18 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಸರ್ಕಾರದ ಸ್ಪಂದನೆಗೆ ಶ್ರೀಗಳ ಆಗ್ರಹ
ಕಲಬುರಗಿ: ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ 18 ಬೇಡಿಕೆಗಳನ್ನು ಒತ್ತಾಯಿಸಿ ಪ್ರಣವಾನಂದ ಶ್ರೀಗಳು ನಡೆಸುವ ಪಾದಯಾತ್ರೆ ಕಲಬುರಗಿ ಯಾದಗಿರಿ ಜಿಲ್ಲೆ ದಾಟಿ ಶಹಪುರವನ್ನು ಪ್ರವೇಶ ಮಾಡಿದೆ.
ಜ.6ರಂದು ಚಿತ್ತಾಪುರದ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಪ್ರಾರಂಭಗೊಂಡ ಪಾದಯಾತ್ರೆ ಚಿತಾಪುರ, ರಾವೂರ, ಶಹಾಬಾದ್, ಜೇವರ್ಗಿ, ಅಂದೋಲ, ಚಿಕ್ಕಮುಡಬಾಳ ಅಳ್ಳಳ್ಳಿ, ಶಹಾಪುರ ರಸ್ತಾಪುರ ಕ್ರಾಸ್ ಬಿರ್ನೂರು ದಾರಿಯಾಗಿ ಸಿರವಾರ ಕ್ರಾಸ್ ಗೆ ಸೋಮವಾರ ತಲುಪಲಿದೆ.ಡಾ ಪ್ರಣವಾನಂದ ಶ್ರೀಗಳ ಜೊತೆಗೆ 130 ಕಿಲೋಮೀಟರ್ ಅಧಿಕ ದೂರ ಭಕ್ತರು ಪಾದಯಾತ್ರೆ ಮಾಡಿದರು. 13ನೇ ತಾರೀಕಿಗೆ ಮಂಗಳವಾರ ಶಿರವಾರ ಕ್ರಾಸ್ ದೇವದುರ್ಗದಲ್ಲಿ ರಾಜ್ಯಪದಾಧಿಕಾರಿಗಳ ಸಭೆ ಮತ್ತು ಮುಂದಿನ ಪ್ರವಾಸಕ್ಕೆ ಸಿದ್ಧತೆ ನಡೆಯಲಿದೆ.. ನಂತರ ಜ 14ರಂದು ಬುಧವಾರ 20ಕೀ ಮೀ ದೂರ ಸಾಗಿ ಶಿರವಾರ ಕ್ರಾಸ್ , ಕೊತ್ತದೊಡ್ಡಿಯಾಗಿ ಜೂಟಮರಡಿಯಲ್ಲಿ ವಾಸ್ತವ್ಯ ಹೂಡಲಾಗುವುದು. ಸಿರವಾರ ಕ್ರಾಸ್ 20 ಕಿಲೋ ಮೀಟರ್ ದೂರ ಪಾದಯಾತ್ರೆಯಲ್ಲಿ ಲಿಂಗಸುಗೂರು ತಾಲೂಕು, ಮಸ್ಕಿ ತಾಲೂಕು ಸಿರಿವಾರ ದೇವದುರ್ಗ ತಾಲೂಕು ಮಧ್ಯದಲ್ಲಿ ಬರುವ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಹಾಗೂ ಸಿರವಾರ ಕ್ರಾಸನಿಂದ ಜೂಟ್ ಮರಡಿವರೆಗೆ 20 ಕಿಲೋಮೀಟರ್ ದೂರ ಪಾದಯಾತ್ರೆಯಲ್ಲಿ ದೇವದುರ್ಗ ತಾಲೂಕು ಸಿರವಾರ ಗುರುಮಿಟ್ಕಲ್ ತಾಲೂಕ್ ಮಧ್ಯದಲ್ಲಿ ಬರುವ ಸ್ಥಳಗಳ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಡಿಗರ ಹೋರಾಟದ ಕಿಚ್ಚು ಮೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿದೆ . ಸಮಾಜವನ್ನು ಸರ್ಕಾರ ಕಡೆಗಣಿಸದೆ ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದನ ನೀಡಬೇಕು ಎಂದು ಡಾ. ಪ್ರಣವಾನಂದ ಶ್ರೀಗಳು ಒತ್ತಾಯಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


