ಡಾ.ಎಂ.ಎಸ್. ದುರ್ಗಾಪ್ರವೀಣ್‌ಗೆ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'

Upayuktha
0


ಕುಪ್ಪಂ: ಸುರ್ವೆ ಕಲ್ಬರಲ್ ಅಕಾಡೆಮಿಯ ಪ್ರತಿಷ್ಟಿತ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'ಗೆ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂನ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಎಂ.ಎಸ್. ದುರ್ಗಾಪ್ರವೀಣ್ ಭಾಜನರಾಗಿದ್ದಾರೆ.


ಸಾಹಿತ್ಯ, ಸಂಶೋಧನೆ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಇವರ 'ಆಧುನಿಕ ಕನ್ನಡ ಸಾಹಿತ್ಯ ಹಾಗೂ ಜನಪ್ರಿಯತೆಯ ಪ್ರಶ್ನೆ', 'ದೂರಸಾರ', 'ಅನುವಾದ-ಅಧ್ಯಯನ', 'ಅನುವಾದ: ಅನುಸಂಧಾನ', 'ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು', 'ತುಳು ವಿಕ್ರಮಾರ್ಕ ಕತೆ', 'ಆಕಾಸದಂಗಡಿತ ಅಮುರ್ತಪಲ', 'ಅಪ್ರಕಟಿತ ತುಳು ಪಾಡ್ಡನಗಳು', 'ತುಳು ಪಂಚತಂತ್ರ' ಮೊದಲಾದ ಕೃತಿಗಳು ವಿದ್ವನ್ನನ್ನಣೆಯನ್ನು ಪಡೆದಿವೆ. 


ಇವರ ಕವನಗಳು ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡು ಮೆಚ್ಚುಗೆ ಗಳಿಸಿವೆ. ಇತ್ತೀಚೆಗೆ ನಯನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ 74ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದ 'ಬುದ್ಧ-ಬಸವ-ಅಂಬೇಡ್ಕರ್' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಸಾಹಿತಿ ಡಾ.ಎಂ.ಲಕ್ಷ್ಮೀನಾರಾಯಣ, ಪತ್ರಕರ್ತ, ರಂಗತಜ್ಞ ರಮೇಶ ಸುರ್ವೆ, ಸಾಹಿತಿ ಡಾ.ಅಶೋಕ ನರೋಡೆ, ಪ್ರೊ.ಎಚ್.ಟಿ.ಪೋತೆ, ಮ.ಚಿ.ಕೃಷ್ಣ, ಉಡುಪಿಯ ಶ್ರೀ ರಮಾನಂದ ಗುರೂಜಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನ ಪಡ್ನೂರಿನವರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top