಂಸ್ಕೃತಿಕ ಕಲಾ ವೈಭವ

Upayuktha
0


ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಹಲವು ವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಈ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ಅತ್ಯಂತ ವೈಭವಪೂರಿತವಾಗಿ ನಡೆದು ನೆರೆದಿರುವ ಪ್ರೇಕ್ಷಕರನ್ನು ರಂಜಿಸಿತು.


ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಪ್ರತಿಮ ಕಲಾವಿದರಾದ ವರ್ಷಾ ಶೆಟ್ಟಿ, ದೀಕ್ಷಾ ಕುಲಾಲ್, ನವ್ಯಶ್ರೀ ಕುಲಾಲ್, ಹಂಶಿತ್ ಆಳ್ವ, ಭಾನ್ವಿ ಕುಲಾಲ್, ಆರಾಧ್ಯ ಪೂಜಾರಿ, ಸ್ವಾತಿ ರೈ, ಮೈತ್ರಿ ಎಸ್, ಜಯಲಕ್ಷ್ಮಿ ಕುಲಾಲ್, ಧನ್ಯಶ್ರೀ ಕುಲಾಲ್, ಯಾಶಿಕಾ ರೈ, ಜಿಶಾನ್ವಿ ಎಸ್, ಹರ್ಷಾ ಕುಲಾಲ್, ರಮ್ಯಾ ಶಿವರಾಜ್, ತೇಜೂಷ ಮುಂತಾದವರು ಪ್ರತಿಭಾ ಪ್ರದರ್ಶನ ನೀಡಿ ಯಶಸಸ್ವಿಗೊಳಿಸಿದರು.


ಕಾರ್ಯಕ್ರಮಕ್ಕೆ ನೆರೆದಿರುವ ಕಲಾಭಿಮಾನಿಗಳ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಕಾರ್ಯಕ್ರಮದ ಕೊನೆಯಲ್ಲಿ ದೇವಳದ ಆಡಳಿತ ಮಂಡಳಿಯ ರಂಜಿತ್ ಮಂಗಳೂರು, ಸಂಸ್ಥೆಯ ಗೌರವಾಧ್ಯಕ್ಷ ಗಣೇಶ್ ಪ್ರಸಾದ್ ಆಳ್ವ ಹಾಗೂ ದೇವಸ್ಥಾನದ ಅನುವಂಶಿಕ ಮುಕ್ತೇಸರರು ಹರೀಶ್ ಐತಾಳ ಮಂಚಿ ಇವರ ಉಪಸ್ಥಿತಿಯಲ್ಲಿ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top