ಮಂಗಳೂರು: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯ, ನಂತೂರು, ಮಂಗಳೂರು ಇಲ್ಲಿ ದಿನಾಂಕ 29/01/2026, ಗುರುವಾರ ದಂತ ಆರೋಗ್ಯ ಮಾಹಿತಿ ಶಿಬಿರವನ್ನು ಆಯೋಜಿಸಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು ಅವರು ಮಕ್ಕಳಿಗೆ ದಂತ ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಟೂತ್ ಬ್ರಷ್ ಹಾಗೂ ಟೂತ್ ಪೇಸ್ಟ್‌ಗಳ ಸರಿಯಾದ ಬಳಕೆ, ಹಲ್ಲುಗಳನ್ನು ಹೇಗೆ ಹಾಗೂ ಯಾವ ರೀತಿಯಲ್ಲಿ ಉಜ್ಜಬೇಕು ಎಂಬುದರ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿದರು.
ಆಹಾರ ಪದ್ಧತಿ ಮತ್ತು ಹಲ್ಲಿನ ಆರೋಗ್ಯದ ನಡುವಿನ ನೇರ ಸಂಬಂಧವನ್ನು ವಿವರಿಸಿದ ಅವರು, ಸುಂದರ ಹಾಗೂ ಸುದೃಢ ಆರೋಗ್ಯವಂತ ಹಲ್ಲುಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು. “ಬಾಯಿಯೇ ನಮ್ಮ ಆರೋಗ್ಯದ ಹೆಬ್ಬಾಗಿಲು. ಆದ್ದರಿಂದ ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತಿ ಕಾಲೇಜು, ನಂತೂರು ಇದರ ಉಸ್ತುವಾರಿ ನಿವೃತ್ತ ಶಿಕ್ಷಕ ಶ್ರೀಕೃಷ್ಣ ನೀರಮೂಲೆ, ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕಿಯರು ಉಪಸ್ಥಿತರಿದ್ದರು. ಈ ಸಂದರ್ಭ ಅಂಗನವಾಡಿ ಮತ್ತು ಬಾಲವಾಡಿಯ ಸುಮಾರು 30 ಮಕ್ಕಳಿಗೆ ಟೂತ್ ಪೇಸ್ಟ್, ಲೇಖನ ಸಾಮಗ್ರಿ ಹಾಗೂ ದಂತ ಆರೋಗ್ಯ ಮಾಹಿತಿ ಕರಪತ್ರಗಳನ್ನು ವಿತರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


