ಕವನ: ಕಪ್ಪಾದರೂ ಇಂಪಾಗಿದೆ

Upayuktha
0



ಹಚ್ಚ ಹಸಿರಿನ ಎಲೆಯ ನಡುವಲ್ಲಿ

ಕಪ್ಪಾದ ಪಕ್ಷಿಯನ್ನು ನೋಡು ಅಲ್ಲಿ||

ನಿನ್ನ ಹಾಡನು ಕೇಳಿ ನಾನು

ಮನದ ನೋವನು ಮರೆತೆನು ||


ಮನದಲ್ಲಿದ್ದ ನೋವನ್ನು ಮರೆಸುವೆ 

ನೀನಿಂದು||

ಯಾರ ಮನವೂ ನೋಯಿಸದೆ ಹಾಡುವೇ

ನೀನಿಂದು||

ನೀನು ನೋಡಲು ಕಪ್ಪಾಗಿದ್ದರು

ನಿನ್ನ ಕಂಠ ಇಂಪಾಗಿದೆ||


ಮರದ ಮೇಲೆ ಕೂತು ಹಾಡುವೆ

ಆದರೆ ಪ್ರಕೃತಿಗೆ ಸೌಂದರ್ಯ ಕೊಡುವೆ||

ಎಲ್ಲಾರನ್ನು ಸೆಳೆಯುತ್ತಿಯಾ 

ಹಸಿರು ತೋಟದಲ್ಲಿ ಹಾರಾಡುತ್ತಿಯಾ||

ನಿನನ್ನು ಕಂಡು ನಾ ಕಲಿತೆನು 

ಪಾಠವನು||


ನನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡೆ 

ನಿನ್ನನ್ನು||




- ಸ್ವಾತಿ. ಡಿ

ಪ್ರಥಮ ಬಿ.ಎ

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top