ಸುರತ್ಕಲ್‌: ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ

Upayuktha
0


ಸುರತ್ಕಲ್‌: ರೋಟರಿ ಸೇವಾ ಸಂಸ್ಥೆ ವಿನೂತನ ಕಾರ್ಯಕ್ರಮಗಳಿಂದ ವಿಶ್ವ ಮಾನ್ಯವಾಗಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ 3181 ರೋಟರಿ ಜಿಲ್ಲೆಯ ರೋಟರಿ ಕ್ಲಬ್‌ಗಳು ವಿವಿಧ ಯೋಜನೆಗಳ ಮೂಲಕ ಸಮಾಜಾಭ್ಯುದಯದಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್‌ನ ಅಧ್ಯಕ್ಷ ಸುಬೋಧ್ ದಾಸ್ ನುಡಿದರು.


ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುರತ್ಕಲ್ ರೋಟರಿ ಕ್ಲಬ್ ಮತ್ತು ಮಂಗಳೂರು ಕೋಸ್ಟಲ್ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ರೋಟರಿ 121 'ರೋಟರಿಯಲ್ಲಿ ಸೂರ್ಯ ಎಂದೂ ಮುಳುಗುವುದಿಲ್ಲ' ವಿಶ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.


ದಕ್ಷಿಣ ಏಷ್ಯಾದ ಇಎಸ್ ಆರ್ ಎಗ್ (ESRAG) ರೋಟರಿ ಪರಿಸರ ಕಾರ್ಯಯೋಜನೆ ಸಂಸ್ಥೆಯು ವಿಶ್ವ ರೋಟರಿಯ ಸಹಯೋಗದಲ್ಲಿ ಆಯೋಜಿಸಿರುವ ಅಂತರ್ಜಾಲ ವಿಶ್ವ ರೋಟರಿ ಯೋಜನೆಗಳನ್ನು ವೀಕ್ಷಿಸಲಾಯಿತು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ, ರೋಟರಿ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿಶೇಷ ಧನ್ಯತೆಯ ಅನುಭವ ಪಡೆದುಕೊಳ್ಳಬಹುದು ಎಂದರು.


ಹಿರಿಯ ರೋಟರಿ ಸದಸ್ಯ ರೊ. ಶ್ರೀನಿವಾಸ ರಾವ್ ಪಾದೆಬೆಟ್ಟು ಅವರು 'ರೋಟರಿ- 121'ರ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಸುರತ್ಕಲ್ ರೋಟರಿಯ ಕಾರ್ಯದರ್ಶಿ ರಾಮ್ ಮೋಹನ್ ವೈ. ವಂದಿಸಿದರು.


ಸುರತ್ಕಲ್ ರೋಟರಿ ಕ್ಲಬ್ ನ ಪದಾಧಿಕಾರಿಗಳಾದ ಶ್ರೀಧರ್ ಟಿ.ಎನ್, ಶ್ರೀನಿವಾಸ್ ರಾವ್, ರಮೇಶ್ ರಾವ್,ಡಾ. ಕೆ. ರಾಜಮೋಹನ್ ರಾವ್, ಯಶೋಮತಿ ರವೀಂದ್ರನಾಥ್, ಚಂದ್ರಕಾಂತ್, ಕೃಷ್ಣ ಮೂರ್ತಿ, ಸತೀಶ್ ಸದಾನಂದ, ಮೋಹನ್ ರಾವ್, ಭರತ್ ತಿಂಗಳಾಯ, ರಮೇಶ್ ಭಟ್, ಡಾ. ವೀರಶೆಟ್ಟಿ ಗುಮಟಾಪುರೆ, ಶೀಲಾ ಶ್ರೀನಿವಾಸ್, ಮಂಗಳೂರು ಕೋಸ್ಟಲ್ ರೋಟರಿ ಕ್ಲಬ್‌ನ ತನುಜಾ, ನವೀನ್ ಇಡ್ಯಾ, ರೂಪ ನವೀನ್, ಸುಧಾಕರ ಸಾಲ್ಯಾನ್, ಪೂರ್ಣ ಸುಧಾಕರ್, ಪ್ರಶಾಂತ್, ಪ್ರಕಾಶ್ ಡಿ ಸೋಜಾ, ವಿಹಾನ್ ಹಾಗೂ ಸದಸ್ಯರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top