ಡಾ.ಎಂ.ಎಸ್.ದುರ್ಗಾಪ್ರವೀಣ್ ಅವರ ‘ಅನುವಾದ-ಅಧ್ಯಯನ’ ಕೃತಿಗೆ ‘ಬಿಎಂಶ್ರೀ ಪುಸ್ತಕ ಪ್ರಶಸ್ತಿ’

Upayuktha
0


ಮಂಗಳೂರು: ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್. ದುರ್ಗಾಪ್ರವೀಣ ಅವರ ‘ಅನುವಾದ-ಅಧ್ಯಯನ’ ಸಂಶೋಧನಾ ಕೃತಿಯು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ನೀಡುವ 2024-25ನೇ ಸಾಲಿನ ‘ಬಿಎಂಶ್ರೀ ಪುಸ್ತಕ ಪ್ರಶಸ್ತಿ’ಗೆ ಭಾಜನವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ರಾಜ್ಯಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನದಲ್ಲಿ ಡಾ. ರಾಮಲಿಂಗೇಶ್ವರ (ಸಿಸಿರಾ) ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸುಮಂಗಲಿ ಸೇವಾಶ್ರಮ ಟ್ರಸ್ಟ್ ಹಾಗೂ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಆಯೋಜಿಸಿದ್ದ ಈ ಸಮಾರಂಭದಲ್ಲಿ ಶ್ರೀಮತಿ ಇಂದಿರಾ ಕೃಷ್ಣಪ್ಪ, ಡಾ.ಎಸ್.ಜಿ. ಸುಶೀಲಮ್ಮ, ನಾಡೋಜ ಡಾ.ಮನು ಬಳಿಗಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಲ್.ಎನ್. ಮುಕುಂದರಾಜ್, ಡಾ.ವಾದಿರಾಜು, ಡಾ. ಎಂ.ಆರ್. ಉಪೇಂದ್ರಕುಮಾರ್, ಡಾ.ಹುಲಿಕುಂಟೆ ಮೂರ್ತಿ, ಶ್ರೀ ಶಶಿಕಾಂತ್ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

 

‘ಅನುವಾದ-ಅಧ್ಯಯನ’ ಕೃತಿಯು ರಾಮನಗರದ ಡಾ. ಅಂಕನಹಳ್ಳಿ ಪಾರ್ಥ ಅವರ ಸಿದ್ದು ಪ್ರಕಾಶನದಿಂದ ಪ್ರಕಟವಾಗಿದ್ದು ಭಾಷಾಂತರ ಅಧ್ಯಯನ ಕ್ಷೇತ್ರಕ್ಕೆ ಮೌಲಿಕವಾದ ಕೊಡುಗೆಯಾಗಿದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ‘ಎಚ್.ಎನ್.ಪ್ರಶಸ್ತಿ-2025’, ಸುರ್ವೆ ಕಲ್ಚರಲ್ ಅಕಾಡೆಮಿಯ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗಳು ಡಾ. ದುರ್ಗಾಪ್ರವೀಣ ಅವರಿಗೆ ಸಂದಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top