ದಾವಣಗೆರೆ: ಭೂಲೋಕವೇ ಪರಿವರ್ತನೆಯಾಗುವ ಮಧುರ ಕ್ಷಣಗಳು ಮಕರ ಸಂಕ್ರಮಣ ಹಬ್ಬ ಸೂರ್ಯೋದಯ ಸೂರ್ಯಸ್ತಮಾನ ಪರಿಸರ ಸೇರಿದಂತೆ ಬದಲಾವಣೆ ಆಗುತ್ತಿರುವುದು ಈ ನಮ್ಮ ನಿಮ್ಮೆಲ್ಲರ ಪ್ರಕೃತಿಯ ವಾತಾವರಣ ಬೆಲ್ಲ ಎಳ್ಳು ತಿನ್ನುವಂತೆ ದೇವರ ಪೂಜೆಯ ಸದ್ಭಕ್ತರ ಆರೋಗ್ಯ ಭಾಗ್ಯ ಲಭಿಸುತ್ತದೆ. ಈ ಮಕರ ಸಂಕ್ರಮಣದ ಪ್ರಯುಕ್ತ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಹಮ್ಮಿಕೊಂಡಿದ್ದು ಶ್ಲಾಘನೀಯ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ ಅರಿವು ಮೂಡಿದಂತಾಯಿತು ಎಂದು ಡಾ|| ಆರತಿ ಸುಂದರೇಶ್ ತಮ್ಮ ಮನದಾಳದ ಮಾತು ಹೇಳಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಿನ್ನೆ ತಾನೇ ಮಕರ ಸಂಕ್ರಮಣದ ಪ್ರಯುಕ್ತ ದಾವಣಗೆರೆಯ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿಯ ಸಮಾರಂಭವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಡಾ|| ಆರತಿ ಸುಂದರೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ರವರು ಮಾತನಾಡಿ, ಕವಿಗೋಷ್ಠಿಯಲ್ಲಿ ಕೇವಲ ಕವನ ವಾಚನ ಮಾಡುವುದು ಹೊರತುಪಡಿಸಿ ನಮ್ಮ ಕನ್ನಡ ನಾಡಿನ ಸಂಸ್ಕೃತಿಯ ಜತೆಗೆ ಸಾಹಿತ್ಯ, ಕನ್ನಡ ಭಾಷಣೆಯನ್ನು ವೈಭವೀಕರಿಸಬೇಕಾಗಿದೆ ಎಂದರು.
ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷರಾದ ಸುನಿತಾ ಮೃತ್ಯುಂಜಯ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ ಸಂಕ್ರಾಂತಿ ಕೇವಲ ಹಬ್ಬಕ್ಕೆ ಸೀಮಿತವಾಗದೆ ನಮ್ಮ ನಿಮ್ಮೆಲ್ಲರ ಸಾಹಿತ್ಯ ಬರಹದೊಂದಿಗೆ ಸರ್ವ ಹಿರಿಯ, ಕಿರಿಯ, ಕವಿ, ಕವಯತ್ರಿಯವರು ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ, ಪ್ರಾಸಬದ್ಧವಾಗಿ ಕವನ ವಾಚನಮಾಡಿದ್ದು ಈ ರಾಜ್ಯ ಮಟ್ಟದ ಉಚಿತ ಕವಿಗೋಷ್ಠಿ ಸುಸಂಪನ್ನಗೊಂಡಿತು ಎಂದರು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ವಿದುಷಿ ನವ್ಯ ವಾಸುದೇವ ರಾಯ್ಕರ್‍ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ನಿರೂಪಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿ, ಕವಯತ್ರಿಯವರಿಗೆ ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ, ಅಭಿನಂದನಾ ಪತ್ರ, ಕಾವ್ಯಕುಂಚ 5ನೇ ಭಾಗದ ಕವನ ಸಂಕಲನ ವಿತರಿಸಲಾಯಿತು. ಸುಮಾ ಏಕಾಂತಪ್ಪ ಕವನ ವಾಚನ ಮಾಡುವ ಹೆಸರು ಕರೆದರು. ಕೊನೆಯಲ್ಲಿ ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


