ಮಾಸ್ಟರ್ ಶೆಫ್ ಜೋಡಿ ಸ್ಪರ್ಧೆಗೆ ನಮ್ಮೂರಿನ ಅವನಿ ಶರ್ಮ ಹಾಗೂ ವೇಣು ಶರ್ಮ

Upayuktha
0


ಮಂಗಳೂರು: ಕರ್ನಾಟಕದ ಗಡಿನಾಡಿನ ಕಾಸರಗೋಡು ಜಿಲ್ಲೆಯ ಅವನಿ ಶರ್ಮ ಹಾಗೂ ವೇಣು ಶರ್ಮ, ಸೋನಿ ಟಿವಿಯ ಈ ಬಾರಿಯ (ಹತ್ತನೇ ಆವೃತ್ತಿ) ಮಾಸ್ಟರ್ ಶೆಫ್ ಸ್ಪರ್ಧೆಯ ಜೋಡಿ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. 


ಕರಾಡ ಬ್ರಾಹ್ಮಣ ಸಮುದಾಯದ ಕುದ್ಕುಳಿ ಮನೆತನದ ಅವನಿ ಶರ್ಮ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ, ಕಲಾ ನಿರ್ದೇಶಕಿಯಾಗಿ ಹಾಗೂ ಆಹಾರ ವಿನ್ಯಾಸಕಿಯಾಗಿಯೂ (ಫುಡ್ ಸ್ಟೈಲಿಸ್ಟ್) ಕಾರ್ಯನಿರ್ವಹಿಸುತ್ತಿದ್ದಾರೆ.


ಬಾಲ್ಯದಿಂದಲೇ ಅಡುಗೆ ಪಾಕಗಳ ಆವಿಷ್ಕಾರಗಳನ್ನು ಮಾಡುತ್ತಾ, ಹೊಸ-ಹೊಸ ಕಲಾತ್ಮಕವಾದ ಪ್ರಯೋಗಗಳನ್ನು ಮಾಡಿರುತ್ತಾರೆ.


ಹಲವು ವರ್ಷಗಳಿಂದ ಕರಾಡ ಸ್ಪೈಸ್ ಬಾಕ್ಸ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಕರಾಡ ಶೈಲಿಯ ಸಸ್ಯಹಾರಿ ಅಡುಗೆಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಕರಾಡ ಅಡುಗೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಅವನಿ ಶರ್ಮ ಅವರ ಮುಖ್ಯ ಉದ್ದೇಶವಾಗಿದೆ.


ಇವರೊಂದಿಗೆ ಜೋಡಿಯಾಗಿ ಸ್ಪರ್ಧಿಸುತ್ತಿರುವವರು ಅವನಿ ಶರ್ಮರ ತಂದೆಯವರಾದ ವೇಣು ಶರ್ಮ, ಉಪ್ಪಂಗಳ. ಅವರು ಮಂಗಳೂರಿನಲ್ಲಿ  ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಇವರಿಬ್ಬರು ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಮುನ್ನಡೆಯುತ್ತಿದ್ದಾರೆ.


ಒಬ್ಬ ತಂದೆಯಾಗಿ ಮಗಳ ಪಾಕ ಪ್ರಾವೀಣ್ಯದಿಂದ ನನ್ನ ಹೆಸರು ಪ್ರಚಲಿತವಾಗುತ್ತಿರುವುದು ಅಭಿಮಾನದ ಹಾಗೂ ಹೆಮ್ಮೆಯ ವಿಷಯ ಎಂದು ವೇಣು ಶರ್ಮ  ಸ್ಪರ್ಧೆಯ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter ಅ

Post a Comment

0 Comments
Post a Comment (0)
To Top