ಕರೆಯದೇ ಬರುವ ಅತಿಥಿಗಳು

Upayuktha
0


ಮ್ಮ ಹಾಸ್ಟೆಲ್ ಜೀವನದಲ್ಲಿ ಓದು, ಸ್ನೇಹ, ಗಲಾಟೆ ಇವುಗಳ ನಡುವೆ ಒಂದು ವಿಚಿತ್ರ ಅನುಭವ ಪ್ರತಿದಿನ ನಡೆಯುತ್ತಿರುತ್ತದೆ. ನಮ್ಮ ಹಾಸ್ಟೆಲ್‌ಗೆ ಕೆಲವು “ಕರೆಯದೆ ಬರುವ ಅತಿಥಿಗಳು” ಇದ್ದಾರೆ - ಅವೇ ಮಂಗಗಳ ಗುಂಪು! ಅವರಿಗೆ ಆಹ್ವಾನ ಬೇಕಾಗಿಲ್ಲ, ಅನುಮತಿ ಬೇಕಾಗಿಲ್ಲ. ಯಾವಾಗ ಬೇಕಾದರೂ ಬಂದು, ತಮ್ಮ ಹಕ್ಕಿನಂತೆ ವರ್ತಿಸುತ್ತವೆ.


ಈ ಮಂಗಗಳು ದಿನದಲ್ಲಿ ಒಂದು ಸಲ ಬಾರದೇ ಇದ್ದರೆ ಅದೇ ಆಶ್ಚರ್ಯ! ಸರಿಯಾದ ಸಮಯಕ್ಕೆ ಬಂದು ಕಿಟಕಿಗಳ ಬಳಿ ಕುಳಿತುಕೊಂಡು ಒಳಗೆ ಏನಿದೆ ಎಂದು ಹುಡುಕಾಟ ಆರಂಭ ಮಾಡುತ್ತವೆ. ಇದು ಈಗ ಅವುಗಳ ದೈನಂದಿನ ಚಟುವಟಿಕೆಯ ಭಾಗವಾಗಿಬಿಟ್ಟಿದೆ.ಹಾಸ್ಟೆಲ್ ಹೊರಗಡೆ ಮರಗಳಲ್ಲಿ ಸಾಕಷ್ಟು ಹಣ್ಣುಗಳಿದ್ದರೂ, ಅವುಗಳಿಗೆ ಅವು ಬೇಡ. ನಮ್ಮ ರೂಮ್‌ನಲ್ಲಿ ಇಟ್ಟಿರುವ ಹಣ್ಣುಗಳೇ ಅವುಗಳ ಗುರಿ.ಇವು ಕೇಳೋದಿಲ್ಲ… ನೇರವಾಗಿ ತೆಗೆದುಕೊಂಡೇ ಹೋಗುತ್ತವೆ! ಯಾರಾದರೂ ತಡೆಯೋಕೆ ಹೋದರೆ, ನಮ್ಮನ್ನೇ ಹೆದರಿಸಿ ಹಿಂದಕ್ಕೆ ಓಡಿಸುತ್ತವೆ. 


ಒಮ್ಮೆ ಕಿಟಕಿ ಅಥವಾ ಬಾಗಿಲು ತೆರೆದಿದ್ದರೆ ಸಾಕು… ಇವು ನೇರವಾಗಿ ಒಳಕ್ಕೆ ನುಗ್ಗಿ ಬಿಡುತ್ತವೆ. ಆ ರೂಮ್ ತಮ್ಮದೇ ಅನ್ನೋ ತರಹ ವರ್ತಿಸುತ್ತವೆ. ನಾವು ಹೊರಗೆ ನಿಂತು ನೋಡ್ತಿರೋದು — “ಇದು ನಮ್ಮ ರೂಮ್ ಆ? ಅಥವಾ ಅವುಗಳದಾ?” ಅನ್ನೋ ಅನುಮಾನ ಬರುತ್ತದೆ.ಈ ಮಂಗಗಳ ಕಾರಣದಿಂದ ಕಿಟಕಿ ಅಥವಾ ಬಾಗಿಲು ತೆರೆದಿಡೋದು ದೊಡ್ಡ ಸಾಹಸವಾಗಿಬಿಟ್ಟಿದೆ. ಯಾವಾಗ ಈ ಮಂಗಗಳ ಗುಂಪು ಬಂದು ಹೋಗ್ತಾರೋ ಅನ್ನೋ ಚಿಂತೆ ಸದಾ ಇರುತ್ತದೆ.


ಆದರೂ ಕೊನೆಯಲ್ಲಿ, ಈ ಕರೆಯದೆ ಬರುವ ಅತಿಥಿಗಳು ನಮ್ಮ ದಿನಚರಿಯ ಒಂದು ಭಾಗವಾಗಿಬಿಟ್ಟಿವೆ. ಮಂಗಗಳನ್ನು ನೋಡಿ ಎದ್ದು ಬಿದ್ದು ಓಡುವ ನಮ್ಮ ರೂಮ್‌ನವರು ಒಂದೆಡೆ, ದುಡ್ಡು ಕೊಟ್ಟು ತಂದ ಹಣ್ಣು-ತಿಂಡಿಗಳು ಹೋದವಲ್ಲಾ ಎಂದು ಚಿಂತಿಸುವ ಇನ್ನೊಬ್ಬರು ಮತ್ತೊಂದೆಡೆ!


ಇವೆಲ್ಲದರ ನಡುವೆ, ಈ ಸಣ್ಣ ಗಲಾಟೆಗಳನ್ನು ನೋಡಿ ನಗುತ್ತಾ, ಮಜಾ ಪಡುವವರೂ ಇದ್ದಾರೆ. ಹೀಗಾಗಿ, ಈ ಮಂಗಗಳು ನಮಗೆ ಕೇವಲ ತೊಂದರೆ ಕೊಡೋ ಅತಿಥಿಗಳು ಅಲ್ಲ — ನಮ್ಮ ಹಾಸ್ಟೆಲ್ ಜೀವನಕ್ಕೆ ನಗು, ಗಲಾಟೆ ಮತ್ತು ಮರೆಯಲಾಗದ ನೆನಪುಗಳನ್ನು ನೀಡುವ ವಿಶೇಷ ಅತಿಥಿಗಳು.


-ರಮ್ಯಾ ನಾಯ್ಕ್, 

ಎಸ್. ಡಿ. ಎಂ. ಉಜಿರೆ, ಕಾಲೇಜ್‌



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top