ಹೊಸಂಗಡಿ: ಕಳೆದ ಮೂವತ್ತು ವರುಷಗಳಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಡಾ ಮುರಲೀ ಮೋಹನ್ ಚೂಂತಾರು ನೇತ್ರತ್ವದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಕಾರ್ಯಾಚರಿಸುತ್ತಿದ್ದು ಗಡಿನಾಡಿನ ಜನರಿಗೆ ಉತ್ತಮ ದಂತ ಚಿಕಿತ್ಸೆ ನೀಡುತ್ತಾ ಬಂದಿದೆ. ವಕ್ರದಂತ ಚಿಕಿತ್ಸೆ,ಬೇರುನಾಳ ಚಿಕಿತ್ಸೆ,ಇಂಪ್ಲಾಂಟ್ ಚಿಕಿತ್ಸೆ ಹೀಗೆ ಎಲ್ಲಾ ಪರಿಣಿತ ವೈದ್ಯರ ಸೇವೆ ಲಭ್ಯವಿರುತ್ತದೆ. ಇದೀಗ ಹೊಸದಾಗಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೀಲು ದವಡೆ ಕ್ಲಿನಿಕ್ ಮತ್ತು ಸ್ಲೀಪ್ ಕ್ಲಿನಿಕ್ ಆರಂಭವಾಗಿದೆ.
ಅಮೇರಿಕಾದಲ್ಲಿ ಹತ್ತು ವರುಷ ತರಬೇತಿ ಪಡೆದ ಡಾ ಮಧು ಕಟ್ಟ ಅವರು ರೋಗಿಗಳ ಚಿಕಿತ್ಸೆಗೆ ಮತ್ತು ಸಂದರ್ಶನಕ್ಕೆ ಲಭ್ಯರಿದ್ದಾರೆ. ಮೊದಲೇ ಪೂರ್ವ ನಿಗದಿತವಾಗಿ ಭೇಟಿಗೆ ಅನುಮತಿ ಪಡೆದು ಸಂದರ್ಶನಕ್ಕೆ ಬರಲು ಕೋರಲಾಗಿದೆ. ಜನವರಿ ತಿಂಗಳು 25ರಿಂದ ಅವರು ರೋಗಿಯ ಚಿಕಿತ್ಸೆಗೆ ಲಭ್ಯರಿದ್ದಾರೆ ಎಂದು ಚಿಕಿತ್ಸಾಲಯದ ಪ್ರಕಟಣೆ ತಿಳಿಸಿದೆ.
ಡಾ ರಾಜಶ್ರೀ ಮೋಹನ್ ಅವರು ಡಾ ಮಧು ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ದವಡೆ ಕೀಲು ಸಮಸ್ಯೆ ಮತ್ತು ಗೊರಕೆ ಸಮಸ್ಯೆ ಇರುವವರು ಈ ಸೌಲಭ್ಯ ಬಳಸಿಕೊಳ್ಳಲು ಕೋರಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


