ಇಸ್ರೇಲ್ ಮತ್ತು ಭಾರತ ಎದುರಿಸುತ್ತಿರುವ ಅಪಾಯಗಳಲ್ಲಿ ಸಾಮ್ಯವಿದೆ: ಪತ್ರಕರ್ತ ವಿಶ್ವೇಶ್ವರ ಭಟ್

Upayuktha
0

‘ಬದುಕುಳಿದವರು ಕಂಡಂತೆ’ ಪುಸ್ತಕ ಸಂವಾದದಲ್ಲಿ ಇಸ್ರೇಲ್ ಕುರಿತು ಮೆಚ್ಚುಗೆ



ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ‘ಇಸ್ರೇಲ್ ಮತ್ತು ಭಾರತಕ್ಕೆ ಎದುರಾಗಿರುವ ಅಪಾಯಗಳಲ್ಲಿ ಸ್ವಲ್ಪ ಸಾಮ್ಯವಿದೆ. ಅವರು ಪದೇ ಪದೇ ಆಕ್ರಮಣಕ್ಕೆ ಒಳಗಾಗುತ್ತಾರೆ. ನಾವು ವರ್ಷದಲ್ಲಿ ಹಲವಾರು ಬಾರಿ ಭಯೋತ್ಪಾದಕ ಕೃತಿಗಳಿಗೆ ಒಳಗಾಗುತ್ತೇವೆ. ಆದರೆ ಆ ದೇಶ ಅವರನ್ನು ಕೆಣಕಲು ಬಂದವರಿಗೆ ಸರಿಯಾದ ಪ್ರತೀಕಾರ ಕ್ರಮ ಕೈಗೊಂಡಿದೆ. ಅವರ ದೇಶಪ್ರೇಮ ಮಾದರಿಯಾಗುವಂತಿದೆ. ನಮ್ಮಲ್ಲಿ ಈ ಮೊದಲು ಭಯೋತ್ಪಾದಕ ಕೃತ್ಯಗಳಿಗೆ ಸೂಕ್ತ ಪ್ರತಿಕ್ರಿಯೆಯೇ ನೀಡುತ್ತಿರಲಿಲ್ಲ, ಪ್ರತೀಕಾರ ಸೊನ್ನೆಯಾಗಿತ್ತು’ ಎಂದು ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದರು.


ಅವರು ಬರೆದಿರುವ ‘ಬದುಕುಳಿದವರು ಕಂಡಂತೆ’ ಎಂಬ ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಆ ದೇಶಗಳ ಇತಿಹಾಸವನ್ನು ನೋಡಬೇಕು. ಬಲ ಮತ್ತು ಎಡ ಎಂಬ ಮಸೂರ ಇಟ್ಟುಕೊಂಡು ನೋಡಬಾರದು. ಇಸ್ರೇಲಿಗರ ದೇಶಪ್ರೇಮ ಅಭೂತಪೂರ್ವವಾದದ್ದುಎಂದರು.


ಇಸ್ರೇಲಿಗರನ್ನು ಮೆಚ್ಚಿಕೊಂಡ ಅವರು, ‘ಇಸ್ರೇಲ್ ನ ಶೇ.65 ಭಾಗ ಮರುಭೂಮಿಯಿಂದ ಕೂಡಿದೆ. ಮಂಗಳೂರಿನಲ್ಲಿ ಒಂದು ಗಂಟೆಯಲ್ಲಿ ಬರುವ ಮಳೆ ಅಲ್ಲಿ ಒಂದು ವರ್ಷದಲ್ಲಿ ಬರುತ್ತದೆ. ಆದರೂ ಅವರು ನೀರಾವರಿ ಕುರಿತು ಜಗತ್ತಿಗೆ ಪಾಠ ಮಾಡುತ್ತಾರೆ. ಇಡೀ ವಿಶ್ವದಲ್ಲಿ ಇಸ್ರೇಲಿಗರು ಎಲ್ಲೇ ತೊಂದರೆಗೆ ಒಳಗಾದರೂ ಇಡೀ ರಾಷ್ಟ್ರವೇ ಅವರ ನೆರವಿಗೆ ಧಾವಿಸುತ್ತದೆ’ ಎಂದರು.


ಇಸ್ರೇಲ್ ನ ಅತ್ತ ಇತ್ತ ಇರುವ ಎಲ್ಲಾ ರಾಷ್ಟ್ರಗಳು ಅವರ ವಿರುದ್ದ ದಾಳಿ ಮಾಡಿವೆ. ಅವರು ಯಾವಾಗಲೋ ನಿರ್ಣಾಮ ಆಗಬೇಕಿತ್ತು. ಆದರೆ ಅವರ ಇಚ್ಛಾಶಕ್ತಿಯಿಂದ ಅವರು ಇಂದಿಗೂ ಹೋರಾಡುತ್ತಲೇ ಇದ್ದಾರೆ’ ಎಂದು ಹೇಳಿದರು. ಇಸ್ರೇಲ್ ನ ಭೌಗೋಳಿಕತೆ ಕುರಿತ ಸಂಪೂರ್ಣ ವಿವರ ನೀಡಿದ ಅವರ ಗೋಷ್ಠಿ ಕಿಕ್ಕಿರಿದು ತುಂಬಿತ್ತು.


ಶ್ರೀಕಾಂತ್ ಶೆಟ್ಟಿ ಗೋಷ್ಠಿಯನ್ನು ನಿರ್ವಹಿಸಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top