ಕಾರ್ಕಡ ಗೆಳೆಯರ ಬಳಗದ 38ನೇ ವಾರ್ಷಿಕೋತ್ಸವ

Upayuktha
0

ಪ್ರತಿಭಾ ಪುರಸ್ಕಾರ, ದತ್ತಿನಿಧಿ ಮತ್ತು ಸಹಾಯ ನಿಧಿ ವಿತರಣೆ




ಕಾರ್ಕಡ, ಫೆ.7: ಕಾರ್ಕಡ ಗೆಳೆಯರ ಬಳಗದ 38ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ವಿವಿಧ ದತ್ತಿನಿಧಿ ವಿತರಣೆ, ವಿಕಲಚೇತನ ಹಾಗೂ ಅಶಕ್ತರ ಸಹಾಯ ನಿಧಿ ವಿತರಣಾ ಕಾರ್ಯಕ್ರಮವು ಶನಿವಾರ ಸಂಜೆ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ “ಪಾರ್ವತಿ ಹೊಳ್ಳ ರಂಗಮಂಟಪ”ದಲ್ಲಿ ಭವ್ಯವಾಗಿ ಜರಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಳೆದ 38 ವರ್ಷಗಳಿಂದ ಬಳಗವು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದು ಹೇಳಿದರು.


ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ, ವಿವೇಕ ಬಲಕಿಯರ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಜಗದೀಶ ಹೊಳ್ಳ (ಕಾರ್ಕಡ), ನ್ಯೂ ಕಾರ್ಕಡ ಶಾಲೆಯ ಮುಖ್ಯೋಪಾಧ್ಯಾಯ ಎನ್. ಪ್ರಭಾಕರ ಕಾಮತ್, ನಿವೃತ್ತ ಅಧ್ಯಾಪಕ ಕೆ. ನಾರಾಯಣ ಆಚಾರ್ಯ, ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ಐತ ಹಾಗೂ ಅಶಕ್ತ ಮತ್ತು ವಿಕಲಚೇತನ ಸಹಾಯ ನಿಧಿಯ ಮಹಾ ಪೋಷಕ ವಿಘ್ನರಾಜ ಭಟ್ಟ (ವಿಶ್ವೇಶ್ವರ ಭಟ್ಟರ ಸಹೋದರ) ಅವರನ್ನು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಹಾಗೂ ಸ್ಮರಣಪತ್ರ ನೀಡಿ ಸನ್ಮಾನಿಸಲಾಯಿತು.


ಹೊಸ ಬದುಕು ಆಶ್ರಮಕ್ಕೆ ನೀಡಲಾದ ಧನ ಸಹಾಯ ಪರಿಕರವನ್ನು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರು ಆಶ್ರಮದ ರುವಾರಿ ವಿನಯ ಚಂದ್ರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಳಗದ ಸಮಾಜ ಸೇವೆಯನ್ನು ಶ್ಲಾಘಿಸಿದರು.


ವಿದ್ಯಾನಿಧಿ ದತ್ತಿ ನಿಧಿಯನ್ನು ಎಚ್. ನಾಗರಾಜ ಹಂದೆ ವಿತರಿಸಿ, ಬಳಗದ 38 ವರ್ಷದ ಸಾಧನೆಯನ್ನು ಮೆಚ್ಚಿದರು. ಅಶಕ್ತರ ಸಹಾಯ ನಿಧಿಯನ್ನು ಪಿ. ಸದಾಶಿವ ಮಧ್ಯಸ್ಥರು ಹಾಗೂ ಶ್ರೀ ರಾಜು ಪೂಜಾರಿ ಅವರು ತಲಾ ರೂ.5,000ರಂತೆ ಎಂಟು ಮಂದಿಗೆ ವಿತರಿಸಿದರು.


ವಿಕಲಚೇತನರ ಸಹಾಯ ನಿಧಿ ಹಾಗೂ ವಿಶೇಷ ಪ್ರತಿಭಾ ಪುರಸ್ಕಾರವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ವಿತರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕು. ನಿಧಿ ಪೈ ಹಾಗೂ ನಿಧೀಶ ಭಟ್ಟ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅದ್ವೈತ್ ಉಪಾಧ್ಯ ಅವರನ್ನು ಗೌರವಿಸಲಾಯಿತು. ಬಹುಮಾನವನ್ನು ಕೋಟದ ಉದ್ಯಮಿ ಶ್ರೀಕಾಂತ ಶೆಣೈ ವಿತರಿಸಿದರು.


ಮುಖ್ಯ ಅತಿಥಿಯಾಗಿದ್ದ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಅವರು ದತ್ತಿ ನಿಧಿ ಪಟ್ಟಿ ವಾಚಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಬಳಗದ ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಾರ್ಷಿಕ ವರದಿ ವಾಚಿಸಿದರು. ಕೆ. ಜಗದೀಶ ಆಚಾರ್ಯ ಧನ್ಯವಾದ ಸಮರ್ಪಿಸಿದರು.


ಸಭಾ ಕಾರ್ಯಕ್ರಮವನ್ನು ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆ. ಚಂದ್ರಕಾಂತ ನಾಯರಿ ಹಾಗೂ ಕೆ. ಜಗದೀಶ ಆಚಾರ್ಯ ನಿರೂಪಿಸಿದರು. ನಂತರ ಸ್ಥಳೀಯ ಅಂಗನವಾಡಿ ಮಕ್ಕಳು ಹಾಗೂ ಸ್ಥಳೀಯ ಪ್ರತಿಭಾವಂತರಿಂದ ಗಾನ-ನೃತ್ಯ ವೈವಿಧ್ಯ ನಡೆಯಿತು. ಕಲಾ ಚಂದನ, ಬೀಜಾಡಿಯ ಹವ್ಯಾಸಿ ತಂಡದವರ “ನೆಮ್ಮದಿಗಾಗಿ ಬದಲಾಗಿ” ಎಂಬ ಹಾಸ್ಯಮಯ ನಗೆನಾಟಕ ಪ್ರೇಕ್ಷಕರನ್ನು ಮನರಂಜಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top