ಸೇವಾ ಭಾರತಿ ಮಾಧವ ವನದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿ ಅನಾವರಣ

Upayuktha
0


ಮಂಗಳೂರು: ಸೇವಾ ಭಾರತಿ(ರಿ) ಮಂಗಳೂರು, ಇವರು ಮೊಂಟೆಪದವು ಮಾಧವ ವನದಲ್ಲಿ ನಿರ್ಮಿಸಿದ ದಿವ್ಯಾಂಗರ ಪುನರ್ವಸತಿ ಯೋಜನೆಯಾದ ಅಂಕುರ ಸೌಧದ ಸುಧೀಂದ್ರ ಧ್ಯಾನ ಮಂದಿರದಲ್ಲಿ ದಿನಾಂಕ 4ನೇ ಫೆಬ್ರವರಿ 2026 ರಂದು ಶ್ರೀ ಗೋಪಾಲಕೃಷ್ಣ ದೇವರ ಭವ್ಯ ಪ್ರತಿಮೆಯ ಅನಾವರಣವನ್ನು ಶ್ರೀ ಕಾಶಿ ಮಠ ಸಂಸ್ಥಾನ, ವಾರಣಾಸಿಯ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಇವರು ನೆರವೇರಿಸಿದರು.


ಬಳಿಕ ಆಶೀರ್ವಚನ ನೀಡುತ್ತಾ, ದಿವ್ಯಾಂಗರಿಗೆ ಸಕಲ ಸೌಲಭ್ಯವನ್ನೂ ಒಂದೇ ಸೂರಿನಡಿಯಲ್ಲಿ ಒದಗಿಸುವ ಕಟ್ಟಡವನ್ನು ನಿರ್ಮಿಸಿದ ಸೇವಾ ಭಾರತಿ ಸಂಸ್ಥೆಯು ದಿವ್ಯಾಂಗರಿಗೆ ಮಾಡುವ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಇಂತಹ ಸೇವೆಯನ್ನು ಇದೇ ರೀತಿ ಮುಂದುವರಿಸುವ ಸೌಭಾಗ್ಯವನ್ನು ಶ್ರೀಕೃಷ್ಣನು ಕರುಣಿಸಲಿ ಎಂದು ಶ್ರೀಗಳು ಹಾರೈಸಿದರು. ಇದೇ ಸಂದರ್ಭದಲ್ಲಿ ಮಾಧವ ವನದಲ್ಲಿರುವ ವೃಕ್ಷೋದ್ಯಾನದಲ್ಲಿ ಶ್ರೀಗಳು ಗಿಡಗಳನ್ನು ನೆಡುವುದರ ಮೂಲಕ ಪರಿಸರದೊಂದಿಗಿರುವ ಅವರ ಕಾಳಜಿಯನ್ನು ವ್ಯಕ್ತಪಡಿಸಿದರು. 


ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿ ಹಾಗೂ ಸುಧೀಂದ್ರ ಧ್ಯಾನ ಮಂದಿರದ ದಾನಿಗಳಾದ ಡಾ. ಜಗನ್ನಾಥ ಕಾಮತ್ ಅವರ ಕುಟುಂಬದವರನ್ನು ಶ್ರೀಗಳು ಈ ಸಂದರ್ಭದಲ್ಲಿ ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಸೇವಾ ಭಾರತಿ ಅಧ್ಯಕ್ಷ ಮುಕುಂದ್ ಕಾಮತ್, ಗೌರವ ಕಾರ್ಯದರ್ಶಿ ಹೆಚ್. ನಾಗರಾಜ ಭಟ್, ಕೋಶಾಧಿಕಾರಿ ವಿನೋದ್ ಶೆಣೈ, ಪೋಷಕರಾದ ಶ್ರೀಮತಿ ಸುಮತಿ ಶೆಣೈ, ಮುಖ್ಯ ಕಾರ್ಯ ನಿರ್ವಹಣಾ ಆಧಿಕಾರಿ ಪೃಥ್ವಿಪಾಲ, ಸಿಎ ಗಿರಿಧರ್ ಕಾಮತ್, ಸಲಹಾ ಮಂಡಳಿ ಸದಸ್ಯರಾದ ಶ್ರೀ ಪ್ರದೀಪ್ ಪೈ, ಸಂಸ್ಥೆಯ ಎಲ್ಲಾ ವಿಶ್ವಸ್ಥರು, ಸಂಸ್ಥೆಯ ಎಲ್ಲಾ ಉದ್ಯೋಗಿಗಳು, ಶಿಕ್ಷಕ ಶಿಕ್ಷಕೇತರರು, ಸ್ವಯಂಸೇವಕರು, ಹಿತೈಷಿಗಳು, ದಾನಿಗಳು, ಊರಿನ ಗಣ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top