ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರತಿಷ್ಠಾ ಬ್ರಹ್ಮ ಕಲಶಾಭಿಷೇಕ ವಿಜ್ಞಾಪನ ಪತ್ರ ಬಿಡುಗಡೆ

Upayuktha
0


ಮಂಗಳೂರು: ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶಾಭಿಷೇಕ ಏಪ್ರಿಲ್ 23 ರಂದು ನಡೆಯಲಿದೆ. ಇದರ ಪ್ರಯುಕ್ತ ವಿಜ್ಞಾಪನಾ ಪತ್ರ ಬಿಡುಗಡೆ ಫೆಬ್ರವರಿ 22ರಂದು ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ, ಅತ್ತಾವರದಲ್ಲಿ ನಡೆಯಿತು.

 

ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿಯ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಆಶೀರ್ವಚನ ನೀಡಿದರು. ಮಂಗಳೂರು ದಕ್ಷಿಣ ಶಾಸಕ  ವೇದವ್ಯಾಸ ಕಾಮತ್ ರವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಅಯ್ಯಪ್ಪ ದೇವಸ್ಥಾನ ಇದಾಗಿದ್ದು ಇದರ ಬ್ರಹ್ಮಕಲಶಾಭಿಷೇಕ ಶುಭಕಾರ್ಯ ಒದಗಿರುವುದು ನಮ್ಮೆಲ್ಲರ ಭಾಗ್ಯ. ಈ ದೇವತಾ ಕಾರ್ಯದಲ್ಲಿ ಅಯ್ಯಪ್ಪ ಭಕ್ತ ಅಭಿಮಾನಿಗಳು ಊರಾ ಹಾಗೂ ಪರ ಊರ ಭಕ್ತಾ ಅಭಿಮಾನಿಗಳು ಎಲ್ಲರೂ ಒಟ್ಟಿಗೆ ಸೇರಿ ದೇವತಾ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.


ಮುಖ್ಯ ಅತಿಥಿಗಳಾಗಿ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮಣ್ಣ ನಾಯ್ಕ್, ಕಾರ್ಪೊರೇಟರ್ ಅಬ್ದುಲ್ ರವೂಫ್,‌ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ರತೀಂದ್ರನಾಥ್, ಬ್ರಹ್ಮ ಕಲಶದ ಅಧ್ಯಕ್ಷರಾದ ಸೂರಜ್ ರಾಘವನ್, ಕಾರ್ಯಾಧ್ಯಕ್ಷರಾದ ಗೋಕುಲದಾಸ್ ಮತ್ತು ಮುರಳೀಧರ್, ಗೌರವ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜರತ್ನ ಸನಿಲ್, ಗೌರವ ಕಾರ್ಯದರ್ಶಿಗಳಾದ ಜನಾರ್ಧನ್ ಅತಾವರ ಮತ್ತು ಮೋಹನ್ ಪೂಜಾರಿ, ಅಯ್ಯಪ್ಪ ದೇವಸ್ಥಾನ ಪಡೀಲ್  ಇದರ ಅಧ್ಯಕ್ಷರಾದ ಮೋಹನ ಪಡೀಲ್, ಅಯ್ಯಪ್ಪ ಸೇವಾ ಸಮಿತಿಯ  ಜಿಲ್ಲಾ ಅಧ್ಯಕ್ಷ ಗಣೀಶ್, ಕ್ಷಿತಿ ಮಮ್ಲೂರು, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ/ ಮಾಲತಿ ಶೆಟ್ಟಿ ಮಾಣೂರು, ಭಕ್ತ ಸಮಿತಿ ಅಧ್ಯಕ್ಷ ಸೂರ್ಯಕಾಂತ್ ಉಪಸ್ಥಿತರಿದ್ದರು. ರಘುವೀರ್  ಬಾಬುಗುಡ್ಡೆ ಸ್ವಾಗತಿಸಿ ವಂದಿಸಿದರು. ಹಲವಾರು ಸಂಘಟನೆಗಳ, ಮುಖಂಡರು, ಊರಿನ ನಾಗರಿಕರು ಭಾಗವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top