ಶಾಸ್ತ್ರೀಯ ಕಲೆಗಳ ಅಭಿರುಚಿ ಮೂಡಿಸುವ ಸ್ಪಿಕ್ ಮಿಕೆ ಅಭಿಯಾನ

Upayuktha
0


ಸುರತ್ಕಲ್‌: ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಕಲೆಗಳ ಕುರಿತು ಅಭಿರುಚಿ ಮೂಡಿಸುವ ಸ್ಪಿಕ್ ಮಿಕೆ ಅಭಿಯಾನ ವಿಶಿಷ್ಟವಾದುದು. ಶ್ರೇಷ್ಠ ಕಲಾವಿದರಿಂದ ನಡೆಸಲ್ಪಡುವ ಕಾರ್ಯಾಗಾರಗಳ ಪ್ರಯೋಜನವನ್ನು ಶಾಸ್ತ್ರಿಯ ಸಂಗೀತ ಮತ್ತು ನೃತ್ಯ ಅಭ್ಯಾಸಿಗಳು ಪಡೆದು ಕೊಳ್ಳಬೇಕು ಎಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ನುಡಿದರು.


ಅವರು ಸುರತ್ಕಲ್ ನ ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಸುರತ್ಕಲ್‌ನ ಅನುಪಲ್ಲವಿಯ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುರತ್ಕಲ್ ನ ಎನ್.ಐ.ಟಿ.ಕೆ. ಯ ಸ್ಪಿಕ್‌ಮೆಕೆ ಘಟಕದ ವಿದ್ಯಾರ್ಥಿ ಸದಸ್ಯರ ಜೊತೆಗಿನ ಸೌಹಾರ್ದ ಮಾತುಕತೆಯಲ್ಲಿ ಮಾತನಾಡಿದರು.


ಮಣಿ ಕೃಷ್ಣಸ್ವಾಮಿ ಅಕಾಡೆಮಿ ಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಮಾತನಾಡಿ ಸ್ಪಿಕ್ ಮೆಕೆ ಘಟಕ ವು ಸ್ಥಳೀಯ ಕಲಾವಿದರು ಮತ್ತು ಸಂಘಟಕರ ಒಳಗೊಳ್ಳುವಿಕೆಯೊಂದಿಗೆ ವಿರಾಸತ್ ನ್ನು ಸೊಗಸಾಗಿ ಸಂಘಟಿಸಿದೆ. ಶಾಸ್ತ್ರೀಯ ಕಲೆಗಳ ಕುರಿತು ವಿದ್ಯಾರ್ಥಿಗಳ ಅಭಿರುಚಿ ಮತ್ತು ಬದ್ಧತೆ ಶ್ಲಾಘನೀಯ ಎಂದರು.


ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಸ್ಪಿಕ್‌ಮಿಕೆ ಅಭಿಯಾನದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳನ್ನು ಒಳಗೊಳಿಸುವ  ಮೂಲಕ ಸ್ಪಿಕ್ ಮಿಕೆಯ ಆಶಯವನ್ನು ವಿಸ್ತರಣೆ ಮಾಡಬಹುದು ಎಂದರು.


ಎನ್. ಐ. ಟಿ. ಕೆ. ಘಟಕದ ಸಂಯೋಜಕ ವಿಕ್ರಮ್  ಮಾತನಾಡಿ ನಮ್ಮ ನಾಡಿನ ಬಹು ಸಂಸ್ಕೃತಿಯ ಅರಿವು ಮೂಡಿಸುವುದರೊಂದಿಗೆ ವಿಶಿಷ್ಟ ಅನುಭವ ಗಳು ವಿದ್ಯಾರ್ಥಿಗಳಿಗೆ ಲಭ್ಯ ವಾಗುತ್ತದೆ ಎಂದರು.


ಶ್ರೀ ಶಾರದಾ ನಾಟ್ಯಾಲಯ ಕುಳಾಯಿಯ ನಿರ್ದೇಶಕಿ ಭಾರತಿ ಶಾಸ್ತ್ರೀಯ ಕಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕಲಾಭ್ಯಾಸದ ಪರಿಣತಿ ಕಾರ್ಯಾಗಾರ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳವರಾಗಬೇಕು ಎಂದರು.


ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಾವಿದೆ  ಶ್ರೇಯ ಕೊಳತ್ತಾಯ ಮಾತನಾಡಿ, ಸ್ಪಿಕ್ ಮೆಕೆಯಿಂದ ಹಿರಿಯ ಸಂಗೀತ ಕಲಾವಿದರ ಜೊತೆಗಿನ ಒಡನಾಟವು ದೊರಕಿ ಸಂಗೀತ ಹಾಗೂ ನೃತ್ಯ ಕಲೆಯ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವಿಭು ರಾವ್ ಮತ್ತು ಸ್ಪಿಕ್ ಮೆಕೆಯ ವಿದ್ಯಾರ್ಥಿ ಕಾರ್ಯಕರ್ತರು ಉಪಸ್ಥಿತರಿದ್ದರು.


- ಗೀತಾ ಲಕ್ಷ್ಮೀಶ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top