ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ಶಿಪ್: ಮನಃಸ್ಫೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆ

Upayuktha
0

ಕೋಚ್ ಆಗಿ ಪ್ರಾಂಶುಪಾಲೆ ಜ್ಯೋತಿ ಅರುಣ್ ಕುಮಾರ್ ಆಯ್ಕೆ 





ಶಿವಮೊಗ್ಗ: ಮಾನಸಾಧಾರ ಟ್ರಸ್ಟ್ (ರಿ) ನ ಮನಃಸ್ಫೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿಯರಾದ ಕು.ಮನ್ಯಥಾ. ಎಂ ಮತ್ತು ಕು.ಕೀರ್ತನಾ.ಹೆಚ್.ಬಿ ಯವರು ಫೆಬ್ರವರಿ 22 ರಿಂದ 27 ರವರೆಗೆ ಹರಿಯಾಣದ ರೋಹ್ತಕ್‌ನಲ್ಲಿ ನಡೆಯಲಿರುವ ಸ್ಪೆಷಲ್ ಒಲಂಪಿಕ್ ಭಾರತ್ ನ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ ಶಿಪ್ ಕ್ಯಾಂಪಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಮನಃಸ್ಫೂರ್ತಿ ವಿಶೇಷ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಅರುಣ್ ಕುಮಾರ್ ರವರು ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಕೋಚ್ ಆಗಿ ಆಯ್ಕೆಯಾಗಿದ್ದಾರೆ.


ಈ ಕುರಿತು ಮಾನಸ ಸಮೂಹ ಸಂಸ್ಥೆಯು ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯರ ಪರಿಶ್ರಮ, ಸಮರ್ಪಣೆ ಮತ್ತು ದೃಢನಿಶ್ಚಯವೇ ಈ ಸಾಧನೆಗೆ ಕಾರಣವೆಂದು ತಿಳಿಸಿದೆ. ಮನಃಸ್ಫೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿನಿಯರಿಗೆ ರಾಷ್ಟ್ರ ಮಟ್ಟದ ಹಾಕಿ ಚಾಂಪಿಯನ್‌ಶಿಪ್ ಕ್ಯಾಂಪಿನಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿನಿಯರು ಇನ್ನಷ್ಟು ಉತ್ತಮ ಸಾಧನೆ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಲಿ ಎಂದು ಶುಭಾಶಯ ಕೋರಲಾಗಿದೆ.


ಫೆಬ್ರವರಿ 22 ರಂದು ಹರಿಯಾಣಕ್ಕೆ ಹೋಗುತ್ತಿರುವ ಕು.ಮನ್ಯಥಾ.ಎಂ, ಕು.ಕೀರ್ತನಾ.ಹೆಚ್.ಬಿ ಮತ್ತು ಶ್ರೀಮತಿ ಜ್ಯೋತಿ ಅರುಣ್ ಕುಮಾರ್ ರವರಿಗೆ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈ, ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಭಾಗ್, ಸಂಸ್ಥೆಯ ಖ್ಯಾತ ನರರೋಗ ತಜ್ಞರಾದ ಡಾ. ವಾಮನ್ ಶಾನ್ ಭಾಗ್, ಮನಃಸ್ಫೂರ್ತಿ ಕಲಿಕಾ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ರಂಗನಾಯಕಿ ಹಾಗೂ ಮನಃಸ್ಫೂರ್ತಿಯ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top