ಮೂಡುಬಿದ್ರೆ: ಸಾಲಿಗ್ರಾಮದ ಕೂಟ ಮಹಾ ಜಗತ್ತು ಸಂಸ್ಥೆಯ 38 ನೇ ಅಂಗಸಂಸ್ಥೆಯ ಸ್ಥಾಪನೆ ಮತ್ತು ಉದ್ಘಾಟನೆ ಇತ್ತೀಚೆಗೆ ಮೂಡಬಿದ್ರೆ ಶ್ರೀ ಗೋಪಾಲಕೃಷ್ಣ ದೇವಳದ ಪ್ರಾಂಗಣದಲ್ಲಿ ನಡೆಯಿತು. ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಎಚ್. ಸತೀಶ್ ಹಂದೆ ಅವರು ಉದ್ಘಾಟಿಸಿದರು. ಡಾ. ಎನ್. ಸೋಮಶೇಖರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಸದಸ್ಯರೂ ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರೂ ಆದ ಪಿ. ಸದಾಶಿವ ಐತಾಳರು ಈ ಕಾರ್ಯಕ್ರಮಕ್ಕೆ ಶುಭಾಶಂಸನೆ ನೀಡಿದರು.
ಕೇಂದ್ರ ಸಂಸ್ಥೆಯ ಪದಾದಿಕಾರಿಗಳ ಪೈಕಿ ಉಪಾಧ್ಯಕ್ಷ ರಾದ CA ಚಂದ್ರಶೇಖರ ಐತಾಳರು, ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ತುಂಗ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಹೊಳ್ಳ, ಜೊತೆ ಕಾರ್ಯದರ್ಶಿಗಳಾದ ಭಾರತಿ ಶ್ರೀಧರ್ ತುಂಬೆ ಮತ್ತು ಎಚ್.ಕೆ ಕುಮಾರ ಹೊಳ್ಳ ಶುಭ ಹಾರೈಸಿದರು. ಹಾಗೂ ಬಿಲಿಯನ್ ಫೌಂಡೇಷನ್ ಟ್ರಸ್ಟ್ ನ ಗೌರವ ಕೋಶಾಧಿಕಾರಿ ವಿಶ್ವನಾಥ ಸೋಮಯಾಜಿಯವರು ಟ್ರಸ್ಟ್ ಬಗ್ಗೆ ಮಾಹಿತಿ ನೀಡಿದರು.
ರಮೇಶ್ ಹೊಳ್ಳ ಕೋರ್ಯ, ಶ್ರೀಧರ ಹೊಳ್ಳ, ವಾಸುದೇವ ಸೋಮಯಾಜಿ ವಿನಯ ಕಾರಂತ್, ಆರ್.ಕೆ. ಎಂಟರ್ ಪ್ರೈಸಸ್‌ನ ರಾಮಕೃಷ್ಣ ಭಟ್, ದೇವಳದ ಆನುವಂಶಿಕ ಮೊಕ್ತೇಸರ ಗುರು ಪ್ರಸಾದ್ ಹೊಳ್ಳ ಉಪಸ್ಥಿತರಿದ್ದರು. ಸುದರ್ಶನ್ ರಾವ್ ನಿರೂಪಿಸಿದರು.
ಕೂಟಮಹಾಜಗತ್ತು ಸಾಲಿಗ್ರಾಮ ಸಂಸ್ಥೆ ಯ ನಿಬಂಧನೆಗಳನ್ನು ಡಾ. ಎನ್.ಸೋಮಶೇಖರ್ ಮಯ್ಯರಿಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿ, ಹೊಸ ಶಾಖೆಯ ಅಧ್ಯಕ್ಷತೆ ವಹಿಸುವಂತೆ ಸೂಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ರಾಮಕೃಷ್ಣ ಭಟ್, ಉಪಾದ್ಯಕ್ಷರುಗಳಾಗಿ ಚಂದ್ರಶೇಖರ್ ಮಯ್ಯ ಮತ್ತು ಅನಂತ ಪದ್ಮನಾಭ ಹೊಳ್ಳ, ಕಾರ್ಯದರ್ಶಿಯಾಗಿ ಸುದರ್ಶನ್ ರಾವ್, ಖಜಾಂಚಿಯಾಗಿ ಜಯರಾಮ ರಾವ್ ರವರು ಆಯ್ಕೆಯಾದರು.
ಸ್ಥಾಪಕ ಸಮಿತಿಯ ಗೌರವ ಸದಸ್ಯರಾಗಿ, ವಾಸುದೇವ ಉಪಾಧ್ಯ, ರವಿ ಶಂಕರ ಕಾರಂತ್, ಪರಶುರಾಮ ಐತಾಳ್, ಉದಯ ಕುಮಾರ್, ನರಸಿಂಹ ಕಾರಂತ್, ಸೀತಾರಾಮ ರಾವ್, ರಾಮಕೃಷ್ಣರಾವ್ ಅವರನ್ನು ಅಭಿನಂದಿಸಲಾಯಿತು. ಚಂದ್ರಶೇಖರ್ ಮಯ್ಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


