ಯುಕೆಟಿಎಲ್ ಯೋಜನೆ: ಭೂಮಾಲೀಕರ ಆತಂಕಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

Upayuktha
0


ಮಂಗಳೂರು: ಉಡುಪಿ- ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (Udupi–Kasaragod Transmission Limited– ಯುಕೆಟಿಎಲ್) ಯೋಜನೆಗೆ ಸಂಬಂಧಿಸಿದಂತೆ ಭೂಮಾಲೀಕರು ವ್ಯಕ್ತಪಡಿಸಿರುವ ಆತಂಕಗಳು ಹಾಗೂ ಪರಿಹಾರ ವಿಷಯದ ಬಗ್ಗೆ ಚರ್ಚಿಸಲು ಇಂದು ಮಂಗಳೂರಿನ ಗೌರವಾನ್ವಿತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.


ಸಭೆಯ ಹಿನ್ನೆಲೆಯಲ್ಲಿ ಯುಕೆಟಿಎಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ಅನ್ವಯವಾಗುವ ಕಾನೂನುಗಳು, ರಾಜ್ಯ ನಿಯಮಾವಳಿಗಳು, ಸರ್ಕಾರಿ ಅಧಿಸೂಚನೆಗಳು ಹಾಗೂ ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ನೀಡಲಾಗುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.


ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ಕಲ್ಪನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿರುವುದು ದುರದೃಷ್ಟಕರ ಎಂದು ಯುಕೆಟಿಎಲ್ ಹೇಳಿದ್ದು, ಭೂಮಾಲೀಕರೊಂದಿಗೆ ಪಾರದರ್ಶಕ ಮತ್ತು ನಿರಂತರ ಸಂವಾದ ನಡೆಸುವ ಮೂಲಕ ಅವರ ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದೆ. ರೈಟ್ ಆಫ್ ವೇ (RoW) ಹಾಗೂ ಪರಿಹಾರ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.


ಕಾನೂನು ನಿಬಂಧನೆಗಳಿಗೆ ಅನುಗುಣವಾಗಿಯೇ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುತ್ತಿದ್ದು, ಕಾಮಗಾರಿ ಆರಂಭಕ್ಕೂ ಮುನ್ನ ಹಾಗೂ ಔಪಚಾರಿಕ ಒಪ್ಪಂದಗಳಿಗೆ ಸಹಿ ಹಾಕಿದ ನಂತರ, ಪರಿಹಾರದ ಸಂಪೂರ್ಣ ಮೊತ್ತವನ್ನು (ಶೇ. 100 ರಷ್ಟು) ಭೂಮಾಲೀಕರಿಗೆ ಪಾವತಿಸಲಾಗುತ್ತದೆ ಎಂದು ಯುಕೆಟಿಎಲ್ ಸ್ಪಷ್ಟಪಡಿಸಿದೆ. ಇದುವರೆಗೆ ಲೈನ್‌ನಾದ್ಯಂತ ಮಾಡಿಕೊಳ್ಳಲಾದ ಎಲ್ಲಾ ಒಪ್ಪಂದಗಳನ್ನು ಸಂಪೂರ್ಣ ಪಾರದರ್ಶಕತೆಯಿಂದಲೇ ನಿರ್ವಹಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಸ್ಥಳೀಯ ಸಮುದಾಯದೊಂದಿಗೆ ಸೌಹಾರ್ದಯುತ ಹಾಗೂ ಗೌರವಾನ್ವಿತ ಸಂಬಂಧವನ್ನು ಕಾಪಾಡಿಕೊಳ್ಳಲು ಸಂಸ್ಥೆ ಬದ್ಧವಾಗಿದ್ದು, ಸೂಕ್ತ ಆಡಳಿತಾತ್ಮಕ ಮಾರ್ಗಗಳ ಮೂಲಕ ಶಾಂತಿಯುತ ಮತ್ತು ಅರ್ಥಪೂರ್ಣ ಮಾತುಕತೆಗೆ ಸದಾ ಸಿದ್ಧವಿರುವುದಾಗಿ ಯುಕೆಟಿಎಲ್ ತಿಳಿಸಿದೆ. ಕಾನೂನಿನ ಚೌಕಟ್ಟಿನೊಳಗೆ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top