ರೆಡ್ ಕ್ರಾಸ್ ದ.ಕ. ಜಿಲ್ಲಾ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ತಂಡಕ್ಕೆ ಭರ್ಜರಿ ಜಯ

Upayuktha
0


ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.


ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು. 


ಸಿಎ ಶಾಂತಾರಾಮ ಶೆಟ್ಟಿ -1005, ಡಾ.ಸುಮನ.ಬಿ.-876, ಡಾ.ಸತೀಶ್ ರಾವ್-870, ಡಾ. ಬಿ. ಸಚ್ಚಿದಾನಂದ ರೈ-868, ರಾಘವೇಂದ್ರ ರಾವ್- 844,  ಪುಷ್ಪರಾಜ್ ಜೈನ್-835, ಪಿ.ಬಿ. ಹರಿಪ್ರಸಾದ್ ರೈ-810, ಯತೀಶ್ ಬೈಕಂಪಾಡಿ-797, ಸಚೇತ್ ಸುವರ್ಣ- 762, ಗುರುದತ್. ಎಂ.ನಾಯಕ್-762, ಮತ ಗಳಿಸಿ ಜಯಶಾಲಿಗಳಾದರು.


ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ.22 ರಂದು ಚುನಾವಣೆ ನಡೆದಿತ್ತು. 3654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು.


ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ ಬಿ. ಕಾರ್ಯ ನಿರ್ವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top