ಗೋವಿಂದದಾಸ ಕಾಲೇಜು, ಸುರತ್ಕಲ್‌ನಲ್ಲಿ ಬ್ಯುಲ್ಡ್, ಅಪ್ಲೈ,ಡೆಲಿವರ್‌ ಯೋಜನಾ ಕಾರ್ಯಗಾರ

Upayuktha
0


ಸುರತ್ಕಲ್‍: ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಡಿಜಟಲ್‍ ಯುಗದಲ್ಲಿ ನಾವಿದ್ದು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನಾರ್ಜನೆ ಮಾತ್ರ ಪರಿಪೂರ್ಣವಲ್ಲ. ಕಲಿತಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ಕೌಶಲ್ಯವನ್ನು ಹೊಂದಿರುವುದು ಅಗತ್ಯವಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ವಿಜಯ್ ನುಡಿದರು. 


ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು, ಸುರತ್ಕಲ್‍ನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಯೋಜನಾ ಕಾರ್ಯಗಾರ ಬ್ಯುಲ್ಡ್, ಅಪ್ಲೈ,ಡೆಲಿವರ್‌ನನ್ನು  ಉದ್ಘಾಟಿಸಿ ಮಾತನಾಡಿದರು.


ಮುಖ್ಯಅತಿಥಿ, ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಕಾರ್ಯದರ್ಶಿ ಶ್ರೀರಂಗ ಹೆಚ್. ಮಾತನಾಡಿ ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆಯು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ವ್ಯಕ್ತಿತ್ವದ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸುತ್ತದೆ ಎಂದರು.


ಗೌರವಅತಿಥಿ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ. ಮಾತನಾಡಿ ಉನ್ನತ ಶಿಕ್ಷಣ ಕ್ಷೇತ್ರವು ಸಾಂಪ್ರಾದಾಯಿಕ ಶಿಕ್ಷಣ ಕ್ರಮದಿಂದ ತಂತ್ರಜ್ಞಾನ ಶಿಕ್ಷಣ ಕ್ರಮಕ್ಕೆ ಬದಲಾವಣೆ ಹೊಂದುತ್ತಿದ್ದು ವಿದ್ಯಾರ್ಥಿಗಳು ನೂತನ  ಕೌಶಲ್ಯಗಳನ್ನು ಕಲಿಯಲು ಅವಕಾಶ ನೀಡುತ್ತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ್‍ಆಚಾರ್ಯ ಪಿ. ಮಾತನಾಡಿ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಯಲ್ಲಿ ಕಾರ್ಯಗಾರಗಳ ಪಾತ್ರ ಮಹತ್ವವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದರು.


ಸ್ನಾತಕೋತ್ತರವಿಭಾಗದ ಸಂಯೋಜಕ ಡಾ.ಗಣೇಶ್‍ ಆಚಾರ್ಯ. ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗವು ವಿದ್ಯಾರ್ಥಿಗಳಿಗಾಗಿ ನಿರಂತರ ವಿನೂತನ ವಿಷಯಗಳ ಬಗ್ಗೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.


ಪ್ರಥಮಅಧಿವೇಶನ ಪ್ರಾಜೆಕ್ಟ್ ಫಾಮ್ರ್ಯುಲೇಶನ್‍ನಲ್ಲಿಎನ್.ಐ.ಟಿ.ಕೆಯ ಸಂಶೋಧನಾ ವಿದ್ಯಾರ್ಥಿ ಪ್ರೊ.ಕೀರ್ತನ್,  ದ್ವಿತೀಯ ಅಧಿವೇಶನದಲ್ಲಿ ಪ್ರಾಜೆಕ್ಟ್ ಫೌಂಡೇಶನ್‍ನಲ್ಲಿ ಪೊಂಪೈ ಕಾಲೇಜು, ಐಕಳದ ನಿವೃತ್ತ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಡಾ. ಗುಣಕರ್‍ಎಸ್. ಮತ್ತುತೃತೀಯ ಅಧಿವೇಶನದಲ್ಲಿ ಪ್ರಾಜೆಕ್ಟ್‍ರಿಸಲ್ಟ್‍ನಲ್ಲಿ ಮಂಜುನಾಥ ಪೈ ಮೆಮೋರಿಯಲ್  ಸರಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಲೂಯೀಸ್ ಮನೋಜ್‍ಎಂಬ್ರೋಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾವಹಿಸಿದ್ದರು.


ವಾಣಿಜ್ಯ ವಿಭಾಗದ ಮುಖ್ಯಸ್ಥೆಡಾ.ಸೌಮ್ಯ ಪ್ರವೀಣ್ ಕೆ., ಪ್ರಾಧ್ಯಾಪಕ ಧನ್ಯಕುಮಾರ್ ವೆಂಕಣ್ಣವರ್, ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶ್ರೀದೇವಿ ಅಧಿವೇಶನಗಳನ್ನು ನಿರ್ವಹಿಸಿದರು.


ಪೂಜಾರಿ ಪವಿತ್ರ ವಸಂತ್ ಸ್ವಾಗತಿಸಿ ಧನ್ಯ ವಂದಿಸಿದರು.ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿದರು. ನಿಧಿ ಅಡಪ ಅತಿಥಿಗಳನ್ನು ಪರಿಚಯಿಸಿದರು.


ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದಡಾ. ಭಾರತಿ, ಹರ್ಷರಾಣಿ,  ಕೃತಿ, ಜಯಶ್ರೀ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಡಾ. ಆಶಾಲತಾ ಪಿ., ದೈಹಿಕ ಶಿಕ್ಷಣ ನಿರ್ದೇಶಕಡಾ.ಪ್ರಶಾಂತ್‍ಎಂ.ಡಿ., ವ್ಯವಹಾರಅಧ್ಯಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪುನೀತಾಆರ್., ಡಾ. ಪ್ರತೀಕ್ಷಾ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top