ಹರಿವ ತುಂಗೆಯ ತೀರದಲಿ
ನೆಲೆನಿಂತ ಮಹಾಮಹಿಮಾನ್ವಿತ
ಗುರುವರ್ಯರ ವರ್ಧಂತ್ಯುತ್ಸವ..
ನಂಬಿ ಬರುವ ಸುಜನ ಭಕುತರ
ನಿರತವೂ ಕರಪಿಡಿದು ಪೊರೆಯುವ
ಗುರುರಾಯರ ಜನ್ಮದಿನೋತ್ಸವ..
ಪಾವನ ಕ್ಷೇತ್ರ ಮಂತ್ರಾಲಯದಿ
ವಿಜೃಂಭಣೆಯ ಸಡಗರ..
ಮಂಚಾಲಮ್ಮ ಮಾರುತಿ ದೇವರ
ಭವ್ಯ ಸುಂದರ ಅಲಂಕಾರ..
ಮಂತ್ರಾಕ್ಷತೆಯಲಿ ಮಹಿಮೆಯಿದೆ
ಪರಿಮಳ ಪ್ರಸಾದದಲಿ ವರದಾನವಿದೆ..
ಪಂಚಾಮೃತದಲಿ ಅಭಯಹಸ್ತವಿದೆ
ಶೇಷ ವಸ್ತ್ರದಲಿ ಗುರುಕಾರುಣ್ಯವಿದೆ..
ಸುತ್ತಲೂ ಬೆಳಕನು ಬೀರುವ
ಗುರುರಾಯರ ಬೃಂದಾವನದ
ಪ್ರಖರ ತೇಜೋಪುಂಜವಿದೆ..
ಭವಸಾಗರದ ದಡ ಸೇರಿಸುವ
ಅಘನಾಶಿನಿಯ ಕರುಣೆಯ
ತುಂಬಿರುವ ರಾಯರ ಕಂಗಳಿವೆ..
ಸೇವೆಯ ಮಾಡಲು ಕ್ಷೇತ್ರದಲಿ
ಪಾಪವ ಕಳೆವ ತುಂಗೆಯಿದೆ..
ಸ್ತುತಿಸಿ ಆರಾಧಿಸಿ ಧ್ಯಾನಿಸಿ
ರಾಯರ ಸ್ತೋತ್ರವ ಪಠಿಸೋಣ..
ಬೇಡಿದ ವರಗಳ ನೀಡುವ
ಕರುಣಾಮಯಿ ಕಾಮಧೇನು
ಗುರುರಾಯರ ಪದತಲದಲ್ಲಿ
ಶರಣಾಗಿ ಶಿರಬಾಗೋಣ ಬನ್ನಿ...
- ಗೀತಾ ರಾಘವೇಂದ್ರ
ಅದಿತ್ರಿ ಪಬ್ಲಿಕೇಷನ್ಸ್, ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


