ರಾಷ್ಟ್ರೀಯ ಯುವ ದಿನವು ದೇಶದ ಭವಿಷ್ಯವನ್ನು ರೂಪಿಸುವ ಯುವಜನರ ಶಕ್ತಿ, ಉತ್ಸಾಹ ಮತ್ತು ತ್ಯಾಗವನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಪ್ರತಿವರ್ಷ ಜನವರಿ 12ರಂದು, ಮಹಾನ್ ತತ್ವಜ್ಞಾನಿ ಮತ್ತು ಸನಾತನ ಸಂಸ್ಕೃತಿಯ ಆಧಾರ ಸ್ತಂಭರಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರಮಟ್ಟದಲ್ಲಿ ಯುವ ದಿನವಾಗಿ ಆಚರಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರು" ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ "ಎಂದು ಯುವ ಜನತೆಗೆ ಬಲವಾದ ಸಂದೇಶ ನೀಡಿದ್ದರು. ಅವರ ಮಾತುಗಳು ಇಂದಿಗೂ ಪ್ರೇರಣೆಯ ಬೆಳಕಾಗಿ ನಮ್ಮ ಜೀವನವನ್ನು ಬೆಳಗಿಸುತ್ತಿದೆ. ಅವರು ಯೌವ್ವನವನ್ನು ಶಕ್ತಿಯ, ತ್ಯಾಗದ ಮತ್ತು ನಿಷ್ಠೆಯ ಪ್ರತೀಕವೆಂದು ಪರಿಗಣಿಸಿದ್ದರು.
ಈ ದಿನ ಮಾತ್ರವಲ್ಲದೇ ಯುವಕರು ಪ್ರತಿದಿನ ತಮ್ಮ ಅಂತರಾಳದ ಶಕ್ತಿಯನ್ನು ಅರಿತು, ಸಮಾಜ ನಿರ್ಮಾಣದಲ್ಲಿ ಸಕ್ರಿಯ ಪಾತ್ರವನ್ನು ವಹಿಸಬೇಕಾಗಿದೆ. ಶಾಲೆ, ಕಾಲೇಜು ಮತ್ತು ವಿವಿಧ ಸಂಸ್ಥೆಗಳಲ್ಲಿ ಉಪನ್ಯಾಸಗಳು, ಕ್ರೀಡಾಕೂಟಗಳು ,ರಕ್ತದಾನ ಶಿಬಿರಗಳು ಹಾಗೂ ಸಾಮಾಜಿಕ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಇವು ಯುವ ಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಸಹಾಯಕವಾಗುತ್ತವೆ.
ರಾಷ್ಟ್ರೀಯ ಯುವ ದಿನವು ಕೇವಲ ಆಚರಣೆಗೋಸ್ಕರ ಅಲ್ಲ - ಅದು ಯುವಜನರು ತಮ್ಮ ಕನಸುಗಳನ್ನು ಸಮಾಜದ ಹಿತಕಾಗಿ ಕಾರ್ಯ ರೂಪಕ್ಕೆ ತರಲು ಪ್ರೇರೇಪಿಸುವ ದಿನವಾಗಿದೆ. ಯುವಕರು ದೇಶದ ಶಕ್ತಿ, ಪ್ರಗತಿಯ ಚಾಲಕರು. ಅವರ ದೃಢ ಸಂಕಲ್ಪ ಮತ್ತು ಬದ್ಧತೆ ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವ ಶಕ್ತಿ ಹೊಂದಿದೆ.
ಆದುದರಿಂದ ,ಈ ದಿನದ ಸಾರ್ಥಕತೆ ಎಂದರೆ ನಾವೆಲ್ಲರೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅನುಸರಿಸಿ - ನೈತಿಕತೆ, ಶ್ರದ್ಧೆ ಮತ್ತು ಸೇವೆಯ ಮಾರ್ಗದಲ್ಲಿ ನಡೆಯುವುದು. ಬದುಕನ್ನು ಉದ್ದೇಶ ಪೂರ್ಣವಾಗಿಸಿ ಸಮಾಜಕ್ಕೆ ಬೆಳಕಾಗೋಣ.
ಕೊನೆಯದಾಗಿ ರಾಷ್ಟ್ರೀಯ ಯುವ ದಿನವು "ನಾಳೆಯನ್ನು ಕಾಯಬೇಡಿ ಇಂದೇ ಬದಲಾವಣೆ ಆಗಿ" ಎಂಬ ಮಹತ್ವಪೂರ್ಣವಾದ ಸಂದೇಶವನ್ನು ನೀಡುತ್ತದೆ.
-ಧನ್ಯ ದಾಮೋದರ ಕೊಲ್ಚಾರ್
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


