ಅಬ್ಬಕ್ಕ@500: ಶತಕದ ಸಾರ್ಥಕ ಕಾರ್ಯಕ್ರಮ

Upayuktha
0



(1525- 2025)

ತುಳುನಾಡಿನ ದಿಟ್ಟ- ವೀರ ಮಹಿಳೆ "ಅಭಯ ರಾಣಿ" ಅಬ್ಬಕ ಬಗ್ಗೆ ಈ ಮಣ್ಣಿನ ಮಕ್ಕಳು ಮರೆಯಲಾರರು. ತನ್ನೊಳಗಿನ ಶತ್ರುಗಳನ್ನೂ, ಹೊರಗಿನ ಶತ್ರುಗಳನ್ನೂ ಮೆಟ್ಟಿ ನಿಂತು, ಸ್ವಾಭಿಮಾನಿಯಾಗಿ ಸಾವಿನ ಕೊನೆಯ ತನಕ ಹೋರಾಟ ಮಾಡಿ ಎಲ್ಲರಿಗೂ ಆದರ್ಶ ರಾಣಿಯಾದ ಉಳ್ಳಾಲವನ್ನು ಕೇಂದ್ರಸ್ಥಾನವಾಗಿಸಿಕೊಂಡು ಉತ್ತಮ ಆಡಳಿತಗಾರ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ ಮೂಡಬಿದಿರೆಯ ಶ್ರೀ ಸೋಮನಾಥ ದೇವಾಲಯದಿಂದ ಉಳ್ಳಾಲದ ಸೋಮನಾಥ ದೇವಾಲಯದವರೆಗೂ ವ್ಯಾಪಿಸಿ ಕ್ರಾಂತಿಕಾರಿ ಮಹಿಳೆಯೆನಿಸಿದ ಮಹಾರಾಣಿಯ ನೆನಪನ್ನು ಅಜರಾಮರಗೊಳಿಸಿದ ಈ ವರ್ಷ ಅವಿಸ್ಮರಣೀಯ. 


ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶತಕದ ಕಾರ್ಯಕ್ರಮದವರೆಗೂ ತಲುಪಿಸಿದ್ದು ಮಂಗಳೂರು ವಿಭಾಗದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ). ಎಂಬ ಸಂಘಟನೆ. ಉಳ್ಳಾಲದ ಕಣ್ಮಣಿ ಅಬ್ಬಕ್ಕ ದೇವಿಯವರ 500ನೇ ವರ್ಷದ ಹರ್ಷದ ಸಂಭ್ರಮವನ್ನು ಸಮಾಜದೆಲ್ಲೆಡೆ ಪಸರಿಸುವ, ಯುವ ಜನಾಂಗಕ್ಕೆ ಚರಿತ್ರೆಯನ್ನು ತಿಳಿಸುವ ಸದುದ್ದೇಶದಿಂದ ಈ ಶಿಕ್ಷಕ ಸಂಘ ಈ ಅಬ್ಬಕ್ಕ ಯಾನವನ್ನುಆರಂಭಿಸಿತು.ಸಂಘಕ್ಕೆ ನೂರರ ಸಂಭ್ರಮ - ಅಬ್ಬಕ್ಕ ರಾಣಿಯ 500 ರ ಸಂಭ್ರಮಕ್ಕಾಗಿ ನೂರು ಕಾರ್ಯಕ್ರಮಗಳನ್ನು ಆಯೋಜಿಸಿತು. ಇದೊಂದು ರಾಷ್ಟ್ರೀಯ ಸಂಘಟನೆ. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಸಂಘಟನೆ ಇದು. ಭಾರತೀಯತೆಯನ್ನು ಆಧಾರವಾಗಿಸಿಕೊಂಡು, ಶಿಕ್ಷಣ ಹಾಗೂ ಸಮಾಜ ಕ್ಷೇತ್ರದಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆಯ ತತ್ವವನ್ನು ಪ್ರಚಾರಗೊಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಅತ್ಯಂತ ದೊಡ್ಡ ಸಂಘಟನೆಯಾಗಿದೆ ಇದು. ಈ ಉದ್ದೇಶದ ಅನುಸಾರವಾಗಿ ರಾಷ್ಟ್ರ ಭಾವನೆ ಮತ್ತು ಭಾರತೀಯ ದರ್ಶನದಿಂದ ಸ್ಪೂರ್ತಿಗೊಂಡ ಪ್ರೀ ಪೈಮರಿ ಹಂತದಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ಇರುವ ಶಿಕ್ಷಕರ ಸಮೂಹವನ್ನು ಒಗ್ಗೂಡಿಸಿ 1988 ರಲ್ಲಿ ಈ ಮಹಾಸಂಘವನ್ನು ಸ್ಥಾಪಿಸಲಾಯಿತು. ಇಂದು ಮಹಾಸಂಘವು ದೇಶವ್ಯಾಪಿ ಸಂಸ್ಥೆಯಾಗಿ ವಿಸ್ತರಿಸಿದೆ. ಪಸ್ತುತ 24 ರಾಜ್ಯಗಳಲ್ಲಿ ಹರಡಿರುವ 35 ರಾಜ್ಯ ಮಟ್ಟದ ಸಂಘಟನೆಗಳು ಹಾಗೂ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಮಟ್ಟದ ಸಂಘಟನೆಗಳು ಇದಕ್ಕೆ ಸಂಯೋಜಿತವಾಗಿವೆ.


ಇನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ)ವು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KR MSS) ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾಲಯ ಶಿಕ್ಷಕರ ಸಂಘಟನೆಯಾಗಿದ್ದು ನವದೆಹಲಿಯ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ABRSM)ದ ಸಂಯೋಜಿತ ಸಂಸ್ಥೆಯಾಗಿದೆ. ಇದು 2015 ಆಗಸ್ಟ್ 9 ರಂದು ಸ್ಥಾಪನೆಯಾಗಿ ಶೈಕ್ಷಣಿಕ ಮೌಲ್ಯಗಳು ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಮಾಜ ಇದರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಈ ಸಂಸ್ಥೆ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಿ, ಶಿಕ್ಷಕರನ್ನು ಜವಾಬ್ದಾರಿಯುತ ರಾಷ್ಟ್ರ ನಿರ್ಮಾತೃ ಎಂಬ ಸ್ಥಾನಕ್ಕೆ ಪುನಃ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುವ ವಿಶಿಷ್ಟ ಸಂಘಟನೆಯಾಗಿರುತ್ತದೆ.


ಇದು ಈ ಅಭಿಯಾನವನ್ನು ಆರಂಭಿಸಿ ದ.ಕ.ಜಿಲ್ಲೆಯ ನಾನಾ ಪ್ರದೇಶಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಅಬ್ಬಕ್ಕಳ ಜೀವನ ಚರಿತ್ರೆಯನ್ನು ತಿಳಿಸಿ ಸಮಾಜದ ಎಲ್ಲಾ ವಿಭಾಗದ ವರೆಗೂ ತಲುಪಿಸುವ ಮಹಾನ್ ಕಾರ್ಯವನ್ನು ಈ ಸಂಸ್ಥೆಯ ಗೌರವಾನ್ವಿತ ಪ್ರಾಚಾರ್ಯರು, ಉಪನ್ಯಾಸಕರು, ಉಪನ್ಯಾಸಕಿಯರು ನಿರ್ವಂಚನೆಯಿಂದ ಮಾಡುತ್ತಿದ್ದಾರೆ. ಪಂಜಿನ ಕ್ರಾಂತಿಯಿಂದ ವಿರೋಧಿಗಳನ್ನು ಹಿಮ್ಮೆಟ್ಟಿಸಿದ, ತನ್ನ ಮಕ್ಕಳನ್ನು ಬೆನ್ನಿಗೆ ಆತುಕೊಂಡು ಬಿಗು ಹೋರಾಟ ನೀಡಿದ ಮಹಿಳೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಸ್ತುತ್ಯರ್ಹವೂ ಹೌದು.


ಆದರೆ, ನೂರು ಕಡೆಗಳಲ್ಲಿ ಸಂಘಟಕರಿಗೆ ವಿಷಯವನ್ನು ವಿವರಿಸಿ ಕಾರ್ಯಕ್ರಮಗಳನ್ನು ನೀಡುತ್ತಾ ಅದರಲ್ಲೇ ತೃಪ್ತಿಯನ್ನು ಕಂಡವರ ಈ ಶಿಕ್ಷಣವೇತ್ತರು. ನೂರನೇ ಕಾರ್ಯಕ್ರಮವು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯುತ್ತ) ಪುತ್ತೂರು ಇದರ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಯ ಸಹಯೋಗದೊಂದಿಗೆ ಜರಗಲಿದೆ. ನೂರರ ಕಾರ್ಯಕ್ರಮದಲ್ಲಿ ವಿಧವಿಧ ಕಾರ್ಯಕ್ರಮಗಳೊಂದಿಗೆ ಸಾಧಕ ಮಹಿಳೆಯರ ಸನ್ಮಾನ, ಹರಿಕಥೆ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ. ಶುಭಕೋರೋಣ.




- ವರ್ಕಾಡಿ ರವಿ ಅಲೆವೂರಾಯ

alevoorayaravi@gmail.com


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top