ವಿಜ್ಞಾನ ಎಂದರೆ ಜ್ಞಾನಾರ್ಜನೆ, ತಂತ್ರಜ್ಞಾನ ಅದನ್ನು ಕಾರ್ಯಗತಗೊಳಿಸುವ ಸಾಧನ: ಪದ್ಮಶ್ರೀ ಎ.ಎಸ್. ಕಿರಣ್ ಕುಮಾರ್

Upayuktha
0


 

ಬೆಂಗಳೂರು: ಇಸ್ರೋದ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ. ಎ.ಎಸ್. ಕಿರಣ್ ಕುಮಾರ್ ಅವರು ಫೆಬ್ರವರಿ 25, 2026ರಂದು ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯವು, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಿದ ‘ಜೀವಗೋಳ 2026: ಸುಸ್ಥಿರ ಗ್ರಹಕ್ಕಾಗಿ ವಿಜ್ಞಾನ’ ಎಂಬ ಶೀರ್ಷಿಕೆಯ ರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

 

ಭವಿಷ್ಯದಲ್ಲಾಗುವ ಪರಿಣಾಮಗಳನ್ನು ಊಹಿಸುವ ಸಾಮರ್ಥ್ಯ ಕ್ರಮೇಣವಾಗಿ ಸುಧಾರಿಸಿದ್ದು ನಾವು ಮಾನವ ಕಣ್ಣಿಗೆ ಕಾಣುವ ಹಾಗೂ ಕಾಣದನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದರು. 


ನಾವು ಆರಂಭದಿಂದಲೇ ಕಡಿಮೆ ಸಮಯದಲ್ಲಿ ವಿಶ್ವದಾದ್ಯಂತದ ಮಾಹಿತಿಯನ್ನು ಪಡೆಯುವ ತಾಂತ್ರಿಕ ಪ್ರಗತಿಯ ಸಾಮರ್ಥ್ಯವನ್ನು ಹೊಂದಿದ್ದೇವೆ. 


ಮಾನವರು ತಮ್ಮ ಏಳಿಗೆಗಾಗಿ ಪ್ರಕೃತಿಯನ್ನು ಶೋಷಿಸುತ್ತಿದ್ದು, ಜಾಗತೀಕ ಸವಾಲುಗಳಿಗೆ ದಾರಿ ಮಾಡುತ್ತಿದ್ದಾರೆ. ಆದರೆ ಅದರ ಪರಿಣಾಮಗಳನ್ನು ನಿರ್ಲಕ್ಷಿಸುವ ಬದಲು ಪರಿಗಣಿಸಬೇಕು.


ಸೂರ್ಯನು ಎಲ್ಲಾ ರೀತಿಯ ನೈಸರ್ಗಿಕ ಶಕ್ತಿಯ ಮೂಲ, ಆದ್ದರಿಂದ ಸೂರ್ಯ ಮತ್ತು ಭೂಮಿಯ ಪರಸ್ಪರ ಸಂಬಂಧವನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿ, ಮುನ್ನೆಚ್ಚರಿಕೆಗಳನ್ನು ಊಹಿಸಬಹುದು. 


ಚಿಕ್ಕಮಕ್ಕಳಿಗೆ ಕುತೂಹಲ, ನೂತನ ಕಲಿಕೆಯ ಹಂಬಲವಿದ್ದಂತೆ, ಪ್ರಕೃತಿಯನ್ನು ಅರಿಯುವ ಹಂಬಲವನ್ನು ಬೆಳೆಸಿಕೊಳ್ಳಬೇಕೆಂದರು. 


ಮಾನವನು ಮೊದಲಿನಿಂದಲೂ ಏಕಕಾಲದಲ್ಲಿ ಒಂದೇ ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಸವಾಲುಗಳನ್ನು ಎದುರಿಸಿ, ಪರಿಹರಿಸುವ ಸಾಮರ್ಥ್ಯವನ್ನು ಹೊಂದಬೇಕು ಎಂದರು. 


