ಒಲವಿನ ಬಳ್ಳಿ - ಬಾಳಿನ ಹಳ್ಳಿ

Upayuktha
0



ಜೀವನದ ಪಯಣದಿ ಜೊತೆಯಾಗಿ ಸಾಗುವ ಆಸೆ,

ಮಾತುಗಳ ಹಂಗಿಲ್ಲದೆ ಮೌನದಿ ಅರಳಲಿ ಪ್ರೀತಿಯ ಭಾಷೆ.

ನೂರು ನೋವಿನ ನಡುವೆ ನಿನ್ನ ನಗು ಮದ್ದಾಗಲಿ,

ಬಾಳ ಬಂಡಿಯ ಹಾದಿಗೆ ನಿನ್ನೊಲವೇ ಬೆಳಕಾಗಲಿ ll೦೧ll 


ರೆಕ್ಕೆ ಬಿಚ್ಚಿ ಹಾರುವ ಹಂಬಲವೇಕೆ ನಮಗೆ?

ಪ್ರೀತಿಯ ಈ ಪುಟ್ಟಗೂಡೇ ಸಾಕು ನಮ್ಮ ಜಗತ್ತಿಗೆ.

ಒಬ್ಬರಿಗೊಬ್ಬರು ಆಸರೆಯಾಗಿ ಕೊನೆಯವರೆಗೂ ಇರೋಣ,

ಸೋಲಲಿ ಗೆಲ್ಲಲಿ, ಸದಾ ನಗುನಗುತ ಬಾಳೋಣ ll೦೨ll 


ಕಣ್ಣ ಸನ್ನೆಯಲ್ಲೇ ತಿಳಿಯಲಿ ಮನದ ಅಂತರಾಳ,

ಭರವಸೆಯ ಆಧಾರವೇ ನಮ್ಮ ಈ ಸಂಬಂಧದ ಮೂಲ.

ಜೀವನದ ಪುಟಗಳಲ್ಲಿ ಒಲವಿನ ಇತಿಹಾಸ ಬರೆಯೋಣ,

ಉಸಿರಿರುವ ತನಕ ಪರಸ್ಪರ ಪ್ರಾಣವಾಗಿ ಬದುಕೋಣ ll೦೩ll 


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top