ಅಪ್ಪ- ಅಮ್ಮನ ಪ್ರೀತಿಯ ಹೂಬಳ್ಳಿ

Upayuktha
0



ಜನ್ಮ ನೀಡಿದ ದೈವಗಳು ನೀವು, ಬದುಕಿನ ಪ್ರತಿ ಹಂತದ ಹಾದಿ ದೀಪ,

ನಿಮ್ಮ ಪ್ರೀತಿಯ ಮಡಿಲಲ್ಲಿ ಕಳೆದ ಕ್ಷಣಗಳೇ ನನಗೊಂದು ಸುಂದರ ರೂಪ ll೦೧ll 


ಒಂದು ದೊಡ್ಡ ಹೃದಯದೊಳಗೆ ಅಡಗಿದೆ ನಿಮ್ಮಿಬ್ಬರ ಮಮತೆಯ ಲೋಕ,

ನಿಮ್ಮ ಮುಗುಳ್ನಗೆಯ ಮುಂದೆ ಮರೆಯಾಗುವುದು ನನ್ನೆಲ್ಲಾ ಶೋಕ ll೦೨ll 


ಹೂವಿನಂತೆ ಅರಳಲಿ ನಿಮ್ಮ ಈ ಬದುಕು, ಎಂದೂ ಬಾಡದಂತೆ,

ನಮ್ಮ ಸಂಸಾರದ ಈ ಸುಂದರ ಹೂದಾನಿ ನಳನಳಿಸಲಿ ಹಸಿರಂತೆ ll೦೩ll 


ತಂದೆ ಎಂದರೆ ಆಕಾಶದಷ್ಟು ಧೈರ್ಯ, ತಾಯಿ ಎಂದರೆ ಭೂಮಿಯಷ್ಟು ತಾಳ್ಮೆ,

ನಿಮ್ಮ ಪ್ರೀತಿಯ ನೆರಳಿನಲ್ಲಿ ಬದುಕುವುದೇ ನನಗೆ ಈ ಜನ್ಮದ ಹೆಮ್ಮೆ ll೦೪ll 


ನೂರು ಕಾಲ ಸುಖವಾಗಿ ಬಾಳಿರಿ, ಯಾವುದೇ ನೋವು ಹತ್ತಿರ ಸುಳಿಯದಂತೆ,

ನನ್ನ ಉಸಿರು ಇರುವವರೆಗೂ ನಿಮ್ಮನ್ನು ಕಾಯುವೆ ಕಣ್ಣ ರೆಪ್ಪೆಯಂತೆ ll೦೫ll 


ಪದಗಳಲಿ ವರ್ಣಿಸಲು ಅಸಾಧ್ಯ ನಿಮ್ಮ ತ್ಯಾಗ ಮತ್ತು ಈ ಮಮತೆ,

ನನ್ನ ಪಾಲಿನ ದೇವರೆಂದರೆ ನೀವೇ, ನನ್ನ ಬಾಳಿನ ಅಮರ ಜ್ಯೋತಿಯಂತೆ ll೦೬ll 


-  ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top