ಈ ಕಾರ್ಯಕ್ರಮವು ಬಿ.ಎಂ.ಎಸ್. ಶಿಕ್ಷಣ ದತ್ತಿಯ  ಸದಸ್ಯ ಕಾರ್ಯದರ್ಶಿ ಮತ್ತು ಬಿ.ಎಂ.ಎಸ್. ಮಹಿಳಾ ಕಾಲೇಜಿನ ಅಧ್ಯಕ್ಷೆ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರ ಆಶ್ರಯದಲ್ಲಿ ನಡೆಯಿತು.


ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಘುಕುಮಾರ ಎನ್ ರವರು ಗಣ್ಯರನ್ನು ಸ್ವಾಗತಿಸಿದರು. 


ನಂತರ ಗಣ್ಯರಿಂದ ಅಬ್ಸ್ಟ್ರಾಕ್ಟ್ (Abstract) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 


ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ರಮೇಶ್ ಬಿ ರವರು   ಮಾತನಾಡಿ, ಈ ಸಂಸ್ಥೆಯು ನಿರಂತರವಾಗಿ 60 ವರ್ಷಗಳಿಂದ ಮಹಿಳಾ ಸಬಲೀಕರಣ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಶೈಕ್ಷಣಿಕ ಉತ್ತುಂಗಕ್ಕೇರುತ್ತಿದೆ ಇಂದು ಪ್ರಶಂಸಿಸಿದರು. 


ಈ ದಿನದ ವಿಜ್ಞಾನ ಸಮ್ಮೇಳನವನ್ನೂ ಸಮಕಾಲೀನ ಜಾಗತಿಕ ಮಟ್ಟದ ಸವಾಲುಗಳನ್ನು ಉದ್ದೇಶಿಸಿ ನಡೆಸುತ್ತಿರುವುದು ಈ ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು ಬಿಂಬಿಸುತ್ತದೆ. 


ಇದು ಮಾನವ ಇತಿಹಾಸದಲ್ಲಿ ನಿರ್ಣಾಯಕ ಸಮಯ ಏಕೆಂದರೆ ಹವಾಮಾನವು ಭವಿಷ್ಯದ ಬಿಕ್ಕಟ್ಟಿನ ಬಗ್ಗೆ ಎಲ್ಲಾ ಜೀವಿಗಳನ್ನು ಕುರಿತು ಸ್ಪಂದಿಸುತ್ತಿದೆ. ಹಾಗಾಗಿ ಈ ಸಮ್ಮೇಳನವು ನವೀನ ಅಂತರ್ಶಿಸ್ತೀಯ ವಿವಿಧ ವಿಜ್ಞಾನಗಳನ್ನು ಹೊಂದುವ ಮೂಲಕ ಮಾನವ ಹಾಗೂ ಪ್ರಕೃತಿಯ ಸಂಪರ್ಕಕ್ಕೆ ಪ್ರಾಮುಖ್ಯತೆ ನೀಡುತ್ತಿದೆ.  ಪ್ಯಾಂಡೆಮಿಕ್ ಕಾಲವು ಸುಸ್ಥಿರತೆಯು ಸಾಮೂಹಿಕ ಜವಾಬ್ದಾರಿ ಎಂದು ನಮಗೆ ಕಲಿಸಿದೆ.


ವಿಜ್ಞಾನಸಕ್ತರು ಕೇವಲ ವಿಚಾರ ಸಂಕೀರ್ಣದ ಮಾನದಂಡಗಳನ್ನು ಪೂರೈಸುವುದಲ್ಲದೆ, ತಮ್ಮ ಜ್ಞಾನದಿಂದ ಸಮಾಜಕ್ಕೆ ಜವಾಬ್ದಾರಿಯುತವಾಗಿ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಸಿ.ಓ.ಇ ಆದ ಡಾ. ಸುಮಂಗಲ ಎನ್ ರವರು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ 24 ಕಾಲೇಜುಗಳಿಂದ ಸುಮಾರು 93 ವಿಜ್ಞಾನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂಶೋಧನಾ ಪ್ರಬಂಧಗಳು ಮತ್ತು ಪೋಸ್ಟರ್‌ಗಳನ್ನು ಮಂಡಿಸಿದರು. ಸುಮಾರು 200 ವಿಜ್ಞಾನೋತ್ಸಾಹಿಗಳು ಹೈಬ್ರಿಡ್ ಮೋಡ್‌ನಲ್ಲಿ ಭಾಗವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top