ಹೊಳೆನರಸೀಪುರ: ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಬೇಕು. ವ್ಯವಹಾರದಲ್ಲಿ ಗಣಿತದ ಬಳಕೆಯನ್ನು ಮಕ್ಕಳು ತಿಳಿದುಕೊಳ್ಳಬೇಕು. ತೂಕ ಮತ್ತು ಅಳತೆಗಳನ್ನು ನಿಖರವಾಗಿ ತಿಳಿದುಕೊಂಡು ಮಕ್ಕಳು ನಿತ್ಯಜೀವನದಲ್ಲಿ ಗಣಿತ ಮತ್ತು ವ್ಯವಹಾರದ ಮಹತ್ವವನ್ನು ಅರಿತುಕೊಳ್ಳುವುದು ಮೆಟ್ರಿಕ್ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡರು ಹೇಳಿದರು.
ತಾಲ್ಲೂಕಿನ ವಳಂಬಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮೆಟ್ರಿಕ್ ಮೇಳದ ಮಕ್ಕಳ ಸಂತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳ ಭವಿಷ್ಯದ ಜೀವನದ ದೃಷ್ಟಿಯಿಂದ ವ್ಯವಹಾರ ಅತೀ ಮುಖ್ಯವಾಗಿದೆ. ಗಣಿತದ ಮೂಲ ಪರಿಕಲ್ಪನೆಗಳಾದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರದ ಲೆಕ್ಕಗಳನ್ನು ಈ ಮೇಳದ ಮೂಲಕ ಪ್ರಾಯೋಗಿಕವಾಗಿ ಕಲಿಯಲು ಸಹಾಯಕವಾಗುತ್ತದೆ. ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಕ್ರಿಯಾಶೀಲರಾಗಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿರುವುದು ಇಂತಹ ಮೇಳಗಳಿಂದ ತಿಳಿದುಬರುತ್ತದೆ ಎಂದರು.
ಶಾಲೆಯ ಪ್ರಭಾರಿ ಮುಖ್ಯಶಿಕ್ಷಕರಾದ ಡಿ. ವಿಶ್ವನಾಥ್ ರವರು ಮಾತನಾಡುತ್ತಾ ಶಾಲೆಯ ಎಲ್ಲಾ ಶಿಕ್ಷಕರ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರ ಹಾಗೂ ಪೋಷಕರ, ದಾನಿಗಳ ಸಹಕಾರ ಉತ್ತಮವಾಗಿರುವುದರಿಂದ ಇಂತಹ ಕಾರ್ಯಗಳನ್ನು ಶಾಲೆಯಲ್ಲಿ ನಡೆಸಲು ಸಾಧ್ಯವಾಗತ್ತಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಗೂ ಇದು ಪ್ರೇರಣೆಯಾಗಲಿದೆ. ಇಂತಹ ಮೇಳಗಳಿಂದ ಆಕರ್ಷಿತರಾದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸದೆ ಗ್ರಾಮದ ಸರ್ಕಾರಿ ಶಾಲೆಗಳಲ್ಲೇ ಓದಿಸುವ ನಿರ್ಧಾರ ಮಾಡುತ್ತಾರೆ ಎಂದರು.
ಮಕ್ಕಳ ಮೇಳದಲ್ಲಿ ಗ್ರಾಮದ ಮುಖಂಡರಾದ ವೆಂಕಟರಾಮೇಗೌಡ್ರು ಮಕ್ಕಳ ಸಂತೆಯು ವ್ಯಾಪಾರ ಜ್ಞಾನ ಬೆಳೆಸಲು ಪೂರಕವಾಗಿದೆ ಎಂದರು. ಮತ್ತೋರ್ವ ಮುಖಂಡರಾದ ನಾರಾಯಣ ಗೌಡ್ರು ಮಕ್ಕಳ ಮೇಳದಲ್ಲಿ ಮಕ್ಕಳ ಮತ್ತು ಶಿಕ್ಷಕರ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕರಾದ ಆನಂದ್, ದೇವರಾಜ್ ಹಾಗೂ ಬಿ.ಆರ್.ಪಿ ನಾಗರಾಜ್, ಸಿ.ಆರ್.ಪಿ ಪದ್ಮಜಾ, ಶಿಕ್ಷಕರಾದ ಈ. ಕುಮಾರ, ವಸಂತ ಕುಮಾರಿ, ಅನಿತಾ, ಮಮತಾ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಾಘವೇಂದ್ರ ಮತ್ತು ಎಲ್ಲಾ ಸದಸ್ಯರುಗಳು ಹಾಗೂ ಪೋಷಕರು, ಅಡುಗೆ ಸಿಬ್ಬಂದಿಗಳಾದ ರೇಣುಕಾ ಮತ್ತು ಸೌಮ್ಯ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


