“ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ” ಕೃತಿ ಬಿಡುಗಡೆ

Upayuktha
0


ಬೆಂಗಳೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ,  ಅಂಬುಜಾತನಯ ಅವರ ರಚನೆಯ “ಹಿಂದವಿ ಹೃದಯ ಸಾಮ್ರಾಟ್ ಬಾಳಾ ಸಾಹೇಬ್ ಠಾಕ್ರೆ” ಕೃತಿಯನ್ನು ಪರಿಷತ್ ರಾಜ್ಯಾಧ್ಯಕ್ಷ ಎಸ್. ಸುರೇಶ್ ರಾವ್ ಸಾಟೆ ಅವರು ಬಿಡುಗಡೆಗೊಳಿಸಿದರು.


ಕಾರ್ಯಕ್ರಮದಲ್ಲಿ ಪರಿಷತ್ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಎಸ್.ಆರ್. ಸಿಂಧೆ, ಪ್ರಧಾನ ಕಾರ್ಯದರ್ಶಿ ಸುನಿಲ್ ರಾವ್ ಚೌಹಾಣ್, ಖಜಾಂಚಿ ವೆಂಕಟರಾವ್ ಚೌಹಾಣ್, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿ ರಾವ್, ಮರಾಠ ಪತ್ರಿಕೆಯ ಸಂಪಾದಕ ವಿಠಲ್ ರಾವ್ ಗಾಯಕವಾಡ್, ಹಿರಿಯ ಲೇಖಕ ಆನೇಕಲ್ ನ ಎಸ್. ಜಗನ್ನಾಥ್ ರಾವ್ ಬಹುಳೆ, ಸಾಧನಾ ಪ್ರಕಾಶನದ ಕೆ. ರವಿಚಂದ್ರರಾವ್ ಹಾಗೂ ಪರಿಷತ್ತಿನ ಬೆಂಗಳೂರು ವಿಭಾಗದ ಸದಸ್ಯರು ಉಪಸ್ಥಿತರಿದ್ದರು.


ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಹಿಂದವಿ ರಾಷ್ಟ್ರದ ದೃಷ್ಟಾಂತವಾಗಿ ಅಳವಡಿಸಿಕೊಂಡು, ಮಹಾರಾಷ್ಟ್ರದ ಹಿತಕ್ಕಾಗಿ ಶಿವಾಜಿ ಪಾಲನೆಯನ್ನು ಅನುಸರಿಸಿದ ಬಾಳಾ ಸಾಹೇಬ್ ಠಾಕ್ರೆ ಅವರು ದೇಶ ಕಂಡ ವರ್ಣರಂಜಿತ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದರು. ಈ ಕೃತಿಯಲ್ಲಿ ಅವರ ರಾಜಕೀಯ–ಸಾಂಸ್ಕೃತಿಕ ದೃಷ್ಟಿಕೋನಗಳು, ಮಹಾರಾಷ್ಟ್ರ–ಕರ್ನಾಟಕ ಬಾಂಧವ್ಯ ಸೇರಿದಂತೆ ವಿವಿಧ ಆಯಾಮಗಳಿಂದ ವ್ಯಕ್ತಿತ್ವ ವಿಶ್ಲೇಷಣೆ ನಡೆಸಲಾಗಿದೆ. ಜನ್ಮ ಶತಮಾನದ ಸಂಭ್ರಮದಲ್ಲಿರುವ ಠಾಕ್ರೆ ಬದುಕಿನ ಅನೇಕ ಆಯಾಮಗಳಿಗೆ ಈ ಕೃತಿ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ವ್ಯಕ್ತಪಡಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top