ಮಕ್ಕಳಿಗೆ ತಾಯಿ ಮೊದಲ ದೇವರು, ಆದರೆ ನನ್ನ ಪಾಲಿನ ಮೊದಲು ದೇವರು ನನ್ನ ಅಣ್ಣ. ತಂದೆ ತಾಯಿ ನನಗೆ ಆಶೀರ್ವಾದ ಮಾಡಿದರೆ ಅವನು ನಾನ್ನೆಲ್ಲಾ ಆಸೆಯನ್ನು ಈಡೇರಿಸುತ್ತಾನೆ. ಅವನಿಗೆ ಎಷ್ಟೇ ಕಷ್ಟಗಳಿದರೂಯಾವಾಗಲೂ ನನ್ನ ಸಂತೋಷಕ್ಕಾಗಿ ತನ್ನೆಲ್ಲಾ ನೋವನ್ನು ಮರೆತು ನನ್ನೊಂದಿಗೆ ಮಗುವಾಗಿ ಇರುತ್ತಾನೆ.
ಕೆಲವೊಮ್ಮೆ ನಾನು ಕೂಗಿದ ಸಂದರ್ಭದಲ್ಲಿ `ನಿನ್ನೊಂದಿಗೆ ನಾನಿದ್ದೇನೆ ಚಿಂತಿಸಬೇಡ' ಎಂದು ಹೇಳುವ ಮಾತು ನನ್ನೊಳಗೆ ಹುರುಪನ್ನು ತರುತ್ತದೆ. ಅವನು ಹೇಳುವ ಮಾತು, ಮೌಲ್ಯಗಳು, ಶ್ರಮ, ಶಿಸ್ತಿನ ನಡತೆ ನನ್ನ ಜೀವನಕ್ಕೆ ಒಳ್ಳೆಯ ಮಾರ್ಗದರ್ಶನವಾಗಿದೆ.
ನನ್ನ ಜೀವನದಲ್ಲಿ ನನಗೆ ಒಳ್ಳೆಯ ಸ್ನೇಹಿತನಿದ್ದನೆಂದರೆ ಅದು ಅಣ್ಣ ಮಾತ್ರ. ಪರಿಶುದ್ಧ ಪ್ರೀತಿಯನ್ನು ಬೀರುವ ಅವನ ನಗು ನನ್ನೊಳಗೆ ಹೊಸ ಹುರುಪನ್ನು ತಂದಿರುತ್ತದೆ. ಅವನು ನನ್ನನ್ನು ಚಿಕ್ಕ ಮಗುವಿನಂತೆ ರಕ್ಷಣೆ ಮಾಡುತ್ತಾ ಬೆಂಬಲವಾಗಿ ನನ್ನ ಬದುಕನ್ನು ಸುಂದರಗೊಳಿಸಿದ್ದಾನೆ.
ನಮ್ಮ ನಡುವೆ ಎಷ್ಟೇ ಜಗಳ ಕೋಪಗಳಿದ್ದರೂ, ನನಗೆ ತೊಂದರೆಯಾದರೆ ಅವನ ಜೀವವನ್ನು ಲೆಕ್ಕಿಸದೆ ರಕ್ಷಣೆಗೆ ನಿಲ್ಲುತ್ತಾನೆ. ನನ್ನ ಅಣ್ಣ ನನ್ನ ಮೊದಲ ದೇವರು ಅವನ ಸ್ಥಾನವನ್ನು ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವನ ಗುಣಗಾನ ಮಾಡುವುದಕ್ಕೆ ಪದಗಳೇ ಇಲ್ಲ.
ಕಣ್ಣಿಗೆ ಕಾಣಿಸುವ ದೇವರು ಅವನು ನನ್ನ ಅಣ್ಣ
- ಭವಿಷ್ಯ ರೈ
ವಿವೇಕಾನಂದ ಕಾಲೇಜ್ ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



