ಬದುಕಿನ ಬಣ್ಣ- ಕಣ್ಣೀರ ಮರೆಮಾಚಿ

Upayuktha
0


ಕಂಗಳಲಿ ಕನಸ ಹೊತ್ತು, ಮುಖಕ್ಕೆ ಮುಖವಾಡ ತೊಟ್ಟು,

ಹೊರಟಿದ್ದಾನೆ ಇವನು ಹಣೆಬರಹವ ಗೆಲ್ಲಲು ಪಣತೊಟ್ಟು  ll೦೧ll 


ಬಡತನದ ಬೇಗೆಯಲ್ಲಿ ಬೆಂದರೂ ಬಾಡುತಿಲ್ಲ ಇವನ ನಗು,

ನೋವಿನ ಸಾಗರದಿ ಈಜುತ್ತಿರುವ ಧೈರ್ಯವಂತ ಮಗು ll೦೨ll 


ಹೆಗಲ ಮೇಲಿನ ಹೊರೆಗೆ ಹೆದರಿ ಹಿಂದೆ ಸರಿಯುವವನಲ್ಲ,

ಹಂಗಿಸುವ ಜಗತ್ತಿನ ಮಾತುಗಳಿಗೆ ಕಿವಿಗೊಡುವವನಲ್ಲ ll೦೩ll 


ಬಡತನವೆಂಬುದು ಶಾಪವಲ್ಲ, ಅದೊಂದು ಬದುಕಿನ ಪಾಠ,

ಸೋಲನ್ನೇ ಮೆಟ್ಟಿಲಾಗಿ ಮಾಡಿಕೊಂಡು ನಡೆಸುವನು ಆಟ ll೦೪ll 


ಕತ್ತಲ ರಾತ್ರಿಯ ನಂತರ ಸೂರ್ಯ ಮೂಡಿ ಬಂದೇ ಬರುವನು,

ಕಷ್ಟದ ಸುಳಿಯಿಂದ ಇವನು ಜಯಶಾಲಿಯಾಗಿ ಏಳುವನು ll೦೫ll 


ಬೆವರಿನ ಹನಿಗೆ ಪ್ರತಿಫಲ ಸಿಗುವ ಕಾಲ ಹತ್ತಿರವಿದೆ,

ಛಲವೊಂದಿದ್ದರೆ ಸಾಕು, ಅಸಾಧ್ಯವಾದುದು ಯಾವುದೂ ಇಲ್ಲದಾಗಿದೆ ll೦೬ll 


-ಶರಣೆ: ಕುಮಾರಿ ರೂಪಾ ಬಿ ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top