ಕವಿ ಬೇಂದ್ರೆಯವರ ಜನ್ಮ ದಿನಾಚರಣೆ

Upayuktha
0


ಮಂಗಳೂರು: ದ.ರಾ ಬೇಂದ್ರೆ ಅವರು ಕನ್ನಡದ ಶ್ರೇಷ್ಠ ಕವಿ. ಕಾವ್ಯವನ್ನೇ ಉಸಿರಾಡಿದ ಈ ಕವಿಯು ಕನ್ನಡದ ಎಲ್ಲ ಮಾದರಿಯ ಕಾವ್ಯ ಪ್ರಕಾರಗಳಲ್ಲೂ ತನ್ನ ಪ್ರತಿಭೆಯನ್ನು ಮೆರೆದವರು. ಬೇಂದ್ರೆ ಅವರ ಭಾಷಾ ವೈಖರಿಯು ಅದ್ಭುತವಾದುದು. ಅವರ ಕಾವ್ಯ ಜನಪದ ಗೀತೆಗಳಂತೆ ಕಂಡರು ಜನಪದವನ್ನು ಮೀರಿ ಆತ್ಮ ಅಧ್ಯಾತ್ಮಗಳ ಕಡೆಗೆ ಮುಖ ಮಾಡಿರುವುದು ಕವಿಯ ಅನನ್ಯತೆಯೇ ಆಗಿದೆ.


ಜನವರಿ 31,1896ರಲ್ಲಿ ಜನಿಸಿ ಕನ್ನಡ ಕಾವ್ಯದ ಅದ್ಭುತಗಳನ್ನು ಸೃಷ್ಟಿಸಿದ ಕವಿ ಬೇಂದ್ರೆಯವರ 131ನೇ ಜನ್ಮದಿನಾಚರಣೆಯನ್ನು ಮಂಗಳೂರಿನ ಕವಿ ಮಿತ್ರರು ಆಚರಿಸಿದರು.


ಬೇಂದ್ರೆಯವರ ಕಾವ್ಯದ ಬಗ್ಗೆ ಮಾತುಕತೆ, ಸಂವಾದ, ಕವಿತಾ ವಾಚನಗಳ ಮೂಲಕ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಪ್ರೊ. ಪಿ. ಕೃಷ್ಣಮೂರ್ತಿ, ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ. ಮಹೇಶ ಆರ್ ನಾಯಕ್, ಎನ್. ಸುಬ್ರಾಯ ಭಟ್, ರೇಮಂಡ್ ಡಿಕುನ್ಹ, ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು, ರಾಜೇಂದ್ರ ಕೇದಿಗೆ, ಗೋಪಾಲಕೃಷ್ಣ ಶಾಸ್ತ್ರಿ, ಅನಾರ್ಕಲಿ ಸಲೀಂ ಮಂಡ್ಯ, ವೆಂಕಟೇಶ್ ಗಟ್ಟಿ, ರಘು ಇಡ್ಕಿದು, ವಿಭಾ ನಾರಾಯಣ್ ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top